‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’
'The contribution of the Banajigas to the development of society is immense'
ಲೋಕದರ್ಶನ ವರದಿ
ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣಾ ಆಚರಣೆ
ಮೂಡಲಗಿ 16 : ‘ಒಗ್ಗಟ್ಟು ಮತ್ತು ಸಂಘಟನೆಯ ಮೂಲಕ ಬಣಜಿಗ ಸಮಾಜವನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದು ಮೂಡಲಗಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಶೆಟ್ಟರ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ಘಟಕದಲ್ಲಿ ಬಣಜಿಗ ಸಂಘದ 23ನೇ ಷರ್ಷದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ನಾಡಿನ ಅನೇಕ ಸಂಘ, ಸಂಸ್ಥೆಗಳ ಸ್ಥಾಪಿಸಿ ಅವುಗಳ ಬೆಳವಣಿಗೆ, ಮಠ ಮಾನ್ಯಗಳ ಬೆಳವಣಿಗೆ ಹಾಗೂ ಸಮಾಜಕ್ಕೆ ಬಣಜಿಗ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.
ಬಣಜಿಗ ಸಮಾಜದ ಸಂಘಟನೆ ಮತ್ತು ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಬರುವ ಮಾ. 8 ರಂದು ಬಣಜಿಗ ಸಮಾಜದ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆಯನ್ನುಆಚರಿಸಲಾಗುವುದು ಎಂದರು. ಪುರಸಭೆ ಮಾಜಿ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ ಕರ್ನಾಟಕ ರಾಜ್ಯಕ್ಕೆ ಈ ಹಿಂದೆ 7 ಜನ ಮುಖ್ಯಮಂತ್ರಿಗಳು ಬಣಜಿಗ ಸಮಾಜದವರಾಗಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ಸಮಾಜದಲ್ಲಿ ಆರ್ಥಿಕ ದುರ್ಭಲರನ್ನು ಮುನ್ನೆಲೆಗೆ ತರುವುದು, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆಯುವ ಮೂಲಕ ಸಮಾಜವನ್ನು ಬೆಳೆಸುವುದಕ್ಕಾಗಿ ಸಂಘಟನೆ ಅವಶ್ಯವಿದೆ ಎಂದರು.
ಭಾರತೀಯ ಆಹಾರ ನಿಗಮದ ಸಲಹಾ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಮಸಗುಪ್ಪಿಯ ಬಸವರಾಜ ಗಾಡವಿ, ಮೂಡಲಗಿ ತಾಲ್ಲೂಕು ದಸ್ತ ಬರಹಗಾರರು (ಬಾಂಡ್‌ರೈಟರ್) ಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಿಂಗಪ್ಪ ಗಾಡವಿ ಅವರನ್ನು ಸನ್ಮಾನಿಸಿದರು. ಸಂಘದ ಅಧ್ಯಕ್ಷ ಶಿವಪ್ಪ ಭುಜನ್ನವರ, ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಶಿವಾನಂದ ಗಾಡವಿ, ಅಶೋಕ ವಾಣಿ, ಶಂಕರ್ಪ ತಾಂವಶಿ, ಶೆಟ್ಟೆಪ್ಪ ಗಾಡವಿ, ಶಿವಬಸು ನೀಲಣ್ಣವರ, ಬಿ.ಜಿ. ಜಕಾತಿ, ಪ್ರಕಾಶ ಶೀಲವಂತ, ಸಂಗಪ್ಪ ಅಂಗಡಿ, ಮಹಾಂತೇಶ ಅಂಗಡಿ,ಈರಣ್ಣ ಜಕಾತಿ, ಪ್ರಕಾಶ ವಾಣಿ, ಸೋಮೇಶ್ವರ ಅಂಗಡಿ, ಅಶೋಕ ವಾಣಿ, ಬಾಲಶೇಖರ ಬಂದಿ, ಯುವ ಸಂಘದ ಅಧ್ಯಕ್ಷ ವಿಶ್ವನಾಥ ಬೆಲ್ಲದ, ಉಪಾಧ್ಯಕ್ಷ ಈರಣ್ಣ ಕೋತಿನ, ಸುಭಾಷ ಅವಟಿ, ಶಿವಯೋಗೆಪ್ಪ ಸಬರದ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ವಾಣಿ, ಉಪಾಧ್ಯಕ್ಷೆ ರಾಜೇಶ್ವರಿ ಗಾಡವಿ, ಪ್ರಧಾನ ಕಾರ್ಯದರ್ಶಿ ರಜನಿ ಬಂದಿ, ಮಂಜುಳಾ ಭುಜನ್ನವರ ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್ : ಮೂಡಲಗಿಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಲ್ಲಿ ಬಣಜಿಗ ಸಮಾಜದ ರಾಜ್ಯ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 