ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ 'ಮಾರ್ಕ್'
'Mark', which arouses curiosity every moment
ಲೋಕದರ್ಶನ ವರದಿ
ಈ ವರ್ಷದ ಸೂಪರ್ ಹಿಟ್ ಚಿತ್ರವಾಗುವ ಎಲ್ಲಾ ಲಕ್ಷಣಗಳನ್ನು ಒಳಗೊಂಡ ಸಿನಿಮಾ 'ಮಾರ್ಕ್'. ಕಳೆದ ವರ್ಷ ರೀಲೀಸ್ ಆಗಿದ್ದ 'ಮ್ಯಾಕ್ಸ್' ನಂತೆಯೇ ಮತ್ತೊಂದು ಪೊಲೀಸ್ ಕಥೆಯನ್ನು ಹೇಳುವ ಸಿನಿಮಾ. ನಗರದಲ್ಲಿ 18 ಮಕ್ಕಳ ಕಿಡ್ನಾಪ್ ಮೂಲಕ ಚಿತ್ರದ ಕಥೆ ಶುರುವಾಗುತ್ತದೆ. ಆ 18 ಮಕ್ಕಳಲ್ಲಿ ಮಾರ್ಕ್ (ಸುದೀಪ್)ಗೆ ಪ್ರೀತಿಗೆ ಪಾತ್ರವಾದ ಮಗು ಕೂಡ ಇರುತ್ತದೆ. ಹಾಗಾಗಿ ಸಸ್ಪೆಂಡ್ ಆಗಿದ್ದ ಮಾರ್ಕ್ ಅಲಿಯಾಸ್ ಅಜಯ್ ಮಾಕಂರ್ಡಯ್ಯ ್ಘ ತಂಡ ಮಕ್ಕಳ ಹುಡುಕಾಟಕ್ಕೆ ಎಂಟ್ರಿ ಕೊಡುತ್ತದೆ. ಸಿನಿಮಾ ಪ್ರಾರಂಭದಲ್ಲಿ ವಿಲನ್ ಆದ ಭದ್ರ (ನವೀನ್ ಚಂದ್ರ)ನ ತಮ್ಮ ರುದ್ರ ತಾನು ಪ್ರೀತಿಸಿದ ಹುಡುಗಿಯ ಜೊತೆ ಓಡಿ ಹೋಗುತ್ತಾನೆ. ಒಂದು ಕಡೆ ಪೊಲೀಸ್‌ರು 2 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ, ಕಳ್ಳ ಸಾಗಾಣೆ ಮಾಡುವವರನ್ನು ಸ್ಟೇಷನ್‌ಗೆ ಕರೆ ತರುತ್ತಾರೆ. ಅಲ್ಲಿ ಮಾರ್ಕ್ ಕೂಡ ಬಂದಿ ಆಗಿರುತ್ತಾನೆ. ಮತ್ತೊಂದು ಕಡೆ ಮುಖ್ಯಮಂತ್ರಿ ಲೋಕನಾಯಕಿಯ ಕೊಲೆ ಆಗುತ್ತದೆ. ಆ ಕೊಲೆ ಮಾಡಿದವರು ಯಾರು ಎಂಬುದರ ವಿಡಿಯೋ 18 ಮಕ್ಕಳು ಕಿಡ್ನಾಪ್ ಆದ ಡಾಕ್ಟರ್ ಮಗುವಿನ ಕಡೆ ಇದೆ. ಹೀಗೆ ವಿಭಿನ್ನ ಆಯಾಮಗಳ ಕಥೆಯನ್ನು ಇಟ್ಟುಕೊಂಡು 'ಮಾರ್ಕ್' ಸಿನಿಮಾ ಕಟ್ಟಿ ಕೊಡಲಾಗಿದೆ.
ಪ್ರಾರಂಭದಿಂದಲೂ ಮಾರ್ಕ್ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿ, ಥ್ರಿಲ್ಲ ನೀಡುತ್ತಾ ಸಾಗುತ್ತದೆ. ಮಾರ್ಕ್ ಅಂದ್ರೆ ವಿಲನ್‌ಗಳಿಗೆ ಭಯ, ಮಾರ್ಕ್ ರೂಲ್ಸ್ ಪಾಲೋ ಮಾಡುವವನಲ್ಲ, ರೂಲ್ಸ್ ಹುಟ್ಟು ಹಾಕುವವ. ಆತ ಸಸ್ಪೆಂಡ್ ಆಗಿದ್ದರೂ ಸಮಾಜಕ್ಕಾಗಿ ಡ್ಯೂಟಿ ಮಾಡುತ್ತಾನೆ. ಈ ಚಿತ್ರದ ಮುಖ್ಯ ಆಕರ್ಷಣೆ ಸುದೀಪ್ ಅಭಿನಯವಾಗಿದೆ. ಮಕ್ಕಳ ಹುಡುಕಾಟದಲ್ಲಿ ಮಾರ್ಕ್ಸ ಗೆ ವಿಲನ್‌ಗಳಾದ ಭದ್ರ, ರುದ್ರ, ಸ್ಟಿಫನ್ ಹಾಗೂ ರಾಜಕಾರಣಿ ಆಧಿಕೇಶವ ಹೇಗೆ ತೊಂದರೆ ಮಾಡುತ್ತಾರೆ ಮುಂದೆ ಏನೆಲ್ಲಾ ಆಗುತ್ತೆ ಎಂದು ತಿಳಿಯಲು ಮಾರ್ಕ್ ಸಿನಿಮಾ ನೋಡಲೇ ಬೇಕು.
ಮಾರ್ಕ್ ಒಂದು ಪಕ್ಕಾ ಮನರಂಜನಾ, ಥ್ರಿಲ್ಲರ್, ಆ್ಯಕ್ಷನ್ ಸಿನಿಮಾ ಎನ್ನಬಹುದು. ಚಿತ್ರದ ವಿಶೇಷವೆಂದರೆ, ಕ್ಷಣ ಕ್ಷಣಕ್ಕೂ ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತಾ ಸಾಗುವುದು. ಜೊತೆಗೆ ಇದರಲ್ಲಿ ಬರುವ ಆ್ಯಕ್ಷನ್‌ಗಳು ಅದ್ಭುತವಾಗಿದ್ದು, ಕಿಚ್ಚನ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತದೆ. ಚಿತ್ರದ ಸಂಗೀತ ಛಾಯಾಗ್ರಹಣ ಎಲ್ಲಾ ಸುಂದರವಾಗಿದ್ದು, ಕಳೆದ ವರ್ಷ ಕ್ರಿಸ್ಮಸ್ ದಿನದಂದು ಬಂದ ಮ್ಯಾಕ್ಸ್ ನಂತೆಯೇ ಮಾರ್ಕ್ ಕೂಡ ಹಿಟ್ ಆಗುವ ಲಕ್ಷಣ ಒಳಗೊಂಡಿದೆ.
ರೇಟಿಂಗ್: 4/5
ಚಿತ್ರ: ಮಾರ್ಕ್
ನಿರ್ಮಾಣ: ಕಿಚ್ಚ ಕ್ರಿಯೇಷನ್ ಮತ್ತು ಸತ್ಯಜ್ಯೋತಿ ಫಿಲಮ್ಸ್
ನಿರ್ದೇಶನ: ವಿಜಯ್ ಕಾರ್ತಿಕೇಯ
ತಾರಾಗಣ: ಕಿಚ್ಚ ಸುದೀಪ್, ಶೈನ್ ಟಾಮ್ ಚಾಕೊ, ಯೋಗಿ ಬಾಬು, ನವೀನ್ ಚಂದ್ರ, ಡ್ರಾ??ಗನ್ ಮಂಜು ಮುಂತಾದವರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 