ಕಿಸ್ ಗಾಗಿ ಪಿಸ್ತೋಲ್ ಹಿಂದೆ ಬಿದ್ದ ’ಉಡಾಳ’

ಕಿಸ್ ಗಾಗಿ ಪಿಸ್ತೋಲ್ ಹಿಂದೆ ಬಿದ್ದ ’ಉಡಾಳ’  'Udala' who fell behind the pistol for a kiss

ತಾಜ್‌ಮಹಲ್ ಪ್ರೀತಿಯ ಸಂಕೇತ ಅಂತಾರೆ. ಹಾಗೆಯೇ ಬಿಜಾಪುರ ಗೋಲ್‌ಗುಂಬಜ್ ಕೂಡ ಪ್ರೀತಿಯ ಸಂಕೇತವೇ. ಇಂತಹ ಐತಿಹಾಸಿಕ ಉರಿಗೆ ಸಾಕಷ್ಟು ಜನ ವಿದೇಶಿಗರು ಬರುತ್ತಾರೆ. ಅಂತವರಿಗೆ ಟೋರಿಸ್ಟ್‌ ಗೈಡ್ ಆಗಿ ಕೆಲಸ ಮಾಡುತ್ತಾ, ಆಟೋ ಒಡಿಸುವವ ಪಕ್ಯಾ (ಪೃಥ್ವಿ ಶಾಮನೂರ). ಅನಾಥನಾದ ಪಕ್ಯಾಗೆ ಪ್ಯಾಮಿಲಿ ಮಾಡಿಕೊಳ್ಳುವ ಆಸೆ. ಜೊತೆಗೆ ಇಷ್ಟಪಡುವ ಹುಡುಗಿಗೆ ಲಿಪ್ ಟು ಲಿಪ್ ಕಿಸ್ ಮಾಡುವ ಆಸೆ. ಅದು ಇಡೇರುತ್ತಾ ಎಂಬ ಆಶಯದ ಮೂಲಕವೇ ಸಾಗುವ ಚಿತ್ರ ’ಉಡಾಳ’.  

ಹೆಸರಿಗೆ ತಕ್ಕಂತೆ ’ಉಡಾಳ’ ಪಕ್ಯಾ ಪಕ್ಕ ಮನರಂಜನಾ ಚಿತ್ರ. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗೆ ಈ ಚಿತ್ರ ತುಂಬಾ ಇಷ್ಟವಾಗುತ್ತದೆ. ಅಲ್ಲಿಯ ಭಾಷೆ, ಬೈಗುಳ, ಸಂದರ್ಭಕ್ಕೆ ತಕ್ಕಂತೆ ಬರುವ ಕಾಮಿಡಿ ಡೈಲಾಗ್‌ಗಳು ಈ ಚಿತ್ರದ ಜಿವಾಳ. ಚಿತ್ರದಲ್ಲಿ ಪಕ್ಯಾ ಹಾಗೂ ಆತನ ಗೆಳೆಯ ಬೆಳ್ಳೋಳಿಯ ಮಾತುಗಳನ್ನು ಕೇಳುವುದೆ ಚಂದ. ಗೈಡ್ ಆಗಿ ಜೀವನ ನಡೆಸುತ್ತಿದ್ದ ಪಕ್ಯಾಗೆ ಚಿಕ್ಕಂದಿನಿಂದ ಪಿಸ್ತೋಲ್ ಕಂಡ್ರೆ ಆಗಲ್ಲ. ಕನಸಿನಲ್ಲಿ ಬಂದ ಹುಡುಗಿ ಎದುರಿಗೆ ಬಂದು, ಅವಳನ್ನು ಒಲಿಸಿಕೊಳ್ಳಲು ಕಾಲೇಜ್‌ಗೆ ಸೇರುತ್ತಾನೆ. ಅಲ್ಲಿ ಸಿನಿಯರ್‌ಗಳಿಂದ ಪಿಂಕಿಗೆ (ಹೃತಿಕಾ ಶ್ರೀನಿವಾಸ್) ರ್ಯಾಗಿಂಗ್ ಆಗುತ್ತದೆ. ಅವಳನ್ನು ಕಾಪಾಡಲು ಹೋಗಿ ಪಿಂಕಿಗೆ ಹತ್ತಿರ ಆಗುತ್ತಾನೆ ಪಕ್ಯಾ. ಮೊದಲೇ ಮುಂಗೋಪಿಯಾದ ಪಿಂಕಿ ಸಿನಿಯರ್ ಮೇಲೆ ಸೇಡು ತಿರಿಸಿಕೊಳ್ಳುವ ಉದ್ದೇಶದಿಂದ ತನಗೊಂದು ಪಿಸ್ತೋಲ್ ತಂದು ಕೋಡುವಂತೆ ಪಕ್ಯಾಗೆ ಕೇಳುತ್ತಾಳೆ. ಮೊದಲೇ ಪಿಸ್ತೋಲ್ ಕಂಡ್ರೆ ಹೆದರುವ ಪಕ್ಯಾ ಪಿಸ್ತೋಲ್ ತಂದು ಕೊಡುತ್ತಾನಾ?  

ಪಿಸ್ತೋಲ್ ತಯಾರಿಸುತ್ತಾ ಬಿಜಾಪುರ ಡಾನ್ ಆಗಿ ಹೆಸರು ಮಾಡಿರುವ ಮಾರ್ತಾಂಡ ಸಾಠೆ (ಬಲ ರಾಜ್ವಾಡಿ) ಹೇಗೆ ಪಕ್ಯಾ-ಪಿಂಕಿ ಲೈಪ್‌ಗೆ ಬರುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಸಿನಿಮಾ ನೋಡಲೇ ಬೇಕು. ಸಂಪೂರ್ಣ ಮನರಂಜನಾ ದೃಷ್ಟಿಯಿಂದ ಸಿದ್ದಪಡಿಸಿರುವ ’ಉಡಾಳ’ದಲ್ಲಿ ಹಾಸ್ಯಕ್ಕೆನೂ ಕೊರತೆ ಇಲ್ಲ. ಜೊತೆಗೆ ಕಲಾವಿದರ ಅಭಿನಯ ಕೂಡ ಚನ್ನಾಗಿದೆ. ಅದರಲ್ಲೂ ಪೃಥ್ವಿ ಮೊದಲ ಚಿತ್ರಕ್ಕಿಂತ ಅಭಿನಯದಲ್ಲಿ ಪಳಗಿದ್ದಾರೆ. ಉಡಾಳರಾಗಿ ಪೃಥ್ವಿ ಹಾಗೂ ಆತನ ಗೆಳೆಯ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಪಿಂಕಿಯಾಗಿ ಹೃತಿಕಾ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ಅಲ್ಲಲಿ ಬರುವ ಹಾಡುಗಳು ಕಿವಿಗೆ ಇಂಪಾಗಿವೆ. ಜೊತೆಗೆ ಕಣ್ಣಿಗೆ ತಂಪು ಕೊಡುವಂತೆ ಛಾಯಾಗ್ರಹಣವಿದೆ. ಚಿತ್ರದಲ್ಲಿ ಇರುವ ಒಂದೇ ಒಂದು ಕೊರತೆ ಎಂದರೆ ಸ್ಟ್ರಾಂಗ್ ಆದ ಕಥೆ ಇಲ್ಲದೆ ಇರುವುದು. ಹಾಗಂತ ಇದು ಒಳ್ಳೆಯ ಸಿನಿಮಾ ಅಲ್ಲವೆ! ಎಂದುಕೊಳ್ಳಬೇಡಿ. ಕಂಡಿತಾ ’ಉಡಾಳ’ ಇಂದು ಉತ್ತರ ಕರ್ನಾಟಕ ಭಾಷಾ ಶೈಲಿಯ ಮನರಂಜಾ ಸಿನಿಮಾ ಎನ್ನುವುದರಲ್ಲಿ ದುಸರಾ ಮಾತಿಲ್ಲ.  

ರೇಟಿಂಗ್‌: 3.5/5 ಚಿತ್ರ: ಉಡಾಳ ನಿರ್ದೇಶನ: ಅಮೋಲ್ ಪಾಟೀಲ್ ನಿರ್ಮಾಣ: ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ತಾರಾಗಣ: ಪೃಥ್ವಿ ಶಾಮನೂರು, ಹೃತಿಕಾ ಶ್ರೀನಿವಾಸ್, ಬಲ ರಾಜ್ವಾಡಿ, ಮಾಳು ನಿಪ್ನಾಳ, ಹರೀಶ್ ಹಿರಿಯೂರು, ಸುಮಿತ್ ಸಂಕೋಜಿ, ವಾದಿರಾಜ್ ಬಬ್ಲಾಡಿ, ಪ್ರವೀಣ್ ಗಸ್ತಿ, ಗೋವಿಂದೇಗೌಡ, ದಯಾನಂದ ಬೀಳಗಿ, ರೇಣುಕಾ, ಶ್ರೀಧರ್, ದಾನಪ್ಪ, ಸೋನಿಯಾ, ಬಿರಾದಾರ್ ಮುಂತಾದವರು. 9379298454ಖಿಜಟಜಠಿಠಜ: 080-23108454