ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ’ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ’ ಕಾರ್ಯಕ್ರಮ  'Kannada Karthika Anudina Anuspandana' program by Kannada Sahitya Parishad

ಮುಂಡಗೋಡ 12: ಕನ್ನಡಕ್ಕೆ ‘ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎನ್ನುವ ಕುವೆಂಪು ಅವರ ಸಾಲಿನಂತೆ ಸದಾ ಕನ್ನಡವೇ ನಮ್ಮ ಉಸಿರು ಕನ್ನಡಕ್ಕೆ ದುಡಿಯುವುದೇ ನಮ್ಮ ಅಧ್ಯಾಯ ಎಂದು ಸದಾ ಕನ್ನಡದ ಕಾರ್ಯಕ್ರಮಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಯುವ ಕನ್ನಡ ಸಾಹಿತಿ ಪ್ರತಿಭೆಗಳನ್ನು ಹುಡುಕುವುದೇ ನಮ್ಮ ಧ್ಯೇಯ.ಕನ್ನಡ ತಾಯಿ ಭುವನೇಶ್ವರಿಗೆ ಅದುವೇ ನಾವು ಮಾಡುವ ಸೇವೆಯ ಕಾಯಕ ಎಂದು ಕ, ಸಾ, ಪ,ಅಧ್ಯಕ್ಷರು ವಸಂತ ಕೊಣಸಾಲಿ ಅವರು ಮಾತನಾಡಿದರು.    

ತಾಲೂಕಿನ ಹುನಗುಂದ ಗ್ರಾಮದಲ್ಲಿ  ಮಕ್ಕಳಲ್ಲಿ ಕನ್ನಡ ಕಾರ್ತಿಕ ದೀಪ ಹಚ್ಚುವುದರೊಂದಿಗೆ ಕನ್ನಡ ನಾಡು ನುಡಿ ಉಪನ್ಯಾಸದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂಡಗೋಡ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮುಂಡಗೋಡ ಕನ್ನಡ ನಾಡು ನುಡಿ ಸಂಸ್ಕೃತಿ ಕನ್ನಡ ಸಂರಕ್ಷಣೆ ಉಳಿವಿಗಾಗಿ ಕನ್ನಡವನ್ನು ಮನೆ ಮನಗಳಿಗೆ ಪಸರಿಸುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿದ್ದು ಅದರಂತೆಯೇ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನಗಳನ್ನ ಅನೇಕ ವಿಧವಾದ ಸಾಹಿತ್ಯಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾ ಬಂದಿದೆ. ಅದರಂತೆಯೇ ಪ್ರತಿ ವರ್ಷದಂತೆ ಕಾರ್ತಿಕ ಮಾಸದಂದು ಅನುದಿನ ಅನುಸ್ಪಂದನ ಎನ್ನುವ ರೀತಿಯಲ್ಲಿ ಕನ್ನಡ ಕಾರ್ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಸಲ ಮುಂಡಗೋಡ ತಾಲೂಕಿನ ಹುನುಗುಂದದಲ್ಲಿ ಕನ್ನಡ ಕಾರ್ತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.    

ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಹುನಗುಂದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಬಸವರಾಜ್ ಆಸ್ತಕಟ್ಟಿ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ  ಕರುನಾಡಿನಲ್ಲಿ ಕನ್ನಡ ಎಷ್ಟು ಮುಖ್ಯ ಎನ್ನುವುದನ್ನು ತಮ್ಮ ಅನುಭವದೊಂದಿಗೆ ಹಂಚಿಕೊಂಡರು. ಕನ್ನಡ ಕಾರ್ತಿಕ ನಿಮಿತ್ಯವಾಗಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ  ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕನ್ನಡ ಕುಸುಮಗಳು ಕನ್ನಡದ ಕವನಗಳನ್ನ ಪಲ್ಲವಿಸುವ ಮೂಲಕ ಕನ್ನಡ ತಾಯಿಯ ಭುವನೇಶ್ವರಿಯ ಸ್ವರ್ಣ ಕೀರೀಟ ಮತ್ತೆ ರಾರಾಜಿಸುವಂತೆ ಮಾಡಿತು.  ಉಪನ್ಯಾಸಕರಾಗಿ ಆಗಮಿಸಿದ ಶ್ರೀ ನಾಗರಾಜ್ ಬಡಿಗೇರ್ ಅವರು ಕನ್ನಡದ ನಾಡು ನುಡಿ ಇತಿಹಾಸ ಕುರಿತು ಸವಿಸ್ತಾರವಾದ ಉಪನ್ಯಾಸದ ಮೂಲಕ ಕನ್ನಡ ಕಸ್ತೂರಿಯ ಕಂಪನ್ನ ಮಕ್ಕಳಿಗೆ ಇಂಪಾಗಿ ರಸದೌತಣದಂತೆ ಉಣಬಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್ ವಿ ಬಡಿಗೇರ್ ಜೀವನದಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯ ಶಿಸ್ತಿನಿಂದ ಕಲಿಯುವುದೇ ಶಿಕ್ಷಣದ ಶಾಸ್ತ್ರ, ಪ್ರಾಮಾಣಿಕತೆಯೇ ನಮ್ಮ ಅಸ್ತ್ರ ಎಂದು ನುಡಿದರು.  

ಸಂತೋಷ್ ಕುಸನೂರ ಅವರು ನಿರೂಪಿಸಿದರು. ವಿನಾಯಕ್ ಶೇಟ್ ಅವರು ವಂದಿಸಿದರು. ಮುದ್ದು ಮಕ್ಕಳ ನಾಡಗೀತೆ ಪ್ರಾರ್ಥನೆಯೊಂದಿಗೆ, ನಾಗರಾಜ ಅರ್ಕಸಾಲಿ ಸ್ವಾಗತಿಸಿದರು. ವಿನಾಯಕ ಶೇಟ್ ವಂದನಾರೆ​‍್ಣ ಸಲ್ಲಿಸಿದರು. ಸಂತೋಷ್‌. ಕುಸನೂರ ನಿರೋಪಣೆ ಮಾಡಿದರು.ಸಂಗಪ್ಪ ಕೋಳೂರು ಹುನಗುಂದ ಗ್ರಾಮದ ಜನರು ಮುಂತಾದವರು ಇದ್ದರು.