‘ಪ್ರಾಣಿ ಪಕ್ಷಿಗಳ ಬದುಕುವ ಹಕ್ಕು ಕಸಿಯಬೇಡಿ’

‘ಪ್ರಾಣಿ ಪಕ್ಷಿಗಳ ಬದುಕುವ ಹಕ್ಕು ಕಸಿಯಬೇಡಿ’ 'Don't take away the right to live of animals and birds'

ಲುಧಿಯಾನಾ ಪಕ್ಷಿಧಾಮದಲ್ಲಿ ಪಕ್ಷಿಗಳಿಗೆ ಆಹಾರ ನೀಡಿದ ಕಾಶಿ ಪೀಠದ ಜಗದ್ಗುರುಗಳು 

ಧಾರವಾಡ, 15 : ಭಗವಂತನು ನಿಸರ್ಗದ ಸಕಲ ಜೀವಿಗಳಿಗೂ ಬದುಕುವ ಹಕ್ಕನ್ನು ಕರುಣಿಸಿದ್ದಾನೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದು ಅಹಿಂಸೆಗೆ ವಿರುದ್ಧವಾಗಿದ್ದು, ಎಲ್ಲಿಯೂ ಯಾರೂ ಪ್ರಾಣಿ ಪಕ್ಷಿಗಳ ಬದುಕುವ ಹಕ್ಕು ಕಸಿಯಬಾರದೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.  

ಅವರು ಮಂಗಳವಾರ ಪಂಜಾಬ ರಾಜ್ಯದ ಲುಧಿಯಾನಾ ನಗರದ ದುರ್ಗಾಮಾತಾ ಮಂದಿರ ಬಳಿ ಅಲ್ಲಿಯ ಪಕ್ಷಿ ಸೇವಾ ಸೊಸೈಟಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ವಿಶಿಷ್ಟ ಪಕ್ಷಿಧಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷಿ ಸಂಕುಲದ ಆಹಾರಕ್ಕಾಗಿ ಧಾನ್ಯಗಳನ್ನು ಹಾಕಿ ಸದಾಶಯ ಸಂದೇಶ ನೀಡಿ ಮಾತನಾಡುತ್ತಿದ್ದರು. ದಯೆ ಎಲ್ಲಾ ಧರ್ಮಗಳ ಮೂಲವಾಗಿದ್ದು, ಈ ನೀತಿಯನ್ನು ನೆನಪಿನಲ್ಲಿಟ್ಟುಕೊಂಡು ಎಲ್ಲಿಯೂ ಹಿಂಸೆಗೆ ಅವಕಾಶ ನೀಡದೇ ಪ್ರಾಣಿ ಪಕ್ಷಿ ಸಂಕುಲದ ಸಂರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದರು.  

ಆದರ್ಶದ ಉಪಕ್ರಮ : ಇಲ್ಲಿ ಬೆಳೆಸಲಾಗಿರುವ ವಿಭಿನ್ನ ಗಿಡಗಳಲ್ಲಿ ದೇಶ ವಿದೇಶಗಳ ಪಕ್ಷಿ ಸಂಕುಲ ವಿವಿಧ ಋತುಗಳಲ್ಲಿ ಬಂದು ನೆಲೆಸುತ್ತವೆ. ನಿತ್ಯವೂ ಒಂದು ಕ್ವಿಂಟಲ್ ದವಸ ಧಾನ್ಯಗಳನ್ನು ಪಕ್ಷಿಗಳ ಆಹಾರಕ್ಕೆಂದೇ ಒದಗಿಸುವ ಜೊತೆಗೆ ವಿಶೇಷವಾಗಿ ಬ್ರೆಡ್, ಹಾಲು, ಪನ್ನೀರ ಇವುಗಳನ್ನೂ ಸಹ ಪಕ್ಷಿಗಳ ಆಹಾರಕ್ಕಾಗಿ ನೀಡಲಾಗುತ್ತಿದ್ದು, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುವ ಪಕ್ಷಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತವರ ಚಿಕಿತ್ಸಾ ವಿಭಾಗವನ್ನೂ ಇಲ್ಲಿ ನಿರ್ಮಾಣ ಮಾಡಲಾಗಿದ್ದು, ಇದೊಂದು ಆದರ್ಶದ ಉಪಕ್ರಮ. ಕಳೆದ ಒಂದು ವಾರದಿಂದ ಅಸ್ವಸ್ಥವಾಗಿದ್ದ ಹದ್ದಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದರಿಂದ ಆ ಹದ್ದನ್ನು ಮತ್ತೆ ಪ್ರಕೃತಿ ಬದುಕಿಗೆ ಮುಕ್ತಗೊಳಿಸಿ ನಾವು ಹಾರಿಬಿಟ್ಟಿದ್ದು ತಮಗೆ ವೈಯಕ್ತಿಕವಾಗಿ ಅತ್ಯಂತ ಖುಷಿಯ ಕ್ಷಣಗಳಾಗಿದ್ದವು ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.  

ಪಕ್ಷಿ ಸಂರಕ್ಷಣೆಗೆ ತಮ್ಮನ್ನು ಸಮರ​‍್ಿಸಿಕೊಂಡಿರುವ ಪಕ್ಷಿ ಸೇವಾ ಸೊಸೈಟಿಯ ಅಧ್ಯಕ್ಷ ಅಶೋಕ ಥಾಪರ್, ಪದಾಧಿಕಾರಿಗಳಾದ ಸಂಜಯ ಥಾಪರ್, ದರ್ಶನಲಾಲ್ ಲಡ್ಡು ಅವರು ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ಗೌರವಿಸಿ ಆಶೀರ್ವಾದ ಪಡೆದರು.