‘ನ್ಯಾ. ನಾಗಮೋಹನದಾಸ್ ಒಳಮೀಸಲಾತಿ ವರದಿ ಅವೈಜ್ಞಾನಿಕ’
'Justice Nagamohan Das' internal reservation report is unscientific'
ಮುದ್ದೇಬಿಹಾಳ 14: ನ್ಯಾ. ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿಯನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಅದು ಅವೈಜ್ಞಾನಿಕವಾಗಿದೆ. ಬಲಗೈ ಹೊಲೆಯ ಸಮುದಾಯದವರ ಸಂಖ್ಯೆ ಕಡಿಮೆ ತೋರಿಸಿ, ನಮಗೆ ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ದಲಿತ ಸಮಾಜದ ಹಿರಿಯ ಮುಖಂಡ ಹರೀಶ ನಾಟಿಕಾರ ಹಾಗೂ ಚನ್ನಪ್ಪ ವಿಜಯಕರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ತಾಲೂಕಿನ ಬಲಗೈ ದಲಿತ ಸಮಾಜದ ಒಕ್ಕೂಟ ವತಿಯಿಂದ ನ್ಯಾ. ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿ ವಿರೋಧಿಸಿ ಗುರುವಾರ ಬ್ರಹತ್ ಪ್ರತಿಭಟನೆ ನಡೆಸಿ ಡಾ, ಬಿ ಆರ್ ಅಂಡ್ಕರ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶಿಲ್ದಾರ ಕಚೇರಿ ಬಂದು ತಹಶಿಲ್ದಾರ ಕೀರ್ತಿ ಚಾಲಕ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಳಿಕ ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಸಮಾಜದ ಹಿರಿಯ ಮುಖಂಡ ಹರೀಷ ನಾಟಿಕಾರ ಹಾಗೂ ಚನ್ನಪ್ಪ ವಿಜಯಕರ ಮಾತನಾಡಿದ ಅವರು ಕಳೇದ 35 ವರ್ಷಗಳಿಂದ ಬಲಗೈ ಸಮೂದಾಯಕ್ಕೆ ಒಳಮೀಸಲಾತಿ ಕುರಿತು ಇಡೀ ಭಾರತ ದೇಶ್ಯಾಧ್ಯಂತ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಆದರೇ ಈ ಬಾರಿ ನ್ಯಾ ನಾಗಮೋಹನದಾಸ ಅವರ ಜಾತಿ ಜನಗಣತಿ ವರದಿ ಸಮರ್ಕವಾಗಿ ನ್ಯಾಯಯುತವಾಗಿ ಸರಿಯಾಗಿ ಆಗಿಲ್ಲ. ಯಾರನ್ನೂ ಓಲೈಸುವಗೋಸ್ಕರ ಆಯೋಗವು ತರಾತುರಿಯಲ್ಲಿ ಗಣತಿ ಮಾಡುವ ಅವಶ್ಯಕತೆಯೇ ಇರಲಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ರಾಮಯ್ಯನವರು ಒಂದು ಉಪ ಸಮಿತಿಯನ್ನು ರಚನೆ ಮಾಡಿ ಈಗ ಸಲ್ಲಿಸಿರುವ ವರದಿಯನ್ನು ಕೂಲಂಕಶವಾಗಿ ಪರೀಶೀಲನೆ ನಡೆಸಿ ಬಲಗೈ ಹೊಲೆಯ ಸಮುದಾಯದವರಿಗೆ ನ್ಯಾಯ ಒದಗಿಸಿಕೊಡಬೇಕು ಲೋಪದೋಷಗಳ ಕುರಿತು ಚರ್ಚಿಸಲು ಸ್ವತಂತ್ರ ನೀಡಬೇಕು. ಇದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು. ಮಾತನಾಡಿ 101 ಜಾತಿಗಳಲ್ಲಿ 49 ಜಾತಿಗಳು ಬಲಗೈ ಹೊಲೆಯ ಸಮುದಾಯಕ್ಕೆ ಸೇರಿವೆ. ಈ ವಿಷಯವನ್ನು ನಾವು ಹಿಂದೆಯೇ ನಾಗಮೋಹನ ದಾಸ್ ಅವರಿಗೆ ನಮ್ಮ ಸಮಾಜದ ಸ್ವಾಮಿಜಿಗಳು ಬಲಗೈ ಸಮಾಜಕ್ಕೆ ಅನ್ಯಾಯವಾಗದಂತೆ ತಿಳಿಸಿದ್ದರು. 2011ರ ಜನಗಣತಿಯಂತೆ ರಾಜ್ಯದಲ್ಲಿ 38 ಲಕ್ಷ ಜನಸಂಖ್ಯೆ ಬಲಗೈ ಸಮುದಾಯದವರಿದ್ದಾರೆ. ಈ ಸಂಖ್ಯೆ ಆಧಾರದ ಮೇಲೆ ಶೇ. 7 ಪ್ರತಿಶತ ಒಳಮೀಸಲಾತಿ ನೀಡಿ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಮಗೆ ಅನ್ಯಾಯ ಆದರೆ ಸುಮ್ಮನಿರುವುದಿಲ್ಲ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ. ವರದಿಯನ್ನು ಅಧ್ಯಯನ ಮಾಡಿ ಸರಿಪಡಿಸಬೇಕೆಂದು ಆಗ್ರಹಿಸಿದರು.
ಪಿ ಎಚ್ ಉಪ್ಪಲದಿನ್ನಿ ಅವರು ಮಾತನಾಡಿ ನ್ಯಾ, ನಾಗಮೋಹನದಾಸ್ ಅವರು ತಾಂತ್ರಿಕ ನೆಪ ಮುಂದಿಟ್ಟುಕೊಂಡು ಬಲಗೈ ಸಮುದಾಯದವರನ್ನು ತುಳಿಯುವ ಹುನ್ನಾರ ಮಾಡಿದ್ದಾರೆ. ಇದು ಅವರ ಮನಸ್ಥಿತಿ ತೋರಿಸಿಕೊಡುತ್ತದೆ ಎಂದರು. ಸಧ್ಯ ಸರಕಾರ ನಡೆಸಿದ ಸಮೀಕ್ಷೇ ಅಸಂಭದ್ಧ ಹಾಗೂ ತೃಪ್ತಿಕರವಾಗಿ ನಡೆಸಿಲ್ಲ, ಬಲಗೈ ಸಮೂದಾಯದ ಜನಸಂಖ್ಯೆಯನ್ನು ಅಂಕಿ ಅಂಶಗಳಿಂದ ಕಡಿಮೆ ಮಾಡುವ ಉದ್ದೇಶದಿಂದ ಮಾದಿಗ ಸಮೂದಾಯದ ಜನಸಂಖ್ಯೆಗೆ ಬಲಗೈ ಸಮೂದಾಯ ಸೇರೆ್ಡಗೊಳಿಸಲಾಗಿದೆ. ಸರಕಾರದ ಆದೇಶ ಮತ್ತು ನಿಯಮಾವಳಿ ಉಲ್ಲಂಘನೆಯಾಗಿದೆ ಎಂಬುದು ಸಮೀಕ್ಷೇ ಅಪೂರ್ಣತೆ ಮತ್ತು ತಾತ್ಕಾಲಿಕ ದೋಷಗಳು ಕಂಡು ಬಂದಿವೆ ಈ ಹಿನ್ನೇಲೆಯಲ್ಲಿ ಆ. 16 ರಂದು ಈ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಬಲಗೈ ಸಮುದಾಯದವರಿಗೆ ನ್ಯಾಯ ಸಿಗಬೇಕೆಂದು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದರು.
ದಲಿತ ದೌರ್ಜನ್ಯ ಸಮೀತಿ ನಾಮನಿರ್ದೇಶಕ ಮಲ್ಲು ತಳವಾರ, ಮುಖಂಡರಾದ ಹೊಳಿಯಪ್ಪ ಗಂಜಿಹಾಳ, ಎಸ್ ಆರ್ ಕಟ್ಟಿಮನಿ, ಶರಣಬಸ್ಸು ಚಲವಾದಿ, ಶಿವು ಶಿವಪುರ, ಮಂಜುನಾಥ ಕಟ್ಟಿಮನಿ, ರೇವಣೇಪ್ಪ ಚಲವಾದಿ, ಶ್ರೀಶೈಲ ಬಿದರಕುಂದಿ, ಪರುಶು ಮೂರಾಳ, ಶಿವಪುತ್ರ ಅಜಮನಿ, ವಾಯ್ ವಾಯ್ ಚಲವಾದಿ, ಪರಶುರಾಮ ಚಲವಾದಿ, ಸಿದ್ದಪ್ಪ ಚಲವಾದಿ, ಈರಣ್ಣ ತಾರನಾಳ, ಗುಂಡಪ್ಪ ಚಲವಾದಿ, ಪ್ರಕಾಶ ಸರೂರ, ಪ್ರಶಾಂತ ಕಾಳೆ, ಹಣಮಂತ ಚಲವಾದಿ, ಸಿದ್ದು ಕಟ್ಟಿಮನಿ, ರೇವಣೇಪ್ಪ ಚಲವಾದಿ, ಶ್ರೀಕಾಂತ ಚಲವಾದಿ, ದೇವರಾಜ ಹಂಗರಗಿ, ಅಶೋಕ ಪಾದಗಟ್ಟಿ, ಯಲ್ಲಪ್ಪ ಅಜಮನಿ, ಕೆ ಎಂ ಇಬ್ರಾಹಿಂಪೂರ, ಸಂಗಮೇಶ ಚಲವಾದಿ, ಬಿ ಎನ್ ರಾಜು, ಮಹಾದೇವ ಕೇಸಾಪೂರ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 