ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಜಯಪುರ ವಿದ್ಯಾರ್ಥಿಗೆ ‘ಸಾಧನಶ್ರೀ’ ಪ್ರಶಸ್ತಿ

ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಜಯಪುರ ವಿದ್ಯಾರ್ಥಿಗೆ ‘ಸಾಧನಶ್ರೀ’ ಪ್ರಶಸ್ತಿ  'Sadhanashri' Award for Vijayapura Student at International Karate Championship

ವಿಜಯಪುರ 28: ಭಾರತೀಯ ಡ್ರೀಮ್ ವರ್ಲ್ಡ ಮಾರ್ಷಲ್ ಆರ್ಟ್ಸ ಟ್ರಸ್ಟ್‌ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಆಯೋಜಿಸಿದ್ದ 2ನೇ ಅಂತರರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಜಯಪುರ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ವಿಕ್ರಾಂತ್ ಶಿವಕುಮಾರ್ ಶಾರದಳ್ಳಿಗೆ ‘ಸಾಧನಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.  ಕರಾಟೆ ಹಾಗೂ ಸ್ಕೇಟಿಂಗ್ ಕ್ಷೇತ್ರಗಳಲ್ಲಿ ವಿಕ್ರಾಂತ್ ಶಾರದಳ್ಳಿ ತೋರಿದ ಅತ್ಯುತ್ತಮ ಸಾಧನೆ, ಪ್ರತಿಭೆ ಹಾಗೂ ನಿರಂತರ ಪರಿಶ್ರಮವನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.  

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಡ್ರೀಮ್ ವರ್ಲ್ಡ ಮಾರ್ಷಲ್ ಆರ್ಟ್ಸ ಟ್ರಸ್ಟ್‌ ಅಧ್ಯಕ್ಷ ಡಾ. ಶಿಹಾನ್ ಜಬೇಯುಲ್ಲಾ, ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಟ್ಟೆ ಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ಸತೀಶ್ ಬೆಳಮಣ್ಣು ಹಾಗೂ ವಿಶಾಲ್ ನಾಯಕ, ಕಾರ್ಯದರ್ಶಿ ಮೌನೇಶ್ ಒಡಟ್ಟಿ, ನೇಪಾಳ ಮತ್ತು ಶ್ರೀಲಂಕಾದ ಕರಾಟೆ ಶಿಕ್ಷಕರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕರಾಟೆ ತರಬೇತುದಾರರು ಉಪಸ್ಥಿತರಿದ್ದರು.  

ಶಾಲಾ ಆಡಳಿತದಿಂದ ಅಭಿನಂದನೆ  

ವಿಕ್ರಾಂತ್ ಶಾರದಳ್ಳಿಯ ಸಾಧನೆಗೆ ಮುಧೋಳ ತಾಲ್ಲೂಕಿನ ಬಿ.ಎ.ಎಸ್‌. ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷ ಮಹಾಂತಗೌಡ ಬಿರಾದಾರ, ಕಾರ್ಯದರ್ಶಿ ಸುಮಂಗಳಾ ಬಿರಾದಾರ, ನಿರ್ದೇಶಕರಾದ ಶಿವನಗೌಡ ಬಿರಾದಾರ, ಗೀತಾ ಬಿರಾದಾರ ಹಾಗೂ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಅಭಿನಂದನೆ ಸಲ್ಲಿಸಿದ್ದಾರೆ.