‘ಭಾರತವನ್ನು ವಿಶ್ವಮಟ್ಟಕ್ಕೇರಿಸಿದ ವಾಸ್ತುಶಿಲ್ಪ ಕಲೆ’

‘ಭಾರತವನ್ನು ವಿಶ್ವಮಟ್ಟಕ್ಕೇರಿಸಿದ ವಾಸ್ತುಶಿಲ್ಪ ಕಲೆ’ 'The art of architecture that elevated India to world-class status'


ಯರಗಟ್ಟಿ, 01 : ವಿಶ್ವದಲ್ಲಿಯೇ ಭಾರತದ ಶ್ರೀಮಂತ ವಾಸ್ತುಶಿಲ್ಪ ಗಮನಸೆಳೆಯುತ್ತದೆ. ಅದರಿಂದಾಗಿ ಭಾರತ ವಿಶ್ವದೆದುರು ಸಾಂಸ್ಕೃತಿಕ ದೇಶವೆಂದು ಗುರುತಿಸಿಕೊಂಡಿದ್ದು, ಅದಕ್ಕೆ ಅಮರಶಿಲ್ಪಿ ಜಕಣಾಚಾರಿ ಅವರು ನೀಡಿದ ಕೊಡುಗೆಯೇ ಕಾರಣ ಎಂದು ಹೆಚ್ಚುವರಿ ತಹಶೀಲ್ದಾರ ಎಮ್ ವ್ಹಿ ಅಭಿಪ್ರಾಯಪಟ್ಟರು.ತಾಲೂಕಾ ಆಡಳಿತದಿಂದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆಬೀಡು, ಪಟ್ಟದಕಲ್ಲು, ಐಹೊಳೆ ಸೇರಿ ಹಲವು ಪ್ರದೇಶಗಳಲ್ಲಿ ಜಕಣಾಚಾರಿ ಅವರು ಮೂಡಿಸಿದ ಶಿಲ್ಪಕಲೆಯು ಜಗತ್ತನ್ನು ಸೆಳೆಯುತ್ತಿದೆಎಂದು ಹೇಳಿದರು. 

ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಚಿದಾನಂದ ಪತ್ತಾರ, ಅರ್ಜುನ್ಳ ಕಂಬಾರ, ದೇವೇಂದ್ರ ಕಮ್ಮಾರ, ವಿಠ್ಠಲ ಬಡಿಗೇರ, ಪ್ರಮೋದ ಬಡಿಗೇರ, ಮೌನೇಶ ಬಡಿಗೇರ, ನಾರಾಯಣ ಬಡಿಗೇರ, ಸಂತೋಷ ಕಂಬಾರ, ಮಂಜುನಾಥ ಬಡಿಗೇರ, ಶಂಕರ ಕಂಬಾರ, ನಾಮದೇವ ಕಂಬಾರ, ದ್ಯಾವಪ್ಪ ಬಡಿಗೇರ, ಗಣೇಶ ಬಡಿಗೇರ, ಮಲ್ಲಪ್ಪ ಬಡಿಗೇರ, ಪ್ರಕಾಶ ಹುಂಚಿಕಟ್ಟಿ, ಲಕ್ಷ್ಮಣ ಬಡಿಗೇರ, ಜೀವನ ಪತ್ತಾರ, ಪಾಂಡು ಕಂಬಾರ, ಆನಂದ್ ಬಡಿಗೇರ ಸೇರಿದಂತೆ ತಹಶೀಲ್ದಾರ ಕಚೇರಿ ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.