‘ಯುವಜನಾಂಗ ದುಶ್ಚಟಕ್ಕೆ ಮಾರುಹೋಗದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ’

‘ಯುವಜನಾಂಗ ದುಶ್ಚಟಕ್ಕೆ ಮಾರುಹೋಗದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ’ 'Let the youth not be seduced by evil and build a better future'

ಬೆಳಗಾವಿ 02: ಜೀವನ  ಅಮೂಲ್ಯವಾದುದು. ಒಳ್ಳೆಯ ರೀತಿಯಿಂದ ಬದುಕಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು. ವ್ಯಸನ ದುಶ್ಚಟಗಳಿಗೆ ಬಲಿಯಾಗಿ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಟಿಳಕವಾಡಿ ಪೊಲೀಸ ಠಾಣೆ ಇನೆಸ್ಪೆಕ್ಟರ್‌ಪರಶುರಾಮ ಪೂಜೇರಿ ಹೇಳಿದರು. ಎಫ್‌ಪಿಎಐ ಬೆಳಗಾವಿ ಶಾಖೆ, ಟಿಳಕವಾಡಿ ಪೊಲೀಸ ಠಾಣೆ ಬೆಳಗಾವಿ, ಸಾವಲಿ ಪೌಂಡೇಶನ ಬೆಳಗಾವಿ, ಅನೇಕ ಸಂಸ್ಥೆ  ಬೆಂಗಳೂರು, ಆರ್‌.ಪಿ.ಡಿ. ಪದವಿ ಪೂರ್ವ ಕಾಲೇಜು, ಟಿಲಕವಾಡಿ ಇವರ ಸಹಯೋಗದಲ್ಲಿ ಆರ್ .ಪಿ.ಡಿ. ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಹಾಗೂ ಲಿಂಗತ್ವ ಸಮಾನತೆ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಇಂದು ಡ್ರಗ್ಸ್‌ ದುರುಪಯೋಗವು ಉಜ್ವಲ ಭವಿಷ್ಯವನ್ನು ನಾಶ ಪಡಿಸುತ್ತಿದೆ. ಡ್ರಗ್ಸ್‌ ಮೊದಲು ಕುತೂಹಲದಿಂದ ಮೋಜಿಗಾಗಿ ನಂತರ ಒತ್ತಡದಿಂದ ಕೊನೆಗೆ ನಾಶಕ್ಕೆ ಕಾರಣವಾಗುತ್ತದೆ. ತಂದೆ ತಾಯಿಯ ಬಾಳಿಗೆ ಬೆಳಕಾಗಬೇಕಾದ ಮಕ್ಕಳು ಯುವಜನ ಹೇಗೆ ಕತ್ತಲು ಕವಿಸುತ್ತಿದ್ದಾರೆ. ಹೇಗೆ ಯುವಕರು ವ್ಯಸನಕ್ಕೆ ಬಲಿಯಾಗುವ ರೀತಿಯನ್ನು ವಿವರಿಸಿ ಸ್ಥಳೀಯವಾಗಿ  ಉದಾಹರಣೆಗಳನ್ನು ನೀಡಿದರು. ಪ್ರತಿಯೊಬ್ಬ  ಯುವಕ, ಯುವತಿಯರು ಇಂಥ ಮಾದಕ ವ್ಯಸನಗಳಿಂದ ದೂರವಿರಲು ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಇನೆಸ್ಪೆಕ್ಟರ್ ಪೂಜೇರಿ ಅವರು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಫ್‌ಪಿಎಐ ಬೆಳಗಾವಿ ಶಾಖೆಯ ಉಪಧ್ಯಕ್ಷ ಡಿ. ಬಿ. ಪಾಟೀಲ ಅವರು ಮಾತನಾಡುತ್ತಾ ಈ ವರ್ಷದ ಥೀಮ್ ಚಕ್ರವನ್ನು ಒಡೆದು ಹಾಕೋಣ ಸಂಘಟಿತ  ಅಪರಾಧವನ್ನು ನಿಲ್ಲಿಸೋಣ ಎಂಬ  ಘೋಷ ವಾಕ್ಯವನ್ನು ಹೇಳುತ್ತಾ ಇದರಿಂದ  ದೂರವಿದ್ದು ತಮ್ಮ  ಉಜ್ವಲ  ಭವಿಷ್ಯವನ್ನು ರೂಪಿಸಿ ಕೊಳ್ಳಬೇಕೆಂದು ತಿಳಿಸಿದರು. ವಿದ್ಯಾರ್ಥಿ ದಶೆಯಲ್ಲಿ ಓದಿನಲ್ಲಿ ಹೆಚ್ಚು  ಆಸಕ್ತಿ ವಹಿಸಿ ಗುರಿಮುಟ್ಟುವಲ್ಲಿ ಪ್ರಯತ್ನ ಪಡಬೇಕೆಂದು ತಿಳಿಸಿದರು.  

ಪೊಲೀಸ್ ಸಬ್‌-ಇನೆಸ್ಪೆಕ್ಟರ್ ವಿಶ್ವನಾಥ  ಘಂಟಿಮಠ ಮಾತನಾಡುತ್ತಾ ಡ್ರಗ್ಸ್‌ ಚಟ ಒಮ್ಮೆ ಅಂಟಿಕೊಂಡರೆ ಮಾನಸಿಕ, ದೈಹಿಕ  ಅರೋಗ್ಯವನ್ನು ಹಾಳು ಮಾಡುವುದರೊಂದಿಗೆ ಭವಿಷ್ಯವನ್ನೇ ಹಾಳುಮಾಡುತ್ತದೆ. ಆದ್ದರಿಂದ ಮೊದಲೇ ಜೀವನದಲ್ಲಿ ಎಚ್ಚರಿಕೆಯ ಹೆಜ್ಜೆ  ಹಾಕಬೇಕು ಎಂದು ಕರೆ ನೀಡಿದ ಅವರು ಮಾದಕ ವಸ್ತುಗಳ ಬಗೆಗಳನ್ನು ವಿವರಿಸಿದರು.  

ಸಂಪನ್ಮೂಲ ವ್ಯಕ್ತಿ ಬೆಳಗಾವಿ ಸಾವಲಿ ಪೌಂಡೇಶನ ಅಧ್ಯಕ್ಷ ದಿನೇಶ  ಪಾಟೀಲ ಮಾತನಾಡುತ್ತಾ  ಲಿಂಗತ್ವ, ಟ್ರಾನ್ಸ್‌ಜಂಡರ್ ಎಂದರೇನು ಇವುಗಳಲ್ಲಿ ಪ್ರಕಾರಗಳು ಈ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಐಉಃಖಿಕಿ ಸಮುದಾಯದ ವಿದ್ಯಾರ್ಥಿಗಳು ತಮ್ಮ ಸಹಪಾಟಿಗಳಲ್ಲಿ ಇದ್ದಲ್ಲಿ, ಅವರನ್ನೂ ಸಮಾನತೆಯಿಂದ ಕಾಣಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಶಿಂಧೆ ಮಾತನಾಡುತ್ತಾ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂಥ ಮಾದಕ ವ್ಯಸನಗಳಿಗೆ ಬಲಿಯಾಗದೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು  ಕರೆ  ನೀಡಿದರು.  

ಉಪನ್ಯಾಸಕರಾದ ಸೋನಾಲ  ನಿರೂಪಿಸಿದರು. ದೊಡ್ಡಮನಿ ಸ್ವಾಗತಿಸಿದರು. ಎಪ್‌ಪಿಎಐ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು, ಪೊಲೀಸ ಠಾಣೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.