‘ಮಕ್ಕಳಿಗೆ ದೈಹಿಕ ಚಟುವಟಿಕೆಗಳನ್ನು ನೀಡಿದಾಗ ಮಾತ್ರ ಸದೃಢರಾಗಲು ಸಾಧ್ಯ’

‘ಮಕ್ಕಳಿಗೆ ದೈಹಿಕ ಚಟುವಟಿಕೆಗಳನ್ನು ನೀಡಿದಾಗ ಮಾತ್ರ ಸದೃಢರಾಗಲು ಸಾಧ್ಯ’ 'Children can only be fit when they are given physical activities'

ಅಭಿಶಿಕ್ಷಣ ಕಾರ್ಯಕ್ರಮ 

ಧಾರವಾಡ 05: ನಗರದ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಗಳೊರಿನ ರಾಷ್ಟ್ರೋತ್ಹಾನ ಪರಿಷತ್ತಿನ ಸಹಯೋಗದೊಂದಿಗೆ 1 ರಿಂದ 7 ನೇ ತರಗತಿಯ ಪಾಲಕರಿಗಾಗಿ ಅಭಿಶಿಕ್ಷಣ ಕಾರ್ಯಕ್ರಮವನ್ನು  ದಿ. 05  ರಂದು  ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.  

ಈ ಸಮಾರಂಭಕ್ಕೆ ಧಾರವಾಡದ  ರಾಷ್ಟ್ರೋತ್ಹಾನ ವಿದ್ಯಾ ಕೇಂದ್ರದ ಸಂಸ್ಕೃತ ಅಧ್ಯಾಪಕರಾದ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ಪ್ರಾಚಾರ್ಯರಾದ ರೇಣು. ವಿ.  ಪಾಟೀಲ್,   ಶಾಲೆಯ ಸಹ ಸಂಯೋಜಕರಾದ  ಕಮಲಾಕ್ಷಿ ಸಣ್ಣಕ್ಕಿ ಹಾಗೂ ಪ್ರಿಯಾಂಕಾ ದೇಸಾಯಿ ಅವರು ಉಪಸ್ಥಿತರಿದ್ದರು.  

ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಬೆಳೆಸಬೇಕು. ಮಕ್ಕಳಿಗೆ ಆರೋಗ್ಯಕರ, ದೈಹಿಕ ಚಟುವಟಿಕೆಗಳನ್ನು ನೀಡಿದಾಗ ಮಾತ್ರ ಮಕ್ಕಳು ಸದೃಢರಾಗಲು ಸಾಧ್ಯ. ಮಕ್ಕಳಿಗೆ ಸೋಲು, ಕಷ್ಟ ನಷ್ಟಗಳನ್ನು  ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಬೇಕು. ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಯನ್ನು ಬೆಳೆಸುವಲ್ಲಿ ಶಿಸ್ತು, ಸಮಯ ಹಾಗೂ ಭಾರತೀಯ ಮೌಲ್ಯಗಳ ಮಹತ್ವ ತಿಳಿಸಿ ಕೊಡುವಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಅತ್ಯಂತ ಹಿರಿಯದಾಗಿದೆ.. ಪಾಲಕರು ಮನೆಯಲ್ಲಿ ಪ್ರತಿನಿತ್ಯ ಪ್ರಾರ್ಥನೆಯ ಮೌಲ್ಯಗಳನ್ನು  ಬೆಳೆಸಿದಾಗ ಮಕ್ಕಳಲ್ಲಿ ಒಳ್ಳೆಯ ಗುಣ ಧರ್ಮಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಅಡಗಿರುವ ಸಕಾರಾತ್ಮಕ ಗುಣಗಳನ್ನು  ಗುರುತಿಸಿ ಪ್ರಶಂಸಿಸುವ ಮನಸ್ಥಿತಿಯನ್ನು ಪಾಲಕರು ಹಾಗೂ ಶಿಕ್ಷಕರು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಮಕ್ಕಳಿಗೆ ಧನಾತ್ಮಕ ಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ. ಆಗ ಮಾತ್ರ ಮಕ್ಕಳು ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದು ತಿಳಿಸಿಕೊಟ್ಟರು. ಹೀಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳು ಪ್ರಗತಿಯ ಪಥದಲ್ಲಿ ಸಾಗುವಂತೆ ಮಾಡಲು ಪಾಲಕರಿಗೆ ಮಾರ್ಗದರ್ಶನ ನೀಡಿದರು.   

ಈ ಕಾರ್ಯಕ್ರಮವನ್ನು ಶಿಕ್ಷಕಿ ಗೀತಾಂಜಲಿ ಹಿರೇಮಠ್  ನಿರೂಪಿಸಿ ವಂದಿಸಿದರು.