‘ಸಂವಿಧಾನದ ಆಶಯದಂತೆ ನಡೆದುಕೊಳ್ಳುವದು ನಮ್ಮೆಲ್ಲರ ಕರ್ತವ್ಯ’

‘ಸಂವಿಧಾನದ ಆಶಯದಂತೆ ನಡೆದುಕೊಳ್ಳುವದು ನಮ್ಮೆಲ್ಲರ ಕರ್ತವ್ಯ’ 'It is the duty of all of us to act in accordance with the wishes of the Constitution'

ಲೋಕದರ್ಶನ ವರದಿ 

ಜಮಖಂಡಿ 27: ಸಂವಿಧಾನದ ಆಶಯದಂತೆ ನಡೆದುಕೊಳ್ಳುವದು ಭಾರತೀಯರಾದ ಪ್ರತಿಯೊಬ್ಬರ ಕರ್ತವ್ಯವಾಗಿದೆ. 1949 ರಲ್ಲಿ ಅಂಗೀಕಾರವಾದ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ, ದೇಶದ ಸರ್ವತೋನ್ಮುಖ ಅಭಿವೃದ್ಧಿಗೆ ಸ್ಥಾಪಿಸಿಕೊಂಡಿರುವ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ತಹಸೀಲ್ದಾರ ಅನೀಲ ಬಡಿಗೇರ ಹೇಳಿದರು.  

ನಗರದ ಬಸವಭವನದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯನ್ನು ಉದ್ದೇಶಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದ ಅವರು, ಸಂವಿಧಾನ ನೀಡಿರುವ ಕರ್ತವ್ಯಗಳನ್ನು ಪಾಲಿಸುವ ಮೂಲಕ ದೇಶದ ಸಮಗ್ರತೆ, ಎಕತೆ ಹಾಗೂ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. 

ಪೌರಾಯುಕ್ತ ಜೋತಿ ಗೀರೀಶ ಮಾತನಾಡಿ, ಡಾ,.ಅಂಬೇಡ್ಕರ ಅವರು ಹಲವಾರು ಮುಂದುವರೆದ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ಸಂವಿಧಾನವನ್ನು ರಚಿಸಿದರು. ಸ್ವಾತಂತ್ರ್ಯ ಬಂದಿತ್ತಾದರೂ ಸಮಾನತೆ ಇರಲ್ಲಿಲ್ಲ. ಸಂವಿಧಾನದ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸಿಕೊಡಲು ಮತ್ತು ಸಮಾನತೆ ನೀಡಲು ಸಾಧ್ಯವಾಯಿತು. ಶ್ರೇಷ್ಠವಾದ ಮತದಾನದ ಹಕ್ಕು ಎಲ್ಲರಿಗೂ ಸಂವಿಧಾನದಿಂದ ದೊರೆತಿದೆ. ಪ್ರತಿಯೊಬ್ಬರು ಸಂವಿಧಾನವನ್ನು ತಿಳಿದುಕೊಳ್ಳಬೇಕು ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು ಎಂದರು. 

ನಗರಸಭೆ ಅಧ್ಯಕ್ಷ ಈಶ್ವರ ವಾಳೇನ್ನವರ ಡಾ, ಬಿ,ಆರ್,ಅಂಬೇಡ್ಕರ ಅವರ ಭಾವಚಿತ್ರ. ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು,  ಡಾ,ಅರುಣ ಕಾಂಬಳೆ ವಿಶೇಷ ಉಪನ್ಯಾಸ ನೀಡಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ತಾ,ಪಂ,ಇಓ ಸಚೀನ ಮಾಚಕನೂರ, ಬಿಇಒ ಅಶೋಕ ಬಸನ್ನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ಪಾಸೋಡೆ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಂತೋಷ ಕಾಡಗಿ, ಅಬಕಾರಿ ಅಧಿಕಾರಿ ಗೀತಾ ಜಾಲಿಹಾಳ, ನಗರಸಭೆ ಸದಸ್ಯ ಕುಶಾಲ ವಾಗಮೋರೆ ವೇದಿಕೆಯಲ್ಲಿ ಉಪಸ್ಥಿತರಿದರು.  

ಕಾಟಾಚಾರಕ್ಕೆ ಸಂವಿಧಾನ ದಿನಾಚರಣೆ :  

ನಗರದ ಬಸವ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆಯ ಪ್ರಯುಕ್ತ ಆಮಂತ್ರಣದ ಪತ್ರಿಕೆಯಲ್ಲಿ ಪ್ರಕಟವಾದ ಆಮಂತ್ರಿಕರು ಕಾರ್ಯಕ್ರಮಕ್ಕೆ ಯಾರು ಹಾಜರಾಗದೆ ಗೈರು ಉಳಿದಿದರು.ಅದರ ಜೊತೆಗೆ ಸಾಕಷ್ಟು ಇಲಾಖೆಯ ಅಧಿಕಾರಿಗಳು ಸಹ ಕಾರ್ಯಕ್ರಮಕ್ಕೆ ಆಗಮಿಸದೆ ಇರುವುದು ಎದ್ದು ಕಾಣುತ್ತಿತ್ತು. ಇದೊಂದು ಕಾರ್ಯಕ್ರಮ ಕಾಟಾಚಾರಕ್ಕೆ ಆಯೋಜನೆ ಮಾಡಿದ್ದಾರೆಂದು ಕೆಲವಂದಿಷ್ಟು ಜನರು ಬೇಸರ ವ್ಯಕ್ತಪಡಿಸಿದರು. 

ಜಾಥಾ; 

ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ ಸರ್ಕಲನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರೆ​‍್ಣ ಮಾಡಿ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ ಅನೀಲ ಬಡಿಗೇರ ಸಂವಿಧಾನ ಪೀಠಿಕೆ ಭೋದಿಸಿದರು. ತೆರದ ವಾಹನದ ರಥದ ಜಾಥಾಕ್ಕೆ ಚಾಲನೆ ನೀಡಿದರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವಭವನಕ್ಕೆ ತಲುಪಿತು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಶಿಕ್ಷಕ,ಶಕ್ಷಕಿಯರು ಜಾಥದಲ್ಲಿ ಭಾಗವಹಿಸಿದರು. ತೆರೆದ ವಾಹನದ ರಥದಲ್ಲಿ ಡಾ,ಬಿ,ಆರ್,ಅಂಬೇಡ್ಕರ ಅವರ ವೇಶಭೂಷಣದ ಸಮವಸ್ತ್ರವನ್ನು ಧರಿಸಿದ್ದ ಮಕ್ಕಳು ಗಮನ ಸೆಳೆದರು.