ಜನಮನಸೂರೆಗೊಂಡ ‘ಪ್ರಮೀಳಾ ದರ್ಬಾರ್’ ನಾಟಕ
'Pramila Durbar' drama which became popular
ಬಳ್ಳಾರಿ, ಸೆ.3: ತಾಲೂಕಿನ ಬೆಳಗಲ್ಲು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರೆಯ ಪ್ರಯುಕ್ತ ‘ಪ್ರಮೀಳಾ ದರ್ಬಾರ್ ಅಥವಾ ಅರ್ಜುನನ ಗರ್ವಭಂಗ’ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ಕೃಪಾಪೋಷಿತ ಕರ್ನಾಟಕ ನಾಟಕ ಮಂಡಳಿ, ಬೆಳಗಲ್ಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರ ಸಹಯೋಗದಲ್ಲಿ ಆಗಸ್ಟ್ 29ರಂದು ರಾತ್ರಿ 8.30ಕ್ಕೆ ನಾಟಕ ಪ್ರದರ್ಶನ ನಡೆಯಿತು ಎಂದು ನಾಟಕದ ವ್ಯವಸ್ಥಾಪಕ ಹಾಗೂ ಆಯೋಜಕರಾದ ಕೆ.ಕೆ. ಯನ್ನಪ್ಪ ಮತ್ತು ಕೆ.ಕೆ. ಸಿದ್ದಪ್ಪ ತಿಳಿಸಿದರು.
ನಾಟಕದಲ್ಲಿ ಬಾಲಕೃಷ್ಣನ ಪಾತ್ರವನ್ನು ಕೀರಿಸ್ವಾಮಿ, ಧರ್ಮರಾಯನಾಗಿ ಪೊತ್ತಪ್ಪ, ಅರ್ಜುನನಾಗಿ ಎರಿ ಸ್ವಾಮಿ, ಮಯೂರಧ್ವಜನಾಗಿ ಕೆ.ಕೆ. ರಾಜ್, ಕೃಷ್ಣನಾಗಿ ಲೋಕಪ್ಪ ಸುಗ್ಗನಹಳ್ಳಿ, ನಕುಲಧ್ವಜನಾಗಿ ಪವನ್ ವೃಷಿಕೇತು, ಕೋಟ್ರೇಶನಾಗಿ ಪ್ರದುನ್ನ, ತಾಮ್ರಧ್ವಜನಾಗಿ ಕಂಪ್ಪಲಿ ಹಿರಿಸ್ವಾಮಿ, ಬಬ್ರುವಾಹನನಾಗಿ ಗಿರಿ ಸ್ವಾಮಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 