ಆಲ್ ಇಂಡಿಯಾ ಮುಶಾಯರಾ ಸಮಿತಿಯಿಂದ ಆಗಸ್ಟ್ನಲ್ಲಿ ’ಏಕ್ ಶಾಮ್ ಪಂಕಜ್ ಉದಾಸ್ ಕೆ ನಾಮ್’ ಕಾರ್ಯಕ್ರಮ
'Ek Shaam Pankaj Udhas Ke Naam' programme by the All India Mushaira Committee in August
ಕೊಪ್ಪಳ 18: ಆಲ್ ಇಂಡಿಯಾ ಮುಶಾಯರಾ ಸಮಿತಿ, ಕೊಪ್ಪಳ ವತಿಯಿಂದ ಆಗಸ್ಟ್ ತಿಂಗಳ ಎರಡನೇ ಅಥವಾ ನಾಲ್ಕನೇ ಶನಿವಾರ ರಾತ್ರಿ ’ಏಕ್ ಶಾಮ್ ಪಂಕಜ್ ಉದಾಸ್ ಕೆ ನಾಮ್’ ಶೀರ್ಷಿಕೆಯಡಿ ವಿಶೇಷ ಗಝಲ್ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.
ಶುಕ್ರವಾರ ಸಂಜೆ ನಗರದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮವನ್ನು ನಗರದ ಸಾಹಿತ್ಯ ಭವನದಲ್ಲಿ ನಡೆಸುವ ಉದ್ದೇಶವಿದ್ದು, ಸ್ಥಳ ಹಾಗೂ ದಿನಾಂಕ ಅಂತಿಮಗೊಂಡ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾಗ್ಮಿ ಹಾಗೂ ಸಾಹಿತಿ ಎಂ. ಬದಿಯುದ್ದೀನ್ ಅಹ್ಮದ್ ನವೀದ್, ಪ್ರತಿವರ್ಷದಂತೆ ಈ ವರ್ಷವೂ ಅಖಿಲ ಭಾರತ ಬೃಹತ್ ಕವಿ ಗೋಷ್ಠಿ ಹಾಗೂ ಕವಿ ಸಮ್ಮೇಳನವನ್ನು ಅಕ್ಟೋಬರ್ ಬದಲಾಗಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಿರಿಯ ಸಾಹಿತಿ ಅನ್ವರ್ ಹುಸೇನ್, ನಗರಸಭೆಯ ಮಾಜಿ ಸದಸ್ಯ ಎಂ. ಮಾನ್ವಿ ಪಾಷಾ, ಯುವ ಮುಖಂಡ ಆದಿಲ್ ಪಟೇಲ್, ಹಿರಿಯ ಉರ್ದು ಸೇವಕ ಅಬ್ದುಲ್ ಸಮದ್ ಸಿದ್ದೀಕಿ, ನಿವೃತ್ತ ಶಿಕ್ಷಕ ಅಮೀರ್ ಹಮ್ಜಾ ನದಾಫ್, ಅಂಚೆ ನೀರೀಕ್ಷಕ ಹಾಗೂ ಗಝಲ್ ಗಾಯಕ ದಾವೂದ್ ಹುಣಗುಂದ, ಸೈಯದ್ ಇಮಾಮ್ ಹುಸೇನ್ ಸಿಂದೋಗಿ, ಉರ್ದು ಕವಿ ಎಂ. ವಿಜಾರತ್ ಅಲಿ, ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ, ಉದ್ಯಮಿ ಹಬೀಬ್ ಖಾನ್, ಯುವ ನಾಯಕ ಸಿರಾಜ್ ಲಾಟ್, ಗಾಯಕ ಸಿದ್ದೀಕ್ ಹುಸೇನ್ ಕಕ್ಕಿಹಳ್ಳಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 