‘ರಾಜ್ಯದಲ್ಲಿ ಅಸ್ಥಿರತೆ-ಬ್ರಹ್ಮಾಂಡ ಭ್ರಷ್ಟಾಚಾರಜಚಿ ತಾಂಡವ’
'Instability in the state - a cosmic corruption-ridden Tandava'
ಹುಬ್ಬಳ್ಳಿ: ದೇಶದಲ್ಲಿ ಎಲ್ಲಿಯೂ ಇಲ್ಲದ ಅಸ್ಥಿರತೆ ರಾಜ್ಯದಲ್ಲಿದ್ದು, ಶಾಸಕರು ಸೇರಿದಂತೆ ಯಾರ ಮೇಲು ನಿಯಂತ್ರಣ ಇಲ್ಲದಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಅಸ್ಥಿರತೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಭಯಂಕರ ಭ್ರಷ್ಟಾಚಾರದಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೆಂಗಳೂರು ಸೇರಿದಂತೆ ಕೆಲ ನಗರಗಳಲ್ಲಿ ಕಟ್ಟಡ ಪರವಾನಿಗೆ ಮತ್ತು ಪೂರ್ಣಗೊಂಡಿರುವ ಪ್ರಮಾಣ ಪತ್ರ ನೀಡಲು ಚದುರಡಿ ಮೇಲೆ ಲಂಚ ನಿಗದಿ ಮಾಡಿದ್ದಾರೆ. ಇದರಲ್ಲಿ ಸರಕಾರ ಅಥವಾ ರಾಜಕೀಯ ನಾಯಕರ ಪಾತ್ರದ ಖಚಿತತೆ ಇಲ್ಲ. ಆದರೆ ನಿಯಂತ್ರಣ ಮಾತ್ರ ಸಂಪುರ್ಣ ತಪ್ಪಿದೆ.
ರಾಜಕೀಯ ಅಸ್ಥಿರತೆ ಮುಗಿಯಲಿದೆ ಎಂದುಕೊಂಡಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಶಾಸಕರ ಖರೀದಿಗೆ ಮುಖಂಡರು ಮುಗಿಬಿದ್ದಿದ್ದಾರೆ. ಈ ವಿಚಾರದಲ್ಲಿ ಆ ಪಕ್ಷದ ಹೈಕಮಾಂಡ್ ಅಸಹಾಯಕವಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಒಬ್ಬರನ್ನೊಬ್ಬರು ಬಾವಿಗೆ ದೂಡಬೇಕು ಎಂದು ಷಡ್ಯಂತ್ರ ಮಾಡುತ್ತಿದ್ದಾರೆ. ಹೈಕಮಾಂಡ್ ಹೇಳಿದೆ ಎನ್ನುವ ಕಾರಣಕ್ಕೆ ಅರ್ಥ ಇಡ್ಲಿ ತಿನ್ನುವ ಅಗತ್ಯವಿತ್ತಾ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಹೈಕಮಾಂಡ್ ಗೆ ಕಮಾಂಡ್ ಇದ್ದರೆ ತಕ್ಷಣ ಗುದ್ದಾಟ ನಿಲ್ಲಿಸಬೇಕು. ಕರ್ನಾಟಕಕ್ಕೆ ಸುಸ್ಥಿರ ಪರಿಹಾರ ನೀಡಬೇಕು. ಒಂದು ವೇಳೆ ಆಡಳಿತ ಮಾಡಲು ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ. ಸಮೃದ್ಧ ರಾಜ್ಯದಲ್ಲಿ ಇದು ಒಳ್ಳೆಯದಲ್ಲ. ಎರಡೂವರೆ ವರ್ಷ ಆಗಿದೆ, ಬಿಡುತ್ತೇನೆ ಅಂತ ಸಿದ್ದರಾಮಯ್ಯ ಹೇಳಬಹುದಿತ್ತು. ಇಲ್ಲವೇ ಸಿದ್ದರಾಮಯ್ಯ ಹಿರಿಯರಿದ್ದಾರೆ ಅವರೇ ಮುಂದುವರೆಯಲಿ ಅಂತ ಡಿ.ಕೆ.ಶಿವಕುಮಾರ್ ಹೇಳಬಹುದಿತ್ತು. ಕದನಕ್ಕೆ ವಿರಾಮ ಇಲ್ಲ, ಮುಸುಕಿನ ಗುದ್ದಾಟ ಜೋರಾಗಿ ನಡೆದಿದೆ. ಜೈಲಿನಲ್ಲಿರುವ ಶಾಸಕರ ಬೆಂಬಲ ಕ್ರೂಢೀಕರಿಸಲು ಮುಂದಾಗಿದ್ದಾರೆ ವ್ಯಂಗ್ಯವಾಡಿದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 