‘ಶಿಕ್ಷಣ ಕೇಂದ್ರಗಳು ಅಕ್ಷರ ಜ್ಞಾನದೋಂದಿಗೆ, ನೈತಿಕ ಜ್ಞಾನ ಕೊಡುವ ಕೇಂದ್ರಗಳಾಗಬೇಕು’
'Educational centers should be centers that impart moral knowledge along with literacy'
ಇಂಡಿ 01: ತಾಲ್ಲೂಕಿನ ಹಿರೇರೂಗಿಯ ಶ್ರೀ ಸ್ವಾಮಿ ವಿವೇಕಾನಂದ ಪೂರ್ವ-ಹಿರಿಯ ಪ್ರಾಥಮಿಕ ಶಾಲೆಯ 2025/26ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಜ್ಯೋತಿ ಬೆಳಗಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ಶಿಕ್ಷಣ ಕೇಂದ್ರಗಳು ಕೇವಲ ಅಕ್ಷರ ಜ್ಞಾನ ನೀಡುವ ಕೇಂದ್ರಗಳಲ್ಲ, ನೈನಿಕ, ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವ ಕೇಂದ್ರಗಳಾಗಬೇಕು ಎಂದು ಮಾತನಾಡಿದರು.
ಕಾರ್ಯಕ್ರವನ್ನು ರೇಬಿನ ಕಟ್ಟಮಾಡಿ ಉದ್ಘಾಟನೆ ನೆರವೇರಿಸಿದ ಬಿಜೆಪಿ ಮಂಡಲದ ಅಧ್ಯಕ್ಷರಾದ ಹಣಮಂತರಾಯಗೌಡ ಪಾಟೀಲರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಸತತ 17 ವರ್ಷಗಳಿಂದ ನೀಡುತ್ತಿರುವ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ ಶ್ರಮ ಮತ್ತು ಗುಣಮಟ್ಟ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಗಡ್ಡೇಪ್ಪ.ಜೆ. ಗಿಣ್ಣಿ ಸ್ವಾಗತಿ ಶಾಲೆ ನಡೆದು ಬಂದ ದಾರಿ ಬಗ್ಗೆ ಮಾತನಾಡಿದರು.
ವೇದಿಕೆ ಮೇಲೆ ದಿವ್ಯ ಸಾನಿಧ್ಯ ವಹಿಸಿದ ಮಾತೋಶ್ರೀ ಸುಗಲಾದೇವಿ, ಹಾಗೂ ಶ್ರೀ ಜೆಟ್ಟೀಂಗೇಶ್ವರ ಗದ್ದುಗೆ ಪೂಜಾರಿ ಶ್ರೀ ಮಲ್ಲಪ್ಪ ಪೂಜಾರಿ ವಹಿಸಿದರು.ಮುಖ್ಯಅಥಿತಿಗಳಾಗಿ.ಮಾಜಿ ಗ್ರಾಂ ಪಂ.ಅಧ್ಯಕ್ಷರಾದ ಶ್ರೀಶೇಲ ಗಿಣ್ಣಿ, ಪಿಕೆಪಿಎಸ ಅಧ್ಯಕ್ಷರಾದ ಪರಶುರಾಮ ಹತ್ತರಕಿ, ಅಧ್ಯಕ್ಷರು ಟಿ ಎಮ್ ವ್ಹಿ ಸಂಘದ ಅನೀಲ ಪತಂಗಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ,ನೌಕರ ಸಂಘದ ಉಪಾಧ್ಯಕ್ಷ ರವಿ ಗಿಣ್ಣಿ,ಸಿ ಆರ್ ಪಿ.ಮಂಜುನಾಥ ತೇಲಿ, ಸಂಸ್ಕೃತ ಪಾಠಶಾಲೆಯ ಮುಖ್ಯಗುರುಗಳಾದ ಎಸ್ ಸಿ ಇಂಡಿ, ಗ್ರಾಂ ಪಂಚಾಯತ ಸದಸ್ಯರಾದ ಉಮೇಶ ಹಲಸಂಗಿ, ಪರಶುರಾಮ ಹೊಸಮನಿ, ಶ್ರೀಶೈಲ ಗುನ್ನಾಪೂರ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದ್ಯಾವಪ್ಪ ಹಿರೇಕುರಬರ ನಿರೂಪಿಸಿ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 