ಲಕ್ಷ್ಮೇಶ್ವರ ಸ್ಕೂಲ್ ಚಂದನದಲ್ಲಿ ಚಂದನ ಪಾರ್ಲಿಮೆಂಟ್ ವಿದ್ಯಾರ್ಥಿಗಳಿಂದ ರಚನೆ
'Chandana Parliament' formed by students at Lakshmeshwar School Chandana
ಲಕ್ಷೇಶ್ವರ" ಪಟ್ಟಣದ ಪ್ರತಿಷ್ಠಿತ ಸಿಬಿಎಸ್‌ಇ ಸ್ಕೂಲ್ ಚಂದನದಲ್ಲಿ 2026-2027 ರ ಶೈಕ್ಷಣೀಕ ವರ್ಷದ ವಿದ್ಯಾರ್ಥಿಗಳ "ಚಂದನ ಪಾರ್ಲಿಮೆಂಟ್" ( ಶಾಲಾ ಸಂಸತ್) ಚುನಾವಣೆಯನ್ನು ಶುಕ್ರವಾರ ದಿ11ರಂದು ವಿದ್ಯಾರ್ಥಿಗಳೊಂದಿಗೆ ನಡೆಸಲಾಯಿತು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ಸಂಸತ್ತಿನ ರಚನೆ ಮತ್ತು ಮತದಾನ ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಹಾಗೂ ಭಾರತದ ಪ್ರಜಾಪ್ರಭುತ್ವದದ ಆಶಯಳಿಗೆ ಬಲಪಡಿಸಲು ವಿದ್ಯಾರ್ಥಿಗಳ ಪಾತ್ರ ಬಹಳ ಮಹತ್ವದ್ದು ಹೀಗಾಗಿ "ಇಂದಿನ ಮಕ್ಕಳೇ ನಾಳೆಯ ಉತ್ತಮ ಪ್ರಜೆಗಳು" ಎಂಬತೆ ಶಾಲಾ ವಿದ್ಯಾರ್ಥಿಗಳಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಹಾಗೆಯೆ ಅದೇ ಮಾದರಿಯಲ್ಲಿ ಶಾಲಾ ಸಂಸತ್ತು ಮತದಾನ ಮಾಡುವುದರ ಮುಖಾಂತರ ರಚನೆ ಮಾಡಲಾಯಿತು.
ಚುನಾವಣಾ ಪ್ರಕ್ರಿಯೆಯಂತೆ ನಾಮಪತ್ರ ಸಲ್ಲಿಸುವುದು ಪ್ರಚಾರ ಇತ್ಯಾದಿಗಳನ್ನು ಮಾಡಲಾಯಿತು ಅದರಂತೆ ವಿದ್ಯಾರ್ಥಿಗಳು ಉತ್ಸಾಹದಿಂದ ಚುನಾವಣೆ ಸ್ಪರ್ಧಿಸಿದ್ದು ವಿಶೇಷವಾಗಿತ್ತು. ಸ್ಪರ್ದಾಳುಗಳು ಪ್ರತಿ ತರಗತಿಗೆ ಹೋಗಿ ತಾವು ಸ್ಪರ್ಧಿಸಿರುವ ಸ್ಥಾನ. ಶಾಲೆಯಲ್ಲಿ ಕೈಗೊಳ್ಳಲಿರುವ ಕಾರ್ಯಗಳನ್ನು ಅಂದರೆ ನಾಯಕತ್ವ ಗುಣಗಳ ವಿಕಸನಶಿಸ್ತು ಮತ್ತು ಸ್ವಯಂ ಜವಾಬ್ದಾರಿ,ಸಹಕಾರ ಮತ್ತು ತಂಡದ ಕೆಲಸ,ಪ್ರಶ್ನಿಸುವ ಮತ್ತು ಉತ್ತರದಾಯಿತ್ವದ ಗುಣವನ್ನು ಪಡೆಯುವದು ಶಾಲೆಯ ನಿಯಮಗಳನ್ನು ಪಾಲಿಸುವದು.
ಸಮಯ ಪ್ರಜ್ಞೆ ಮತ್ತು ವಿವಿಧ ಶಾಲಾ ಕ್ರೀಢಾ ಕೂಟಗಳ ಬಗ್ಗೆ ವಿವರಿಸಿ ಮತಗಳನ್ನು ಕೇಳಿದರು ಈ ಚುನಾವಣೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಶಿಕ್ಷಕರು ಚುನಾವಣಾಧಿಕಾರಿಯಾಗಿ ಮತ್ತು ಚುನಾವಣಾ ಮೇಲ್ವಿಚಾರಕರಾಗಿದ್ದರು. ಚುನಾವಣೆ ನಂತರ ಫಲಿತಾಂಶ ಪ್ರಕಟಿಸಲಾಯಿತು. ಇದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕ ಸಿ.ಎಲ್ ಸ್ಕೂಲ್ ಚಂದನ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾಳೆ ಹಾಗೂ 10ನೇ ತರಗತಿ ವಿದ್ಯಾರ್ಥಿ ಕುಮಾರ ಆರ್ಯನಬಾಬು ಎಲ್ ರೇಗ್ಯೂಲಟರ್ ಆಗಿ ಆಯ್ಕೆಯಾಗಿದ್ದಾನೆ ಎಂದು ಪ್ರಾಚಾರ್ಯರು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 