ಕ.ವಿ.ವಿ ಯಲ್ಲಿ ’ಗಾಂಧಿ ಭಾರತ’ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ
'Gandhi Bharat' symposium and drama performance at K.V.V.
ಧಾರವಾಡ 11: ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ಗಾಂಧಿ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ರಂಗಾಯಣ, ಧಾರವಾಡ ಇವರ ಸಹಯೋಗದಲ್ಲಿ ಗಾಂಧಿ ಪುಣ್ಯತಿಥಿ ಹಾಗೂ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ’ನೈತಿಕ ಶಿಕ್ಷಣ: ಗಾಂಧಿ ದೃಷ್ಟಿಕೋನ’ ಕುರಿತು ವಿಚಾರ ಸಂಕೀರ್ಣ ಹಾಗೂ ’ಮರಳಿ ಮಾಹಾತ್ಮನೆಡೆಗೆ’ ನಾಟಕ ಪ್ರದರ್ಶನವನ್ನು ಕವಿವಿ ಕುಲಪತಿಗಳಾದ ಪ್ರೋ. ಎ.ಎಂ. ಖಾನ್ ಅವರು ಉದ್ಘಾಟಿಸಿ ಮಾತನಾಡಿದರು. ನಮ್ಮ ತಂದೆ -ತಾಯಿಗಳ ಗೌರವಕ್ಕೆ ಚ್ಯುತಿ ಬರದಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಕೇಳಿಕೊಳ್ಳಬೇಕು.
ಹಾಗೂ ಅವರ ಹೆಸರಿಗೆ ಕಳಂಕ ಬರದಂತೆ ನಮ್ಮ ನಡೆ -ನುಡಿ ಇರುವಂತೆ ನಾವೆಲ್ಲ ನೋಡಿಕೊಂಡರೆ ನಾವು ನೈತಿಕ ಮಾರ್ಗದಲ್ಲಿದ್ದೇವೆ ಎಂದೇ ಅರ್ಥ.ನಾವು ಕೊಡುವ ಶಿಕ್ಷಣ ನಮ್ಮನು ಕೇವಲ ಐಹಿಕ ಬದುಕಿಗೆ ಅನಿಗೊಳಿಸಿದೇ ನಮ್ಮೊಂದಿಗೆ ಸಾಮಾಜಿಕ ಜವಾಬ್ದಾರಿ ಇದೆ ಎಂಬ ಪ್ರಜ್ಞೆಯನ್ನು ರೂಪಿಸುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು. ಈ ದಿಶೆಯಲ್ಲಿ ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗ ಗುರಿಗಳ ದಾರಿ ಸರ್ವ ಕಾಲಕ್ಕೂ ಪ್ರಸ್ತುತವೆಂದರು. ಶ್ರೇಷ್ಠವಾದ ಗುರಿಯನ್ನು ಹೊಂದಿ ಸತ್ಯ, ನ್ಯಾಯ ಹಾಗೂ ಅಹಿಂಸಾ ಮಾರ್ಗದಲ್ಲಿ ನಡೆಯುವುದೇ ನೈತಿಕತೆ, ಎಲ್ಲ ಧರ್ಮಗಳ ಬೋಧನೆಯ ಮೂಲ ಸಾರಾ ಕೂಡ ಇದೇ ಆಗಿದ್ದು ಎಲ್ಲ ಜಾತಿ, ಮತ, ಪಂಥದವರನ್ನು ಒಳಗೊಳ್ಳುತ್ತ ಸಾಗುವುದೇ ಇಂದಿನ ಕಾಲದ ಕರೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಗದುಗಿನ ತೋಟದಾರ್ಯ ಮಠದ ಪೂಜ್ಯ ಶ್ರೀ ಸಿದ್ದರಾಮ ಸ್ವಾಮೀಜಿಯವರು ಶಿಕ್ಷಣದ ಉದ್ದೇಶ ಕೇವಲ ಉಪಜೀವನ ನಡೆಸುವಷ್ಟು ಶಂಕುಚಿತವಾಗಿರಬಾರದೆಂದರು. ಅದು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ನೈತಿಕವಾಗಿ ವಿದ್ಯಾರ್ಥಿಗಳನ್ನು ಸಮೃದ್ಧಗೊಳಿಸಬೇಕು. ಹಾಗೆಯೇ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುವ ಮುಖಾಂತರ ಆತ ಚಲನಶೀಲ, ಕ್ರಿಯಾಶೀಲನಾಗುವಂತೆ ನೋಡಿಕೊಳ್ಳಬೇಕು. ಸಾಕ್ಷರತೆ ಎಂಬುದು ಶಿಕ್ಷಣದ ಆದಿಯೂ ಅಲ್ಲ ಅಂತ್ಯವೂ ಅಲ್ಲ ಬದಲಿಗೆ ಅದು ವ್ಯಕ್ತಿಯ ಸಮಗ್ರ ವಿಕಾಸದ ಸಾಧನವಾಗಿದೆ ಎಂಬುದು ಗಾಂಧೀಜಿಯವರ ಸ್ಪಷ್ಟ ನಿಲುವಾಗಿತ್ತು. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯ ಜೊತೆಗೆ ಹೃದಯವಂತಿಕೆ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಏಕಕಾಲಕ್ಕೆ ವೃದ್ಧಿಸುವ ಶಿಕ್ಷಣ ನೀಡಿದಾಗ ಮಾತ್ರ ಸರ್ವಾಂಗ ಸುಂದರ ವ್ಯಕ್ತಿತ್ವ ನಿರ್ಮಾಣ ಮಾಡಲು ಸಾಧ್ಯವೆಂದರೆ ಡಾ. ಶೌಖತ್ ಅಝೀಮ್ ಅಧ್ಯಕ್ಷತೆ ವಹಿಸಿದ್ದರು.
ನಂತರ ನಡೆದ ಉಪನ್ಯಾಸ ಹಾಗೂ ಸಂವಾದ ಗೋಷ್ಠಿಯಲ್ಲಿ ಆಪ್ತ ಸಮಾಲೋಚಕರಾದ ಡಾ. ಗುರುರಾಜ್ ಪಾಟೀಲ್ ಮಾತನಾಡಿದರು. ಡಾ. ಸುರೇಶ ಸಮ್ಮಸಗಿ ಪ್ರತಿಕ್ರಿಯಿಸಿದರು. ಹಿರಿಯ ಲೇಖಕ ಶ್ರೀ ವೆಂಕಟೇಶ್ ಮಾಚಕನೂರು ಅಧ್ಯಕ್ಷೀಯ ಮಾತುಗಳಾಡಿದರು. ಪ್ರೋ. ಶಿವಾನಂದ್ ಶೆಟ್ಟರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಡಾ. ಎಸ್. ಬಿ. ಬಸೆಟ್ಟಿ ಸ್ವಾಗತ ಮತ್ತು ವಂದಿಸಿದರು. ನಂತರ ರಂಗಾಯಣದ ನಿಕಟ ಪೂರ್ವ ನಿರ್ದೇಶಕ ದಿ.ರಾಜು ತಾಳಿಕೋಟಿ ಪರಿಕಲ್ಪನೆಯ ’ಮರಳಿ ಮಾಹಾತ್ಮ ನೆಡೆಗೆ’ ನಾಟಕವನ್ನು ಧಾರವಾಡದ ರಂಗಾಯಣ ರೆಪರ್ಟಿರಿ ಕಲಾವಿದರು ಪ್ರಸ್ತುತಪಡಿಸಿದ್ದರು. ಡಾ. ಎಂ. ಬಿ. ದಳಪತಿ. ರಂಗಾಯಣದ ಆಡಳಿತ ಅಧಿಕಾರಿ ಶಶಿಕಲಾ ಹುಡೇದ, ಸಿಂಡಿಕೇಟ್ ಸದಸ್ಯ ಮಹೇಶ್ ಹುಲ್ಲಣ್ಣವರ, ಗಾಂಧಿ ಚಿಂತಕ ನೀಲೇಶ್ ಬೇನಾಳ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 