ಮನೆಯಲ್ಲಿ ಮಹಾಮನೆ ಕಾರ್ಯಕ್ರಮ

ಮನೆಯಲ್ಲಿ ಮಹಾಮನೆ ಕಾರ್ಯಕ್ರಮ 'Mahamane' program at home

ಲೋಕದರ್ಶನ ವರದಿ 

ಹುಬ್ಬಳ್ಳಿ 1: ಬಸವ ಕೇಂದ್ರದ ವತಿಯಿಂದ ಮಹಾಮನೆ ಕಾರ್ಯಕ್ರಮವು ಭಾನುವಾರ, ಆಗಸ್ಟ್‌ 2, 2026 ರಂದು ಬೆಳಿಗ್ಗೆ 10.30 ಗಂಟೆಗೆ ಗೋಕುಲ ರಸ್ತೆ, ಅಕ್ಷಯ ಪಾರ್ಕ, ಮನೆ ನಂ. 21, ಎಲ್‌ಐಜಿ-15, ತಿಪ್ಪಣ್ಣ ಉಣಕಲ್ ಅವರ ಮನೆಯಲ್ಲಿ ನಡೆಯಲಿದೆ.  ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ. ಬಿ. ಹಳ್ಳ್ಯಾಳ ಅವರು ಅನುಭವ ನುಡಿಗಳನ್ನು ನೀಡಲಿದ್ದಾರೆ.  ಈ ಕುರಿತು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ್ ಡಿ. ಹೊರಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.