ಹುಲ್ಲತ್ತಿಯಲ್ಲಿ `ಕಾಡು ಉಳಿಸಿ ನಾಡು ಬೆಳೆಸಿ` ಜನಜಾಗೃತಿ ಅಭಿಯಾನ
'Save the forest, cultivate the country' public awareness campaign in Hullathi
ರಾಣೇಬೆನ್ನೂರು 26 : ತಾಲೂಕಿನ ಇತಿಹಾಸ ಪ್ರಸಿದ್ಧ, ಇನ್ನರ್ವ್ಹಿ ಲ್ ಸೇವಾ ಸಂಸ್ಥೆಯ ದತ್ತು ಗ್ರಾಮ ತಾಲೂಕಿನ ಹುಲ್ಲತ್ತಿ ಗೆ, ಇಂದು ಅಧ್ಯಕ್ಷ ಪದಾಧಿಕಾರಿಗಳು ಭೇಟಿ ನೀಡಿ, ಗ್ರಾಮದಲ್ಲಿ " ಕಾಡು ಉಳಿಸಿ ನಾಡು ಬೆಳೆಸಿ " ಪರಿಸರ ಜಾಗೃತಿ ಅಭಿಯಾನ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇನ್ನರ್ ವ್ಹಿಲ್ ಸೇವಾ ಸಂಸ್ಥೆಯ ಅಧ್ಯಕ್ಷ ಡಾ. ದೀಪಾಲಿ ಪುನಿತ ಅವರು, ಗ್ರಾಮೀಣ ಪ್ರದೇಶಗಳಲ್ಲಿ, ಆರೋಗ್ಯ. ಶಿಕ್ಷಣ, ಪರಿಸರ, ಮತ್ತು ಮಕ್ಕಳ ಸರ್ವಾಂಗಿಣ ಬೆಳವಣಿಗೆಗಾಗಿ ಸಂಸ್ಥೆಯು ಒಂದು ವರ್ಷ ದತ್ತು ಪಡೆದಿದ್ದು, ಈ ಮೂಲಕ ಹತ್ತು ಹಲವು ಕಾರ್ಯಕ್ರಮಗಳು ಗ್ರಾಮದಲ್ಲಿ ಆಯೋಜಿಸುತ್ತ ಬರಲಾಗಿದೆ ಎಂದರು.
ಇಂದಿನ ಜಾಗತಿಕ ತಾಪಮಾನದ ಪರಿಣಾಮ, ಮಾನವ ಜೀವಿ ಅನೇಕ ಸಮಸ್ಯೆಗಳಿಂದ ಬಳಲುವಂತಾಗಿದೆ. ಪರಿಸರ ಉಳಿದರೆ ನಾವೆಲ್ಲರೂ ಸುಖ, ಸಂತೋಷ, ನೆಮ್ಮದಿಯಿಂದ ಜೀವನ ಸಾಗಿಸಬಹುದು. ಪರಿಸರದಲ್ಲಿ ಏರುಪೇರಾದರೆ ಇಡಿ ವ್ಯವಸ್ಥೆಯೇ ಏರು ಪೇರಾದಂತೆ ಎನ್ನುವ ಜಾಗೃತಿ ನಮ್ಮೆಲ್ಲರಲ್ಲಿ ಮೂಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ, ಭೇಟಿ ನೀಡಿದ ಪದಾಧಿಕಾರಿಗಳು, ಅಲ್ಲಿ ನಡೆಯುತ್ತಿರುವ, ಸಂಸ್ಥೆ ಪ್ರಾಯೂಜಕತ್ವದ ಸಂಗಮರಿ ಕಲ್ಲಿನ ನೆಲಹಾಸು ಕಾಮಗಾರಿಯನ್ನು ಪರೀಶೀಲಿಸಿದರು. ಸಂಸ್ಥೆಯ ಕಾರ್ಯದರ್ಶಿ, ಶ್ರೀಮತಿ ಪುಷ್ಪ ಮಾಳಗಿ, ಶ್ರೀಮತಿ ಸಂಜನಾ ಕುರುವತ್ತಿ, ಪದಾಧಿಕಾರಿಗಳಾದ ಶ್ರೀಮತಿ ಕವಿತಾ ಬದಾಮಿ, ಮಾಲಾ ಎಂ, ಶ್ರೀಮತಿ ಗರಿಮಾ, ಶ್ರೀಮತಿ ಮಂಗಳಾ ಕೊಟ್ಟೂರ, ಶ್ರೀಮತಿ ಸುಜಾತ ಮಾಳಗಿ ಗ್ರಾಮದ ಮುಖಂಡರಾದ ಜಗದೀಶ್ ಕೆರೋಡಿ ಮಾರುತಿ ದೊಡ್ಡಮನಿ, ಮಂಜಪ್ಪ ಗುಗ್ಗರಿ, ಕರಬಸಪ್ಪ ವಡ್ಡರ, ಶಿವಪ್ಪ ಕೆರೋಡಿ, ಮಲ್ಲೇಶ್ ಪೂಜಾರ ಸೇರಿದಂತೆ ಮತ್ತಿತರ ಗಣ್ಯರು ಇನ್ನರ್ ವ್ಹಿಲ್ ಸದಸ್ಯರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 