’ಕನ್ನಡ ಕಾವ್ಯ ಗಮಕ ಅನುಸಂಧಾನ' ಸರ್ಟಿಫಿಕೇಟ್ ಕೋರ್ಸ್
'Kannada Poetry Grammar Approach' Certificate Course
ಬಾಗಲಕೋಟೆ 17: ಕಾವ್ಯಗಳಲ್ಲಿರುವ ಸ್ವರಗಳನ್ನು ಆಲಾಪನೆ ಮಾಡುತ್ತಾ ಮನಸ್ಸಿನಲಿ ಆನಂದವನ್ನು ಅನುಭವಿಸುವುದೇ ಗಮಕಲೆ ಎಂದು ಸಂಗೀತ ಕ್ಷೇತ್ರದ ಮಹಾ ವಿದ್ವಾಂಸರಾದ ವಿದ್ವಾನ್ ಪಂಡಿತ್ ಡಾ ಕಾಶಿಲಿಂಗಯ್ಯ ಮಠ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮತ್ತು ಸಂಗೀತ ವಿಭಾಗದ ಸಂಯುಕ್ತ ಆಶ್ರಯದಲ್ಲಿ ’ಕನ್ನಡ ಕಾವ್ಯ ಗಮಕ ಅನುಸಂಧಾನ" ಎಂಬ ಸರ್ಟಿಫಿಕೇಟ್ ಕೋರ್ಸ್ ನ ಪ್ರಥಮ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡ ಕಾವ್ಯಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಿದಾಗ ಮಾತ್ರ ಕಾವ್ಯಗಳು ಜನಮನದಲ್ಲಿ ಕಾಲದಿಂದ ಕಾಲಕ್ಕೆ ತಲೆಮಾರಿನಿಂದ ತಲೆಮಾರಿಗೆ ಉಳಿದುಕೊಂಡು ಬರುತ್ತವೆ ಎಂದು ತಿಳಿಸಿದರು.
ನಂತರ ಕವಿರಾಜಮಾರ್ಗ ಕಾವ್ಯ ಮೂರು ಪದ್ಯಗಳನ್ನು ಗಮಕಲೆಯಲ್ಲಿ ಹಾಡಿದರು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸರ್ಟಿಫಿಕೇಟ್ ಕೋರ್ಸ್ನ ಸಂಯೋಜಕರಾದ ಡಾ ಎಸ್ ಡಿ ಕೆಂಗಲಗುತ್ತಿ ಅವರು ಸ್ವಾಗತಿಸಿ ಕಾವ್ಯಗಳನ್ನು ವ್ಯಾಖ್ಯಾನ ಮಾಡಿದರು. ಕನ್ನಡ ಪ್ರಾಧ್ಯಾಪಕರಾದ ಡಾ. ವಿರುಪಾಕ್ಷಿ ಏನ್ ಬಿ ಅವರು ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 