‘ಜಿನ ಭಜನೆ’ ನಮ್ಮ ಸಂಸ್ಕೃತಿ-ಪರಂಪರೆ ಬಿಂಬಿಸುವ ಉತ್ತಮ ಕಾರ್ಯಕ್ರಮ

 ‘ಜಿನ ಭಜನೆ’ ನಮ್ಮ ಸಂಸ್ಕೃತಿ-ಪರಂಪರೆ ಬಿಂಬಿಸುವ ಉತ್ತಮ ಕಾರ್ಯಕ್ರಮ 'Jina Bhajane' is a great program that reflects our culture and heritage.

ಹಾವೇರಿ 10 :  ನಮ್ಮ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ, ಪರಂಪರೆ ಹಾಗೂ ಜನಪದ ಬಿಂಬಿಸುವ ‘ಜಿನ ಭಜನೆ’ ಉತ್ತಮ ಕಾರ್ಯಕವಾಗಿದೆ. ಆಧುನಿಕ ಜೀವನ ಶೈಲಿ ಹಾಗೂ ಪಾಶ್ಚಿಮಾತ್ಯ ಅನುಕರಣೆಯಿಂದ, ನಮ್ಮ ಪುರಾತನ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಹಾಗೂ ಪರಂಪರೆ ಗೌನವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ,  ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಸಮಾಜದಲ್ಲಿ ಜಾಗೃತಗೊಳಿಸುವ ಅವಶ್ಯಕತೆ ಇದೆ ಎಂದು  ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ನುಡಿದರು.  

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ  ರವಿವಾರ ಭಾರತೀಯ ಜೈನ್ ಮಿಲನ್ ವಲಯ-8 ಬೆಂಗಳೂರು  ಹಾಗೂ  ಹಾವೇರಿ ಜೈನ್‌ಮಿಲನ್  ವತಿಯಿಂದ  ಆಯೋಜಿಸಲಾದ ದಾವಣಗೆರೆ ವಿಭಾಗದ ಜಿನ ಭಜನಾ ಸ್ಪರ್ಧೆಯ 9ನೇ ಆವೃತ್ತಿ ಕಾರ್ಯಕ್ರಮದ ಸಾಧನಿಧ್ಯ ವಹಿಸಿ ಆಶೀರ್ವವನ ನೀಡಿದ ಅವರು,  ಜಿನೇಂದ್ರ ಭಗವಂತನ  ಗುಣಗಾನ  ಹಾಗೂ ಸ್ಮರಣೆ  ಮಾಡುವ ‘ಜಿನ ಭಜನೆ’ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದು ಬಣ್ಣಿಸಿದರು.    

ಅರಿಹಂತ ಅಂದರೆ ಅಸಂಖ್ಯಾತ ಕರ್ಮ ನಿರ್ಜರವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.  ಜಿನ ಭಜನೆ ಸ್ಪರ್ಧೆ ಹಿನ್ನಲೆಯಲ್ಲಿ  ಎಲ್ಲರೂ ಭಕ್ತಿ ಭಾವದಿಂದ ಜಿನಭವನೆ  ಮಾಡುತ್ತುದ್ದೀರಿ. ಇದರಿಂದ ಸಾತೀಶ ಪುಣ್ಯ ಪ್ರಾಪ್ತವಾಗುತ್ತದೆ. ಜಿನ ಭಜನೆ ಸ್ಪರ್ಧೆಗೆ ಮಾತ್ರ ಮಾಡದೆ ಪ್ರತಿನಿತ್ಯ ಜಿನಭಗವಂತರ ಸ್ಮರಣೆ ಮಾಡಬೇಕು. ನೀತಿ-ನಿಯಮ, ಸಂಯಮ, ಶಿಷ್ಟಾಚಾರವನ್ನು ಮೈಗೂಡಿಸಿಕೊಳ್ಳಬೇಕು.  ವೇಗವಾಗಿ ಓಡುತ್ತಿರುವ ಕಾಲಘಟ್ಟದಲ್ಲಿ ಸಂಪ್ರದಾಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವುದು  ಅವಶ್ಯವಾಗಿದೆ. ಹಾಗಾಗಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸಂಸ್ಕಾರಗಳನ್ನು ಕಲಿಸಬೇಕು. ಇಂದಿನ ಪೀಳಿಗೆಗೆ  ಧರ್ಮದ ದರ್ಶನ ಮಾಡಿಸುವ ಜಿನ ಭಜನೆ  ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು.  

ಧರ್ಮಸ್ಥಳದ ಸುರೇಂದ್ರಕುಮಾರ್ ಹಾಗೂ  ಅನಿತಾ ಸುರೇಂದ್ರಕುಮಾರ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಂತಹ ಜಿನಭಜನಾ ಸ್ಪಧೆ ಕಾರ್ಯಕ್ರಮ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೈನರಿಗೆ ಹೊಸ ಯಾಮ ತಂದ ಜಿನಭಜನಾ ಕಾರ್ಯಕ್ರಮವಾಗಿದೆ.  ಈ ಕಾರ್ಯಕ್ರಮ ರಾಜ್ಯಾದ್ಯಂತ ಹೆಚ್ಚು ಪ್ರಚಲಿತವಾಗಿದೆ ಎಂದರು. ಈ ಕಾರ್ಯಕ್ರಮದ ಯಶಸ್ವಿಗೆ ಪ್ರತ್ಯಕ್ಷ ಹಾಗೂ  ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. 

ದರ್ಶನ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ತೀರ​‍್ುಗಾರರಾಗಿ  ನವೀನ ಜಾಂಬ್ಳೆ ಹಾಗೂ  ನಮೀತಾ ಜೈನ್ ಅವರು ಭಾಗವಹಿಸಿದ್ದರು.  

 ಜನಮನ ಸೂರೆಗೊಂಡ ಜಿನಭಜನೆ : ಜಿನಭಜನೆ ಕಾರ್ಯಕ್ರಮದಲ್ಲಿ “ ಜಿನ ಜಿನ ಅನಲಿಲ್ಲ ಒಂದಿನ ಬಸ್ತಿಗೆ ಬರಲಿಲ”್ಲ,  “ಪಾರ್ಶ್ವನಾಥ, ನೇಮಿನಾಥ, ಬಾಹುಬಲಿ, ಹಾಗೂ ಪದ್ಮಾವತಿ ಅಮ್ಮನವರು” ಸೇರಿದಂತ ಅನೇಕ ಜಿನಭಕ್ತಿ  ಹಾಡುಗಳ ಸುಸ್ರಾವ್ಯ ಭಜನೆಗಳು  ಜನಮನ ಸೂರೆಗೊಂಡವು ಹಾಗೂ  ಪ್ರೇಕ್ಷಕರ ಕರತಾಡನಕ್ಕೆ ಸಾಕ್ಷಿಯಾದವು.   

ಮಧ್ಯ ಕರ್ನಾಟಕ ದಾವಣಗೆರೆ ವಿಭಾಗಕ್ಕೆ ಸಂಬಂದಪಟ್ಟ ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯಗಳ ಒಟ್ಟು 38 ಕ್ಕೂ ಅಧಿಕ ತಂಡಗಳು ಸಂಪ್ರದಾಯಿಕ ಉಡುಗೆ-ತೊಡಿಗೆಗಳಲ್ಲಿ ಭಾಗವಹಿಸಿದ್ದವು. ಕಿರಿಯರ ವಿಭಾಗದಲ್ಲಿ 14 ಹಾಗೂ ಹಿರಿಯರ ವಿಭಾಗದಲ್ಲಿ 24 ತಂಡಗಳು ಭಾಗವಹಿಸಿದ್ದವು.  

ಜಿನಭವನಾ ಕೇಂದ್ರ ಸಮಿತಿ ವಿಲಾಸ್ ಪಾಸಣ್ಣವರ್, ದಾವಣಗೆರೆ ವಿಭಾಗ ಉಪಾಧ್ಯಕ್ಷ  ಹೆಚ್, ಪಿ.ಸುಮತಿ ಕುಮಾರ್, ಕಾರ್ಯದರ್ಶಿ ಭರತರಾಜ್ ಎಸ್‌. ಹಜಾರಿ, ಸಂಯೋಜಕ /ನಿರ್ದೇಶಕರಾದ  ಅರಿಹಂತ ದುಂಡಣ್ಣನವರ, ಸಂತೋಷ ಜೈನ್,  ವಿಮಲ ಬೋಗಾರ,  ಪ್ರೀತಮ್ ದುಂಡಶಿ,  ಪದ್ಮರಾಜ್ ಆರ್,  ಜ್ಯೋತಿ ಅಜ್ಜಪ್ಪ,  ಸಂಚಾಲಕ  ಮದನಕುಮಾರ ಎಸ್‌.ಎಸ್‌.,  ಹಾವೇರಿ ಜೈನ್ ಸಮಾಜ ಅಧ್ಯಕ್ಷ ಚಂದ್ರನಾಥ ಕಳಸೂರ,  ಹಾವೇರಿ ಜೈನ್ ಮಿಲನ್ ಅಧ್ಯಕ್ಷ ನವೀನ ಜಗಶೆಟ್ಟಿ,  ಉಪಾಧ್ಯಕ್ಷ ಮಹಾವೀರ ನಡುವಿನಮನಿ,  ಕಾರ್ಯದರ್ಶಿ ಪ್ರಶಾಂತ ಮುರಗಿ, ಸಂಚಾಲಕರಾದ ವಿಜಯ ಸಾತಗೊಂಡ ಹಾಗೂ ಸಂಜೀವಕುಮಾರ ಎಂ.ಇಂಡಿ ಹಾಗೂ ಹಾವೇರಿ ರತ್ನತ್ರಯ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಪ.ಕಳಸೂರ ಇತರರು  ಉಪಸ್ಥಿತರಿದ್ದರು.