‘ಆಧುನಿಕ ಜೀವನ ಶೈಲಿಯ ಹೆಸರಿನಲ್ಲಿ ನಮ್ಮ ದೇಶದ ಸಂಸ್ಕೃತಿ ಮರೆಯಬಾರದು’

‘ಆಧುನಿಕ ಜೀವನ ಶೈಲಿಯ ಹೆಸರಿನಲ್ಲಿ ನಮ್ಮ ದೇಶದ ಸಂಸ್ಕೃತಿ ಮರೆಯಬಾರದು’ 'Our country's culture should not be forgotten in the name of modern lifestyle'

ಬಾಗಲಕೋಟ 17: ವಿಶ್ವೇಶ್ವರಯ್ಯನಂಥ ಮಹಾನ್ ವ್ಯಕ್ತಿಗಳ ಜೀವನ ಮತ್ತು ಸಾಧನೆಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಾಗಪ್ಪ ಹೆಬ್ಬಿ ಜನರಲ್ ಮ್ಯಾನೇಜರ್ ಗುಜರಾತ ಮೆಟ್ರೊ ರೈಲ, ನಿಗಮ, ಸೂರತ ಹೇಳಿದರು.  

ಅವರು ಬಿ.ವ್ಹಿ.ವ್ಹಿ.ಎಸ್‌. ಪಾಲಿಟೆಕ್ನಿಕ್ (ಅಟಾನಮಸ್) ಸಂಸ್ಥೆಯಲ್ಲಿ ದಿ. 15ರಂದು ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯರಾದ ಜಯಶ್ರೀ ಗದ್ದಿ ಯವರು ವಹಿಸಿಕೊಂಡಿದ್ದರು. ಗೌರವ ಅತಿಥಿಗಳಾಗಿ ರಾಷ್ಟ್ರ​‍್ರಶಸ್ತಿ ವಿಜೇತೆ ಡಾ. ಸಪ್ನ ಎಸ್ ಅನಿಗೋಳ, ವಿಜ್ಞಾನ ಶಿಕ್ಷಕಿ, ಕೆ. ಎಲ್‌. ಇ. ಶಿಕ್ಷಣ ಸಂಸ್ಥೆಯ ಎಸ್ ಸಿ ಪಿ ಪ್ರೌಢಶಾಲೆ ಮಹಾಲಿಂಗಪುರ ಇವರು ಆಗಮಿಸಿದ್ದರು. 

ಗೌರವ ಅತಿಥಿ ಸ್ಥಾನದಿಂದ ಮಾತನಾಡಿದ ಡಾ. ಸಪ್ನ ಅನಿಗೋಳ ಇವರು ಆಧುನಿಕ ಜೀವನ ಶೈಲಿಯ ಹೆಸರಿನಲ್ಲಿ ನಮ್ಮ ದೇಶದ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ವಿದ್ಯಾರ್ಥಿಗಳು ಮರೆಯಬಾರದೆಂದು ಹೇಳಿದರು ಮತ್ತು ಗುರುಗಳ ಮಾರ್ಗದರ್ಶನದಲ್ಲಿ ದೇಶದ ಪ್ರಗತಿಗಾಗಿ ತಮ್ಮ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವಲ್ಲಿ ಸದಾ ನಿರತರಾಗಿರಬೇಕೆಂದು ಕರೆ ನೀಡಿದರು. 

ಅದ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಪ್ರಬಾರಿ ಪ್ರಾಚಾರ್ಯೆ ಜಯಶ್ರೀ ಗದ್ದಿಯವರು ಇಂದಿನ ವಿದ್ಯಾರ್ಥಿ ಸಮೂಹವು ಸಾಮಾಜಿಕ ಜಾಲತಾಣಗಳನ್ನು ಬಳಸುವಲ್ಲಿ ಸದಾ ಜಾಗ್ರತರಾಗಿದ್ದು ಸ್ವಾತಂತ್ರ್ಯವನ್ನು ಸ್ವೇಚ್ಛಾಜಾರವನ್ನಾಗಿಸಿಕೊಳ್ಳಬಾರದೆಂದು ತಿಳಿಸಿದರು. 

ಕುಮಾರಿ ಸಮೃದ್ದಿಯವರ ನೃತ್ಯ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗದವರು ಸಮೂಹ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು, ಡಾ. ಶಶಿ. ಟಿ. ಜೆ. ಸ್ವಾಗತಿಸಿದರು ಹಾಗೂ ಎಂ. ಬಿ. ದೊಡಮನಿ ಹಾಗೂ  ಎಲ್‌. ಜಿ. ವೈದ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಅನೇಕ ಜನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸಿದರು, ಕಾರ್ಯಕ್ರಮವನ್ನು ರಮೇಶ ಕಾರಜೋಳ ಹಾಗೂ ಸಂಗೀತಾ ಶೆಟ್ಟರ ನಿರೂಪಿಸಿದರು ಮತ್ತು ಕೊನೆಯಲ್ಲಿ ರಮೇಶ ಕಾರಜೋಳ ವಂದಿಸಿದರು.  

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಮಸ್ಥಾ ಸಿಬ್ಬಂದಿ ವರ್ಗದವರು ಆಹ್ವಾನಿತರು ಮತ್ತು ಎಲ್ಲ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.