ದೆಹಲಿಯಲ್ಲಿ ಶೀಘ್ರದಲ್ಲೇ 'ಪ್ಲಾಸ್ಮಾ ಬ್ಯಾಂಕ್' ಆರಂಭ; ದಾನಿಗಳಿಗೆ ಪ್ಲಾಸ್ಮಾ ನೀಡುವಂತೆ ಕೇಜ್ರೀವಾಲ್ ಮನವಿ

ನವದೆಹಲಿ, ಜೂ 29:ದೆಹಲಿಯಲ್ಲಿ  ಕೊರೋನಾ ರೋಗಿಗಳ ಚಿಕಿತ್ಸೆಗೆ ಶೀಘ್ರದಲ್ಲೇ 'ಪ್ಲಾಸ್ಮಾ ಬ್ಯಾಂಕ್‌' ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.ಕೋವಿಡ್‌-19 ಪರಿಸ್ಥಿತಿ ಕುರಿತ ಡಿಜಿಟಲ್ ಸುದ್ದಿಗೋಷ್ಠಿ, ಮುಂದಿನ ಎರಡು ದಿನಗಳಲ್ಲಿ ಪ್ಲಾಸ್ಮಾ ಬ್ಯಾಂಕ್‌ ಆರಂಭಿಸಲಾಗುವುದು. ಈ ಮೂಲಕ ತಾವು ಎಲ್ಲಾ ಗುಣಮುಖರಾದ ರೋಗಿಗಳಿಗೆ ತಮ್ಮ ಪ್ಲಾಸ್ಮಾ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ದಾನಿಗಳಿಗೆ ಸೂಕ್ತ ಹಣ ನೀಡಲಾಗುವುದು ಎಂದಿದ್ದಾರೆ. 

ಬೇರೆಯವರ ಜೀವ ಉಳಿಸುವ ಅವಕಾಶ ಸಿಗುವುದು ಬಹಳ ಅಪರೂಪ. ಆದ್ದರಿಂದ ಎಲ್ಲಾ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ತಮ್ಮ ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡುತ್ತಿದ್ದೇವೆ. ಇದು ನಿಜವಾದ ದೇವರ ಸೇವೆಯಂತೆ ಎಂದಿದ್ದಾರೆ. ಈಗಾಗಲೇ ಸರ್ಕಾರ 29 ರೋಗಿಗಳ ಮೇಲೆ ಈ ಪ್ರಯೋಗ ನಡೆಸಿದ್ದು, ಫಲಿತಾಂಶಗಳು ಉತ್ತೇಜನಕಾರಿಯಾಗಿದೆ ಎಂದರು. ದಕ್ಷಿಣ ದೆಹಲಿಯ ಲಿವರ್ ಮತ್ತು ಬೈಲಿಯರಿ ವಿಜ್ಞಾನಿಗಳ ಸಂಸ್ಥೆ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲಾಗುವುದು. ಪ್ಲಾಸ್ಮಾ ಅಗತ್ಯವುಳ್ಳವರು ವೈದ್ಯರ ಶಿಫಾರಸು ಪತ್ರ ಪಡೆಯಬೇಕು ಎಂದರು. ಪ್ಲಾಸ್ಮಾ ದಾನ ಮಾಡುವುದರಲ್ಲಿ ಯಾವುದೇ ಅಪಾಯವಿಲ್ಲ. ದಾನಿಗಳಿಗೆ ಸೂಕ್ತ ಹಣದ ನೆರವು ನೀಡಲಾಗುವುದು. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆಯ ದೂರವಾಣಿ ಸಂಖ್ಯೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.