’ದುಡಿಯೋಣ ಬಾ ಅಭಿಯಾನ’ ಆರ್ಥಿಕ ಸದೃಢತೆಗೆ ಕಾರಣ: ವಿಶ್ವನಾಥ ಹೊಸಮನಿ
'Dudiyonu Ba' campaign is the reason for economic strength: Vishwanath Hosamani
ಮುಂಡರಗಿ 07: ನರೇಗಾ ಕೂಲಿ ಮೊತ್ತ 370 ರೂಗಳಿಗೆ ಹೆಚ್ಚಳವಾಗಿದ್ದು, ಗ್ರಾಮೀಣ ಭಾಗದ ಅಕುಶಲ ಕೂಲಿಕಾರ್ಮಿಕರು ಆರ್ಥಿಕವಾಗಿ ಸದೃಢರಾಗಲು ಕಾರಣವಾಗಿದೆ ಎಂದು ತಾಪಂ ಇಓ ವಿಶ್ವನಾಥ ಹೊಸಮನಿ ಹೇಳಿದರು. ತಾಲೂಕಿನ ಡೋಣಿ ಗ್ರಾಪಂ ಕಚೇರಿಯಲ್ಲಿ ’ದುಡಿಯೋಣ ಬಾ’ ಅಭಿಯಾನದ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಕೆಲಸದ ಕೊರತೆ ಗ್ರಾಮೀಣ ಭಾಗದ ಜನರನ್ನು ಭಾದಿಸುತ್ತಿರುತ್ತದೆ. ಆ ಕೊರತೆ ನೀಗಿಸಲು ನರೇಗಾ ಯೋಜನೆಯನ್ನು ಜನರು ಬಳಸಿಕೊಂಡು ಸದ್ಬಳಕೆಯಾಗಬೇಕು ಎಂದರು ನರೇಗಾ ಕಾಮಗಾರಿಗಳಲ್ಲಿ ಎನ್ ಎಂಎಂಎಸ್ ಆ್ಯಪ್ ಮೂಲಕ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದ್ದು,
ಈ ವಿಧಾನದಿಂದ ಮಾತ್ರ ಕೂಲಿಕಾರರಿಗೆ ಕೂಲಿಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನಿರುದ್ಯೋಗ ಹಾಗೂ ಆರ್ಥಿಕ ಸಂಕೋಲೆಯಿಂದ ತತ್ತರಿಸುವ ಬಡವರಿಗೆ ಈ ಅಭಿಯಾನ ಸಹಕಾರಿ. ಹಾಗಾಗಿ ಜಾಬ್ ಕಾರ್ಡ್ ಇಲ್ಲದ ದುರ್ಬಲ ವರ್ಗದವರಿಂದ ಅಗತ್ಯ ದಾಖಲೆ ಪಡೆದು ಉದ್ಯೋಗ ಚೀಟಿ ನೀಡುವುದು, ಕೆಲಸದ ಬೇಡಿಕೆ ಪಡೆಯುವ ಕಾರ್ಯವನ್ನು ತಾಲೂಕಿನ ಸಂಬಂಧಿಸಿದ ನರೇಗಾ ಸಿಬ್ಬಂದಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಅಷ್ಟು ದಿನ ಕೂಲಿಕಾರರಾಗಿ ಭಾಗವಹಿಸಿ ಯೋಜನೆಯ ಸಂಪೂರ್ಣ ಲಾಭ ಪಡೆದರೆ 37000 ರೂಪಾಯಿ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ.
ಗ್ರಾಮೀಣ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ, ಬದು ಮುಂತಾದ ಕೃಷಿ ಚಟುವಟಿಕೆ ಜೊತೆಗೆ ಕೆರೆ ಹೂಳೆತ್ತುವುದು, ಜಲಮೂಲಗಳ ದಡದಲ್ಲಿ ಅರಣ್ಯೀಕರಣ, ನೆಡುತೋಪು ನಿರ್ಮಾಣ, ಕಾಲುವೆಗಳ ಪುನಶ್ಚೇತನ ಸೇರಿದಂತೆ ಮುಂತಾದ ಕಾರ್ಯಗಳಿಗೆ ಅವಕಾಶವಿದೆ ಹಾಗಾಗಿ ಯೋಜನೆಯ ಸಮರ್ಕ ಅನುಷ್ಟಾನಕ್ಕಾಗಿ ಅಭಿಯಾನವನ್ನು ಯಶಗೊಳಿಸಲು ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು. ಈ ವೇಳೆ ಸಹಾಯಕ ಕೃಷಿ ಇಲಾಖೆ ಅಧಿಕಾರಿ ಎಸ್ ಬಿ ರಾಮೇನಹಳ್ಳಿ, ಪಿಡಿಓ ಪಾರ್ವತಿ ಹೊಂಬಳ, ಗ್ರಾಪಂ ಸದಸ್ಯರು, ಬಿಎಫ್ ಟಿ, ಜಿಕೆಎಂ, ಕಾಯಕಬಂಧುಗಳು ಹಾಗೂ ಸಾರ್ವಜನಿಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 