ರೈತ ಹೋರಾಟಗಾರರಾದ ಶಶಿಕಾಂತ ಗುರೂಜಿ, ಚೂನಪ್ಪ ಪೂಜಾರಿಗೆ ‘ರೈತ ನೇತಾರ’ ಪ್ರಶಸ್ತಿ

ರೈತ ಹೋರಾಟಗಾರರಾದ ಶಶಿಕಾಂತ ಗುರೂಜಿ, ಚೂನಪ್ಪ ಪೂಜಾರಿಗೆ ‘ರೈತ ನೇತಾರ’ ಪ್ರಶಸ್ತಿ 'Raitha Netara' (Farmer Leader) Award for farmer activists Shashikant Guruji and Chunappa Pujari

ರಾಯಬಾಗ 28 : ರೈತ ಹೋರಾಟದಲ್ಲಿ ಮಂಚೂಣಿಯಲ್ಲಿರುವ ಶಶಿಕಾಂತ ಗುರೂಜಿ ಮತ್ತು ಚೂನಪ್ಪ ಪೂಜಾರಿ ಈ ಇಬ್ಬರು ನಾಯಕರು ಸದಾ ರೈತರ ಪರ ಕಾಳಜಿವುಳ್ಳರಿವುದು ನಮಗೆ ಹೆಮ್ಮೆ ಅನ್ನಿಸುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀ ಹೇಳಿದರು.  ಸೋಮವಾರ ರಾತ್ರಿ ಪಟ್ಟಣದ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು   ಮಠದಿಂದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಅವರಿಗೆ ’ರೈತ ನೇತಾರ’ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರಿಗೆ ’ರೈತ ನಾಯಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಈ ಇಬ್ಬರು ರೈತ ನಾಯಕರು, ಗುರ್ಲಾಪುರ ಹೋರಾಟದಿಂದ ಇಡೀ ರಾಜ್ಯ ಮತ್ತು ರಾಷ್ಟ್ರವೇ ಗುರ್ಲಾಪುರ ಕಡೆ ನೋಡುವ ಹಾಗೆ ಮಾಡಿತು, ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯವನ್ನು ಮಾಡಿದ್ದಾರೆ ಎಂದರು.   ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಡಿ.ಎಮ್‌. ಐಹೊಳೆ ಅವರು, ನಾನು ಒಬ್ಬ ರೈತನ ಮಗನಾಗಿದ್ದರಿಂದ, ನಾನು ಕೂಡ ಗುರ್ಲಾಪುರ ರೈತರ ಹೋರಾಟದಲ್ಲಿ ಭಾಗಿ ಆಗಿ ಬಂದವನು. ರೈತರು ನೆಮ್ಮದಿಯಿಂದ ಇರಬೇಕು ಎಂದರೆ ನಾವೆಲ್ಲ ರೈತರ ಪರ ನಿಲ್ಲಬೇಕು. ಇವತ್ತು ಹುಕ್ಕೇರಿ ಹಿರೇಮಠ ಸಠ್ಥಾನದಿಂದ ಇಬ್ಬರು ರೈತ ಹೋರಾಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಅತೀವ ಸಠಸ ತಂದಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೈತ ನೇತಾರ ಶಶಿಕಾಂತ ಗುರೂಜಿ, ಏನೇ ಕಾರ್ಯ ಮಾಡಲಿ ಗುರುಗಳ ಆಶೀರ್ವಾದ ಬೇಕು. ಇವತ್ತು ನನಗೆ ರೈತ ನೇತಾರ ಎನ್ನುವ ಪ್ರಶಸ್ತಿಯನ್ನು ನೀಡಿದ್ದಾರೆ. ನನ್ನ ಜೀವ ಇರುವರೆಗೂ ರೈತರಿಗಾಗಿಯೇ ಹೋರಾಡುತ್ತೇನೆ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೈತ ನಾಯಕ ಚೂನಪ್ಪ ಪೂಜಾರಿ, ಹುಕ್ಕೇರಿಯ ಗುರುಶಾಠೇಶ್ವರ ಸಂಸ್ಥಾನ ಮಠದ   ರೈತರ ಮತ್ತು ಸಮಾಜದ ಜೊತೆಗೆ ಬೆರೆತು, ಅವರ ಬಗ್ಗೆ ಸದಾ ಕಾಳಜಿ ಹೊಂದಿರುವ ಸ್ವಾಮೀಜಿಯಾಗಿದ್ದಾರೆ, ಹಾಗೆಯೇ ನಮ್ಮಂತಹ ಹೋರಾಟಗಾರರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿ ನನಗೆ ರೈತ ನಾಯಕ ಪ್ರಶಸ್ತಿ ನೀಡಿ, ಆಶೀರ್ವಾದ ಮಾಡಿದ್ದಾರೆ,

ಇದರಿಂದ ಇನ್ನು  ಜವಾಬ್ದಾರಿ ಹೆಚ್ಚಿದೆ. ಬರುವ ದಿನಗಳಲ್ಲಿ ಬಾಕಿ ಉಳಿದಿರುವ ಈ ಭಾಗದ ಏತ ನೀರಾವರಿ ಯೋಜನೆ ಶೀಘ್ರ ಜಾರಿಗಾಗಿ ಹೋರಾಟಗಾರ ನಡೆಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ರನ್ನ ಬೆಳಗಲಿಯ ಡಾ. ರಮೇಶಕುಮಾರ ಶಾಸ್ತ್ರೀ, ಯುವ ಧುರಿಣ ಅರುಣ ಐಹೊಳೆ, ಶಿವಾನಂದ ಐಹೊಳೆ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ​‍್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಲಕ್ಕಪ್ಪ ಜೋಡಟ್ಟಿ, ವಿಜಯ ನಾಯಿಕ, ರವಿ ಕುಗ್ಗೆಜಿ, ಮನೋಜ ಮನಗುಳಿ, ನಿಂಗಪ್ಪ ಪಕಾಡಿ, ಸಿದ್ರಾಮ ಪಡಾಳೆ, ಪ್ರಕಾಶ ಕರೆಪ್ಪಗೋಳ ಹಾಗೂ ರೈತರು ಇದ್ದರು  ಪಟ್ಟಣದ ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾ ಮಠದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಅವರಿಗೆ ’ರೈತ ನೇತಾರ’ ಹಾಗೂ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರಿಗೆ ’ರೈತ ನಾಯಕ’ ಪ್ರಶಸ್ತಿಯನ್ನು ನೀಡಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗೌರವಿಸಿದರು.