‘ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಮಾಜ ಎಚ್ಚರಗೊಳ್ಳಬೇಕಾಗಿದೆ’

‘ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಮಾಜ ಎಚ್ಚರಗೊಳ್ಳಬೇಕಾಗಿದೆ’ 'Society needs to wake up to the protection of women and children'

ಬೆಳಗಾವಿ 25: ಮೈ ಚಾಯ್ಸ ಫೌಂಡೇಶನ ಹೈದರಾಬಾದ ಇವರ ಸಹಕಾರದಿಂದ ಆಪರೇಷನ ರೆಡ ಅಲರ್ಟ್‌ ಯೋಜನೆ ಅಡಿಯಲ್ಲಿ ಬೆಳಗಾವಿಯ ಮಹಿಳಾ  ಕಲ್ಯಾಣ ಸಂಸ್ಥೆಯು  ಖಾನಾಪುರ ತಾಲೂಕಿನಲ್ಲಿ ನಿಟ್ಟೂರು ಗ್ರಾಮದಲ್ಲಿ ಶನಿವಾರ  ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಣಿಕೆ  ತಡೆಗಟ್ಟುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 

ಮುಖ್ಯ ಅತಿಥಿಯಾದ  ಸುರೇಖಾ ಪಾಟೀಲ ಅವರು ಇಂದಿನ ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳು ಅತೀ ಹೆಚ್ಚು ಅಪಾಯಕ್ಕೆ ಗುರಿಯಾಗುತ್ತಿದ್ದಾರೆ.  ಕಳ್ಳಸಾಗಣೆ, ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಅಪ್ರಾಪ್ತ  ವಯಸ್ಸಿನ ಪ್ರೇಮ ಪ್ರಕರಣಗಳು, ಕಾಣೆಯಾದ ಮಕ್ಕಳು ಇತ್ಯಾದಿ ಸಮಸ್ಯೆಗಳು ದಿನೇದಿನೇ ಹೆಚ್ಚುತ್ತಿದ್ದು, ಸಮಾಜವು ತಕ್ಷಣ ಎಚ್ಚರಗೊಳ್ಳಬೇಕಾದ ಅಗತ್ಯವಿದೆ.  

ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಕೇವಲ ಸರ್ಕಾರದಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿಭಾಯಿಸಬೇಕಿದೆ. ಮಕ್ಕಳಿಗೂ  ಇದರ ಬಗ್ಗೆ ಜಾಗೃತಿ ನೀಡಬೇಕಾಗಿದೆ. ಇಂದು ನಾವು  ಎಚ್ಚರಗೊಳ್ಳದಿದ್ದರೆ, ನಾಳೆಯ ಸಮಾಜ ಸುರಕ್ಷಿತವಾಗುವುದಿಲ್ಲ ಎಂದು ಮಾತನಾಡಿದರೂ. ಬಸವರಾಜ ಗುಗ್ಗರಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.  

 ಸಿ ಕೆ ಪಾಟೀಲ, ಆರ್ ಎಲ್ ಬನಾಡಿ, ನಾನು ನಾರ್ವಿಕರ, ದಶರಥ ಗಣೇಬೈಲೂರ  ಸುವರ್ಣ ಪಾಟೀಲ, ನಾಗೇಶ ನಾರ್ವೆಕರ, ಗ್ರಾಮ ಪಂಚಾಯತಿ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು, ಹಿರಿಯ ಪ್ರಾಥಮಿಕ ಮರಾಠಿ ಶಾಲೆ ನಿಟ್ಟೂರ ಸಿಬ್ಬಂದಿ ಬಳಗದವರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.