‘ಹುಡುಕಾಟದ ಕಾಟ’ ಹಾಸ್ಯ ಕಾರ್ಯಕ್ರಮ

‘ಹುಡುಕಾಟದ ಕಾಟ’ ಹಾಸ್ಯ ಕಾರ್ಯಕ್ರಮ  'Hudukatada Kata' comedy show

ಲೋಕದರ್ಶನ ವರದಿ 

ಬೆಳಗಾವಿ 11: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಅಶ್ರಯದಲ್ಲಿ ಇದೇ ದಿನಾಂದ ದಿ. 13 ಶನಿವಾರದಂದು ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ "ಹುಡುಕಾಟದ ಕಾಟ" ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.   

ಅಧ್ಯಕ್ಷತೆಯನ್ನು ಎಸ್ ಬಿ ಐ ಬ್ಯಾಂಕ್ ನಿವೃತ್ತ ಅಧಿಕಾರಿ ಅರವಿಂದ ಹುನಗುಂದ ವಹಿಸಿಕೊಳ್ಳಲಿದ್ದು ಪ್ರಾಯೋಜಕತ್ವವನ್ನು ಬಿ.ಎಸ್‌.ಎನ್‌.ಎಲ್‌. ನಿವೃತ್ತ ಅಧಿಕಾರಿಗಳಾದ ಶ್ರೀಮತಿ ವಿಜಯಮಾಲಾ ಹೊಳ್ಳ  ಅವರು ವಹಿಸಿಕೊಂಡಿದ್ದಾರೆ.   

ಹುಡುಕಾಟದ ರಂಜನೀಯ ಅನುಭವಗಳನ್ನು ಮಿಮಿಕ್ರಿ ಕಲಾವಿದ ಜಿ.ಎಸ್‌. ಸೋನಾರ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಎಸ್‌. ವಿ. ದೀಕ್ಷಿತ, ಕನ್ನಡ ಉಪನ್ಯಾಸಕರಾದ ಡಾ.ಅ.ಬ.ಇಟಗಿ ಹಾಗೂ ಹಾಸ್ಯ ಲೇಖಕಿ, ನಗೆ ಮಾತುಗಾರ್ತಿ ದೀಪಿಕಾ ಚಾಟೆ ಹಂಚಿಕೊಳ್ಳಲಿದ್ದಾರೆ. ತಾನಾಜಿ ನಿರೂಪಿಸಲಿದ್ದಾರೆ.