ಅಗಸ್ಟ್‌ 08 ರಂದು ಮಿನುಗುತಾರೆ ನಾಟಕ ಪ್ರದರ್ಶನ

ಅಗಸ್ಟ್‌ 08 ರಂದು ಮಿನುಗುತಾರೆ ನಾಟಕ ಪ್ರದರ್ಶನ 'Minugutare' play performance on August 8

ಲೋಕದರ್ಶನ ವರದಿ 

ಧಾರವಾಡ 04 : ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಅಗಸ್ಟ್‌ 08 ರಂದು ಸಂಜೆ 6.30ಕ್ಕೆ ರಂಗಾಯಣದಿಂದ ಜಯಲಕ್ಷ್ಮೀ ಪಾಟೀಲ ರಚಿಸಿ, ಕೆ.ಎಸ್‌.ಡಿ.ಎಲ್‌.ಚಂದ್ರು ನಿರ್ದೇಶಿಸಿ, ರಂಜಿತಾ ಸೂರ್ಯವಂಶಿ ಏಕವ್ಯಕ್ತಿ ಅಭಿನಯ ಹಾಗೂ ರೂಪಾಂತರ, ಬೆಂಗಳೂರು ಪ್ರಸ್ತುತಿಯ “ಮಿನುಗುತಾರೆ” ನಾಟಕವನ್ನು ಏರಿ​‍್ಡಸಿದೆ. ನಾಟಕ ಪೂರ್ವದಲ್ಲಿ ಹಿರಿಯ ಕಲಾವಿದೆ ಜಯಲಕ್ಷ್ಮೀ ಪಾಟೀಲ ಅವರ ಕುರಿತು ಗಣೇಶ ಅಮೀನಗಡ ಅವರು ರಚಿಸಿದ “ರಂಗ ಬಾನಾಡಿ” ಕೃತಿ ಬಿಡುಗಡೆಗೊಳ್ಳಲಿದೆ. ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕರಾದ ಝಕೀರ ನದಾಫ ಅವರು ಉಪಸ್ಥಿತರಿರುವರು. ಪ್ರವೇಶ ದರ ರೂ.100/-ನ್ನು ನಿಗದಿಪಡಿಸಲಾಗಿದೆ. ಸಾಹಿತ್ಯಾಸಕ್ತರು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.