‘ಬಂಜೆತನದಂತಹ ರೋಗಗಳು ಗಂಡು-ಹೆಣ್ಣಿನಲ್ಲಿ ಕಾಡುತ್ತಿವೆ’
'Diseases like infertility are rampant among both men and women'
ಜಮಖಂಡಿ 08: ತಂಬಾಕು, ಮಾವಾ, ಗುಟ್ಕಾ, ಸಿಗರೇಟ್, ಮಧ್ಯಪಾನ ಮುಂತಾದ ಚಟಗಳು, ವ್ಯಾಯಾಮ ರಹಿತ ಒತ್ತಡದ ಜೀವನಶೈಲಿಯಿಂದಾಗಿ ಸಕ್ಕರೆ ಕಾಯಿಲೆ ಜೊತೆಗೆ ಬಂಜೆತನದಂತಹ ರೋಗಗಳು ಗಂಡು-ಹೆಣ್ಣಿನಲ್ಲಿ ಕಾಡುತ್ತಿವೆ. ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ವಿಜಯಪುರದ ಬಂಜೆತನ ನಿವಾರಣೆ ಡಾ. ಎ.ಎ.ಮಾಗಿ ಹೇಳಿದರು.
ನಗರದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಂಕ್ ಫುಡ್ ಒತ್ತಡದ ಜೀವನ ಶೈಲಿ, ವ್ಯಾಯಾಮ ರಹಿತ ಜೀವನದಿಂದಾಗಿ ಬಂಜೆತನದಂತಹ ರೋಗಗಳು ಕಾಡುತ್ತಿವೆ.ಮಧುಮೇಹ ತಜ್ಞನಾಗಿ, ಸೇವೆ ಸಲ್ಲಿಸುತ್ತಿದ್ದೇನೆ, ಕಳೆದ 12 ವರ್ಷಗಳಿಂದ ಬಂಜೆತನ ನಿವಾರಣೆಗೆ ಆಯುರ್ವೇದದ ಚಿಕಿತ್ಸೆ ನೀಡುತ್ತಿದ್ದು ಇದರಿಂದ ಸಾಕಷ್ಟು ಜನರಿಗೆ ಮಕ್ಕಳನ್ನು ಪಡೆಯುವ ಭಾಗ್ಯ ದೊರೆತಿದೆ ಎಂದರು.
ನಮ್ಮ ತಂದೆಯವರು ಆಯುರ್ವೇದ ತಜ್ಞರಾಗಿದ್ದರು. ಅವರು ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡುತ್ತಿದ್ದರು, ಅವರು ತೀರಿಹೊಗಿದ್ದರಿಂದ ಸಾರ್ವಜನಿಕರ ಒತ್ತಡದ ಮೆರೆಗೆ ತಾವೇ ಸ್ವತಹ ಕೆಲ ಬದಲಾವಣೆಯನ್ನು ಮಾಡಿಕೊಂಡು ಮಕ್ಕಳಾಗದವರಿಗೆ ಚಿಕಿತ್ಸೆ ನೀಡುತ್ತಿದ್ದು ಉತ್ತಮ ಫಲಿತಾಂಶ ಬಂದಿದೆ ಎಂದರು.
ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು, ಆಹಾರದಲ್ಲಿ ತರಕಾರಿ ಹಣ್ಣುಗಳನ್ನು ಬಳಸುವದು ನಿಯಮಿತ ವ್ಯಾಯಾಮ ಹಾಗೂ ವಾಕಿಂಗ್‌ನಿಂದ ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ಮಹಿಳೆಯರಲ್ಲಿ ಮಾತ್ರ ಸಮಸ್ಯೆ ಇದೆ ಎಂದು ಭಾವಿಸಲಾಗದ್ದು. ಆದರೆ ಗಂಡು ಮಕ್ಕಳಲ್ಲಿಯೂ ಬಂಜೆತನದ ಸಮಸ್ಯೆ ಇರುತ್ತದೆ. ಆರೋಗ್ಯಕರ ವೀರ್ಯ ಉತ್ಪತ್ತಿ ಇರದ ಕಾರಣ ಬಂಜೆತನ ಬಂದಿರುತ್ತದೆ ಅದಕ್ಕಾಗಿ ಗಂಡಸರನ್ನು ಪರಿಕ್ಷೆಗೆ ಒಳಪಡಿಸಿ ಸರಿಯಾದ ಚಿಕಿತ್ಸೆಯಿಂದ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ ಎಂದರು.
ಸಕ್ಕರೆ ಕಾಯಿಲೆಯಿಂದ ಬಳಲುವರು ಸೂಕ್ತ ಚಿಕಿತ್ಸೆ, ಸರಿಯಾದ ವೈದ್ಯರ ಮಾರ್ಗದರ್ಶನ ಪಡೆದು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಸಕ್ಕರೆ ಕಾಯಿಲೆಯು ಬಂಜೆತನಕ್ಕೆ ಕಾರಣವಾಗಿದೆ. ಅದರಂತೆ ಹೆಣ್ಣು ಮಕ್ಕಳಲ್ಲಿಯೂ ಅನೇಕ ತೊಂದರೆಗಳಿರುತ್ತವೆ. ಸರಿಯಾದ ತಪಾಸಣೆ ನಡೆಸಿ, ಚಕಿತ್ಸೆ ಪಡೆದರೆ ಬಂಜೆತನ ನಿವಾರಿಸಿಕೊಳ್ಳಬಹುದು. ತಮ್ಮ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 4 ತಿಂಗಳ ಚಿಕಿತ್ಸೆ ಪಡೆದರೆ ಬಂಜೆ ತನದಿಂದ ಮುಕ್ತಿ ಪಡೆಯಬಹುದು ಎಂದರು. ಹೆಚ್ಚಿನ ಮಾಹಿತಿಗೆ 9448210446, ಅಥವಾ 9986251796 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 