ಬೆಂಗಳೂರು, ನ.11 : ವರ್ತಕರ ಸಬಲೀಕರಣಕ್ಕೆ ಶ್ರಮಿಸುವ ಅಂತಾರಾಷ್ಟ್ರೀಯ ಇ-ಕಾಮರ್ಸ್ ವೇದಿಕೆ ಶ್ಯಾಪ್ ಮ್ಯಾಟಿಕ್ ಇದೀಗ ಸಣ್ಣ ವರ್ತಕರ 'ದಾಸ್ತಾನು ನಿರ್ವಹಣೆ' ಹಾಗು ಆರ್ಡರ್ ಜನರೇಷನ್ ಕಾರ್ಯ ತ್ವರಿತವಾಗಿಸಲು ಶ್ಯಾಪ್ ಮ್ಯಾಟಿಕ್ ಪಾಯಿಂಟ್ ಆಫ್ ಸೇಲ್ (ಪಿಒಎಸ್) ವೈಶಿಷ್ಟ್ಯವನ್ನು ಪರಿಚಯಿಸಿದೆ.
ಶ್ಯಾಪ್ ಮ್ಯಾಟಿಕ್ ಸಂಸ್ಥೆಯು ಜೊತೆಗೆ ಒಪ್ಪಂದ ಕೂಡ ಮಾಡಿಕೊಂಡಿದ್ದು, ಇದರಿಂದ ವರ್ತಕರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಮಾರ್ಕೆಟಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಫೇಸ್ಬುಕ್, ಗೂಗಲ್ ಸೇರಿದಂತೆ ಮತ್ತಿತರ ಜಾಲ ತಾಣಗಳಲ್ಲಿ ವರ್ತಕರ ವ್ಯಾಪಾರದ ಬಗ್ಗೆ ಮಾರ್ಕೆಟಿಂಗ್ ಮಾಡಿ ವಹಿವಾಟು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.
ವಸ್ತುಪ್ರದರ್ಶನ, ಫ್ಲಿಮಾರ್ಕೆಟ್ ಸೇರಿದಂತೆ ಹೊರಗಡೆ ವ್ಯಾಪಾರಕ್ಕೆ ಹೋದ ಸಂದರ್ಭದಲ್ಲಿ ಶ್ಯಾಪ್ ಮ್ಯಾಟಿಕ್ ಪಿಒಎಸ್ ವರ್ತಕರಿಗೆ ಬಹಳ ಸಹಕಾರಿ. ಸ್ವೀಕರಿಸಿದ ಆರ್ಡರ್ ಗಳ ತ್ವರಿತ ವಿವೇವಾರಿ ಮಾಡಲು ಮತ್ತು ದಾಸ್ತಾನು ನಿರ್ವಹಣೆಗೆ ಈ ಶ್ಯಾಪ್ ಮ್ಯಾಟಿಕ್ ಪಿಒಎಸ್ ಬಹಳ ಪ್ರಯೋಜನಕಾರಿ.
"ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ನಮ್ಮ ವರ್ತಕರ ವ್ಯಾಪಾರವನ್ನು ವೃದ್ಧಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಶ್ಯಾಪ್ ಮ್ಯಾಟಿಕ್ ಪಿಒಎಸ್ ಮತ್ತು ಜೊತೆಗಿನ ತಮ್ಮ ಒಪ್ಪಂದವನ್ನು ಘೋಷಿಸಲು ನಮಗೆ ಸಂತಸವಾಗುತ್ತಿದೆ" ಎಂದು ಶ್ಯಾಪ್ ಮ್ಯಾಟಿಕ್ ನ ಸಹ ಸಂಸ್ಥಾಪಕ ಹಾಗು ಸಿಇಒ ಅನುರಾಗ್ ಅವುಲ ತಿಳಿಸಿದ್ದಾರೆ.