‘ಹೊಲಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಿ’
'Build a connecting road to the fields and facilitate farmers'...
ಮುದ್ದೇಬಿಹಾಳ 25: ತಾಲೂಕಿನ ರೈತರ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಬೆಳೆದ ಫಸಲನ್ನು ಸರಾಗವಾಗಿ ಹೊತ್ತೋಯ್ಯಲು ಯಾವೂದೇ ತೊಂದರೆಯಾಗದಂತೆ ಆಯಾ ರೈತರ ಹೊಲಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡುವಲ್ಲಿ ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.
ತಾಲೂಕಿನ ಕವಡಿಮಟ್ಟಿ, ಜಲಪೂರ, ಸರೂರು, ಸರೂರು ತಾಂಡಾ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಾವಸ್ಥೆಯಲ್ಲದೇ ಕಾರಣ ಹೊಸದಾಗಿ ನಿರ್ಮಿಸಿ ಕೊಡಬೇಕು ಎಂದು ಕವಡಿಮಟ್ಟಿ ಗ್ರಾಮಸ್ಥರು ಮನವಿ ಮಾಡಿಕೊಂಡರು.ಈ ವೇಳೆ ಸಿಡಿಪಿಓ ಶಿವಮೂರ್ತಿ ಕುಂಬಾರ ಅವರು ಮಾತನಾಡಿ ಮತಕ್ಷೇತ್ರದಲ್ಲಿ ಈಗಾಗಲೆ ಇಂತಹ ಅನೇಕ ಅಂಗನವಾಡಿ ಕಟ್ಟಡವಿಲ್ಲದೇ ಸಮಸ್ಯೆಯ ಸುಳಿಯಲ್ಲಿರುವ 33 ಅಂಗವಾಡಿ ಕೆಂದ್ರಗಳನ್ನು ನಿರ್ಮಿಸಲು ಪ್ರತಿ ಅಂಗನವಾಡಿ ಕೆಂದ್ರಕ್ಕೆ 18 ಲಕ್ಷಗಳನ್ನು ನಡುವೆ ನಿಗದಿ ಮಾಡಿ ಸರಕಾರ ತಿರ್ಮಾನಿಸಿದೆ ಆದಷ್ಟು ಬೇಗ ಕ್ರಮ ಕೈಗೊಳಲಾಗುವುದು ಎಂದರು.
ಕವಡಿಮಟ್ಟಿಯಿಂದ ಡೊಂಕಮಡು ಗ್ರಾಮದ ರಸ್ತೆ ಇಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ ನಿರ್ಮಿಸಬೇಕು, ಜತೆಗೆ ಮೂರು ಗ್ರಾಮಗಳಿಗೆ ಅನುಕೂಲವಾಗಿರುವ ಹೊಕ್ರಾಣಿ ಕೆರೆಯು ಸಂಪೂರ್ಣ ಕಲುಶಿತಗೊಂಡು ನೀರು ಶೇಖರಣೆಯಾಗದಂತಹ ಸ್ಥಿತಿ ಕಾರಣ ಕೆರೆ ಹೂಳು ಎತ್ತುವ ಮೂಲಕ ಅಭಿವೃದ್ಧಿ ಪಡಿಸಬೇಕು. ಅದಲ್ಲದೇ ಈ ಜಲಪೂರ ಮಾರ್ಗದ ಮೂಲಕ ವಸತಿ ಬಸ್ ಸೇವೆ ಪ್ರಾರಂಭಿಸಬೇಕು. ಕೆಲ ಹೊಲಗಳಲ್ಲಿ ಸವಳು ಜವಳಿನ ಸಮಸ್ಯೆಯಿಂದ ಉತ್ತಮ ಫಸಲು ಸಾಧ್ಯವಿಲ್ಲದಂತಾಗಿದೆ ಈ ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಲಪೂರ ಗ್ರಾಮಸ್ಥರು ಬೇಡಿಕೆ ಇಟ್ಟರು.
ತಕ್ಷಣದಲ್ಲಿಯೇ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಸ್ಪಂದಿಸಿ ಸಾರ್ವಜನಿಕರ ಬೇಡಿಕೆ ಸರಿಯಾಗಿದೆ. ಕಾರಣ ಕೆರೆ ಅಭಿವೃದ್ಧಿಗಾಗಿ ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳಿಗೆ, ಹೊಲಗಳ ಸವಳು ಜವಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಕ್ರಮ ಕೈಗೊಳ್ಳಲು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಹಾಗೂ ರಸ್ತೆ ನಿರ್ಮಿಸಲು ಕ್ರೀಯಾಯೋಜನೆ ತಯಾರಿಸಿ ರಸ್ತೆ ಮಾಡಲಾಗುವುದು, ಬಸ್ ಸೇವೆ ಒದಗಿಸುವಂತೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಎಲ್ಲ ಗ್ರಾಮಸ್ಥರು ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಅವಲಂಬಿತರಾಗದೇ ತಮ್ಮ ಗ್ರಾಮದಲ್ಲಿರುವ ಸರಕಾರಿ ಶಾಲೆಗೆ ಸೇರಿಸುವಲ್ಲಿ ಪ್ರಯತ್ನಿಸಬೇಕು ಇದರಿಂದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ. ಸರಕಾರಿ ಶಾಲೆಯ ಶಿಕ್ಷಕರು ಅರ್ಹತಾ ಪರೀಕ್ಷೆ ಮೂಲಕ ಪ್ರತಿಭಾನ್ವೀತ ಶಿಕ್ಷಕರು ಆಯ್ಕೆಗೊಂಡು ಹುದ್ದೆಗೆ ಬಂದಿರುತ್ತಾರೆ ಸರಕಾರಿ ಶಾಲಾ ಶಿಕ್ಷಕರಿಗಿಂತಲೂ ಖಾಸಗಿ ಶಾಲಾ ಶಿಕ್ಷಕರಲ್ಲಿ ಖಾಸಗಿ ಶಾಲೆಗಳ ವೈಭವಿಕರಣವಲ್ಲದೇ ಗುಣಮಟ್ಟ ಶಿಕ್ಷಣ ಕಾಣಲು ಸಾಧ್ಯವಿಲ್ಲ, ಹಾಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಬರುವುದಿಲ್ಲ. ಗ್ರಾಮೀಣ ಭಾಗದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಮದ್ಯಾಹ್ನದ ಬಿಸಿಊಟ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮಕ್ಕಳಿಗೆ ಓದಿನ ಜತೆಗೆ ಮಾನವಿಯ ಮೌಲ್ಯಗಳ ಬೋಧನೆ ಅತ್ಯವಶ್ಯಕವಾಗಿದೆ ಅದು ಸರಕಾರಿ ಶಾಲೆಯಿಂದ ಮಾತ್ರ ಸಾಧ್ಯ. ಎಲ್ಲ ಗ್ರಾಮಸ್ಥರು ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಅವಲಂಬಿತರಾಗದೇ ತಮ್ಮ ಗ್ರಾಮದಲ್ಲಿರುವ ಸರಕಾರಿ ಶಾಲೆಗೆ ಸೇರಿಸುವಲ್ಲಿ ಪ್ರಯತ್ನಿಸಬೇಕು ಇದರಿಂದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
ನಮ್ಮ ಗ್ರಾಮದಲ್ಲಿ ಸರಕಾರಿ ಜಾಗವಿದ್ದು ಆದರೆ ಮನೆ ಕಟ್ಟಿಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ ಸರಕಾರದ ಸೌಲಭ್ಯಗಳು ಕೂಡ ದೊರಕತ್ತಿಲ್ಲ ಇದರಿಂದಾಗಿ ಕಡಬಡವರಿಗೆ ಮನೆ ಇಲ್ಲದಂತಾಗಿದೆ ಎಂದು ಕವಡಿಮಟ್ಟಿ ಗ್ರಾಮಸ್ಥರು ಆರೋಪಿಸಿದರು. ಜತೆಗೆ ಕವಡಿಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 32 ಎಕರೆಯಷ್ಟು ಸರಕಾರಿ ಜಾಗೆ ಇದ್ದು ಕಾರಣ ಈ ಭಾಗದಲ್ಲಿ ಸುಮಾರು 4 ಎಕರೆದಷ್ಟು ಜಮೀನಿನಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ ನಿರಾಶ್ರೀತರಿಗೆ ಹಂಚಿಕೆ ಮಾಡಲು ವಿಶೇಷ ಅನುದಾನ ಅವಶ್ಯಕತೆ ಇದೇ ಪಿಡಿಓ ಪಿ ಎಸ್ ಕಸನಕ್ಕಿ ಅವರು ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ಈ ಕುರಿತು ಪಂಚಾಯಿತಿಯಲ್ಲಿ ಸರ್ವ ಸಮಾನ್ಯ ಸಭೆಯಲ್ಲಿ ಚರ್ಚಿಸಿ ಠರಾವು ಮಾಡಿ ನನಗೆ ಕೊಡಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರದಿಂದ ಅನುದಾನ ಬಿಡುಗಡೆ ತಂದು ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು
ಡಾ, ಬಿ ಆರ್ ಅಂಬೇಡ್ಕರ್ ಭವನ ನಿರ್ಮಿಸಲು ವಿಶೇಷ ಅನುದಾನ ಕೊಟ್ಟಿದ್ದರೂ ತಮ್ಮ ಪಂಚಾಯಿತಿಂದ ನಿವೇಶನ ಮಂಜೂರು ಮಾಡಿಲ್ಲ. ಈ ಕೂಡಲೆ ಸರಕಾರಿ ಜಾಗೆಯನ್ನು ಗುರ್ತಿಸಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ಎಂದು ಪಿಡಿಓ ಬಿ ಎಸ್ ಕಸನಕ್ಕಿಯವರಿಗೆ, ರೈತರು ತಮ್ಮ ಹೊಲಗಳಿಗೆ ಹೋಗಿ ಬರಲು ವೈವಾಹಿಟಿ ದಾರಿ ಇರೋದನ್ನು ಮತ್ತೋಮ್ಮೆ ದಾಖಲೆ ಸರ್ವೇ ಮಾಡಿ ರೈತರಿಗೆ ತೊಂದರೆಯಾಗದಂತೆ ತಾತ್ಕಾಲಿಕ ರಸ್ತೆ ಮಾಡಿಕೊಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಅಪ್ಪಾಜಿ ನಾಡಗೌಡ ಅವರು ಸೂಚಿಸಿದರು.
ಜಲಧಾರೆಯಲ್ಲಿ ಹೆಚ್ಚುವರಿ ನೀರು ಸಂಗ್ರಹ ಘಟಕ ನಿರ್ಮಿಸಲು ಈಗಾಗಲೆ ಸರಕಾರದಿಂದ ಮಂಜುರಾಗಿದ್ದು ಆದಷ್ಟು ಬೇಗ ಸ್ಥಾಪಿಸಿ ಸಾರ್ವಜನಿಕ ರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೋಳಲಾಗುವುದು. ಜತೆಗೆ ಗ್ರಾಮದಲ್ಲಿ ನೈರ್ಮಲ್ಯ ಹಾಗೂ ಕೋಳಚೆ ನಿರ್ಮೂಲನೆಗಾಗಿ ಸರಕಾರ ಈ ಗಾಗಲೇ 2024-25 ಸಾಲಿನಲ್ಲಿ 1ಕೋಟಿ 40 ಲಕ್ಷದಲ್ಲಿ ನರೇಗಾ ಯೋಜನೆಯಡಿಯಲ್ಲಿ ಗ್ರೇ ವಾಟರ್ ಮ್ಯಾನೇಜಮೆಂಟ್ ಕಾಮಗಾರಿ ಕೈಗೊಳ್ಳು ಅನುದಾನ ಮಂಜೂರಾಗಿದ್ದು ಗುತ್ತಿಗೆದಾರರು ಅತಿ ಶಿಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಿದ್ದಾರೆ.ಈ ದಿಶೇಯಲ್ಲಿ ತಮ್ಮ ಗ್ರಾಮಗಳ ಮುಖ್ಯ ಹಾಗೂ ಸಂಪರ್ಕ ರಸ್ತೆಗಳ ಅಕ್ಕ ಪಕ್ಕದಲ್ಲಿರುವ ಮನೆಗಳ ಮಾಲಿಕರು ರಸ್ತೆ ಒತ್ತುವರಿಗೆ ಮಾಡಿಕೊಂಡರೆ ತೆರವುಗೊಳಿಸಲು ಮುಂದಾದರೇ ಅವರಿಗೆ ಸಹಕಾರ ನೀಡಿ ಇದರಿಂದ ನಿಮ್ಮ ಗ್ರಾಮ ಸ್ವಚ್ಚವಾಗಿ ಸೊಳ್ಳೆ, ಮಲೀನ ಹಾಗೂ ರೋಗ ಮುಕ್ತ ಪರಿಸರ ನಿರ್ಮಿಸಲು ಸಾಧ್ಯವಾಗುತ್ತದೆ ಶಾಸಕ ಅಪ್ಪಾಜಿ ನಾಡಗೌಡ ಅವರು ಗ್ರಾಮಸ್ಥರಿಗೆ ಸಲಹೆ ನೀಡಿದರು ಎಂದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಲೂಕು ಪಂಚಾಯತ್ ಅಧ್ಯಕ್ಷ ವೆಂಕಟೇಶ ಒಂದಾಲ, ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ, ಪಶುವೈದ್ಯಾಧಿಕಾರಿ ಎಸ್ ಬಿ ಮೇಟಿ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ತಾಲೂಕಾ ಅಕ್ಷರ ದಾಸೋಹದ ಸಹಾಯ ನಿರ್ದೇಶಕ ಎಂ ಎಂ ಬೆಳಗಲ್ಲ, ಪಿಎಸೈ ಸಂಜಯಕುಮಾರ ತಿಪ್ಪಾರಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಹಂಡರಗಲ್ಲ, ಪಿಡಿಓ ಪಿ ಎಸ್ ಕಸನಕ್ಕಿ, ಪಂಚಾಯತ ರಾಜ್ಯ ಸಹಾಯ ನಿರ್ಧೇಶಕ ಖೂಬಾಶಿಂಗ್ ಜಾಧವ, ತಾಲೂಕಶಾ ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ಧೇಶಕಿ ಬಸಂತಿ ಮಠ, ಗ್ಯಾರಂಟಿ ಸಮೀತಿ ಸದಸ್ಯ ರಾಮಣ್ಣ ರಾಜನಾಳ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 