‘ನ್ಯಾಯಾಧೀಶ ಡಿ.ಎಸ್.ನಕ್ಕರ್ ಸದಾ ಸ್ಮರಣೀಯರು’
'Judge D.S. Nakkar will always be remembered'
ರಾಯಬಾಗ 18: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ನಿವೃತ್ತ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿ ಹೋರಾಟ ಮಾಡಿದ ಪಿಂಚಣಿದಾರರ ಪಿತಾಮಹ, ನ್ಯಾಯಾಧೀಶ ಡಿ.ಎಸ್.ನಕ್ಕರ್ ಅವರು ಸದಾ ಸ್ಮರಣೀಯವಾಗಿದ್ದಾರೆ ಎಂದು ನಿವೃತ್ತ ಬಿಇಒ ಹಣಮಂತ ಭಜಂತ್ರಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪಿಂಚಣಿದಾರರ ಪಿತಾಮಹ ಡಿ. ಎಸ್. ನಕ್ಕರ್ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ. ಎಸ್. ನಕ್ಕರ್ ಮುಂಬೈ ನಗರದಲ್ಲಿ 1914ರಲ್ಲಿ ಜನಿಸಿ, ಕಾನೂನು ಪದವಿ ಪಡೆದು, ಮುಂಬೈ ಹೈಕೋರ್ಟಿನಲ್ಲಿ ವಕೀಲ ವೃತ್ತಿ ಜೀವನ ಆರಂಭಿಸಿ, ನಂತರ ಹೈಕೋರ್ಟಿನ ನ್ಯಾಯಾಧೀಶರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ ಇವರು, ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರು. ನಿವೃತ್ತಿ ನಂತರ ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ ಕೊಡಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ 1956 ರಲ್ಲಿ ದಾವೆ ಹೂಡಿ, ಸತತ 10 ವರ್ಷಗಳ ಕಾಲ ಹೋರಾಟ ನಡೆಸಿ, ದೇಶದ ಎಲ್ಲಾ ನಿವೃತ್ತ ನೌಕರಿಗೆ ನಿವೃತ್ತಿ ವೇತನ ಕೊಡಿಸಲು ಯಶಸ್ವಿಯಾದರು. ಅದಕ್ಕಾಗಿ ಇವರನ್ನು ಪಿಂಚಣಿದಾರರ ಪಿತಾಮನೆಂದು ನೌಕರರ ಬಳಗವು ಕರೆಯುತ್ತಾರೆ ಎಂದು ತಿಳಿಸಿದರು.
ಸರ್ಕಾರಿ ನಿವೃತ್ತ ಸಂಘ ಅಧ್ಯಕ್ಷ ಎಸ್. ಎಸ್.ಮೀಸೆ, ಎಸ್.ಡಿ.ಚಲವಾದಿ, ಅಪ್ಪಾಸಾಹೇಬ ಮುಗಳಖೋಡ, ಎಮ್.ಆರ್. ಮಠದ, ಎಸ್.ಎಸ್. ಕುಂದರಗಿ, ಜಿ.ಎಸ್. ಜುಮ್ಮಯ್ಯಿ, ಎಸ್.ಐ .ಅಲಾಸೆ, ಎಮ್.ಕೆ .ಶಿವಕ್ಕ ನ್ನವರ, ಪಿ.ಎಸ್.ಕುಲಗುಡೆ, ವ್ಹಿ.ಎಸ್.ಗುಣಕೆ, ಎಮ್.ಕೆ ಮಡಿವಾಳ, ಅಶೋಕ ದೇಶಿಂಗೆ ಸೇರಿ ಸಂಘದ ಸದಸ್ಯರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 