ಮೇ 22ರಿಂದ 'ಅಸುರನ ಕೈಯಲ್ಲಿ ಪಾರಿಜಾತ' ಕ್ರೈಮ್, ಥ್ರಿಲ್ಲರ್ ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರ

ಮೇ 22ರಿಂದ 'ಅಸುರನ ಕೈಯಲ್ಲಿ ಪಾರಿಜಾತ' ಕ್ರೈಮ್, ಥ್ರಿಲ್ಲರ್ ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರ 'Asurana Kelay Parijata' crime thriller trailer receives overwhelming praise from May 22nd

ಲೋಕದರ್ಶನ ವರದಿ 

ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯನ್ನು ಮೂಡಿಸಲು ಅಸುರರು ಬರುತ್ತಿದ್ದಾರೆ. ಕನ್ನಡದ ದಿಗ್ಗಜ ನಟರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು ಪಾರಿಜಾತ ಎಂಬ ಸೂಕ್ಷ್ಮ ಏಳೆಯನ್ನು ಕಲಾತ್ಮಕವಾಗಿ ಚತ್ರಿಕರಿಸಿ 'ಅಸುರನ ಕೈಯಲ್ಲಿ ಪಾರಿಜಾತ' ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರವನ್ನು ಮೀಕ್ಷಾ ಪಿಚ್ಚರ್ ಸಂಸ್ಥೆ ನಿರ್ಮಾಣ ಮಾಡಿದೆ. ಇತಿಹಾಸ ಹಾಗೂ ಆಧುನಿಕತೆಯನ್ನು ನೈಜತೆಗೆ ತಕ್ಕಂತೆ ಕಥೆ ಹಾಗೂ ಚಿತ್ರಕಥೆ ಬರೆದು ವಾಸ್ತವ ಸ್ಥಿತಿಯೊಂದಿಗೆ ಬೆಳ್ಳಿ ತೆರೆಯ ಮೇಲೆ ಈ ಕಥೆಯನ್ನು ನಿರ್ದೇಶಕ ತೇಜಸ್ವಿ ವಿಘ್ನೇಶ್ ಅವರು ಕಟ್ಟಿಕೊಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಸೆನ್ಸಾರ್ ಕೂಡ ಮುಗಿಸಿರುವ ಈ ಚಿತ್ರದ ಟ್ರೇಲರ್ ಡಿ ಬೀಟ್ಸ್‌ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ಮೊದಲ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಶೀರ್ಷಿಕೆಯಲ್ಲೇ ಎಲ್ಲರ ಗಮನ ಸೆಳೆದಿರುವ ಈ ಚಿತ್ರ ಮೇ 22ರಂದು ಬಿಡುಗಡೆಯಾಗುತ್ತಿದೆ. 

ಅಸುರರ ಕೈಯಲ್ಲಿ ಪಾರಿಜಾತ ಎಂಬ ಜೀವನದ ಹೂವು ಹೇಗೆ ಸಿಲುಕಿಕೊಳ್ಳುತ್ತದೆ ಎನ್ನುವುದೇ ಚಿತ್ರದ ಕಥೆ. ಮನುಷ್ಯ ಪ್ರಸ್ತುತ ಜೀವನದಲ್ಲಿ ತನಗೆ ಬೇಕಾದ ವಸ್ತು ಸಿಗದೇ ಇದ್ದಾಗ ಯಾವ ರೀತಿ ಮನುಷ್ಯತ್ವವನ್ನು ಮರೆತು ರಾಕ್ಷಸ ಗುಣವನ್ನು ತಾಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಆಂತರಿಕವಾಗಿ ವ್ಯಕ್ತಿಯ ಭಾವನೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಪ್ರಮೋದ್ ಶೆಟ್ಟಿ ಹಾಗೂ ಪ್ರದೀಪ್ ಪೂಜಾರಿ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕರಾಗಿ ಕಾರ್ತಿಕ್, ಯಶ್ ಶೆಟ್ಟಿ  ನಟಿಸಿದ್ದಾರೆ. ಪಾರಿಜಾತ ಎಂಬ ಕಲ್ಪನೆಯ ಪಾತ್ರದಲ್ಲಿ ಕಿರುತೆರೆ ನಟಿಯಾಗಿರುವ ರಜನಿ ನಟಿಸಿದ್ದಾರೆ. ಪೋಷಕ ಪತ್ರದಲ್ಲಿ ಕೆ ಎಸ್ ಶ್ರೀಧರ್, ಮಂಜುನಾಥ್ ಹೆಗಡೆ, ಮಮತಾ, ಡಾಕ್ಟರ್ ಲೀಲಾ ಮೋಹನ್, ವಿಮರ್ಶ ಗೌಡ ,ಪ್ರಭೀಕ್ ಮೊಗವೀರ್, ಸಂತೋಷ್, ನಿಶಾ ಕೊಪ್ಪಳೇಕರ್, ಕೀರ್ತನ ಕೂರ್ಗ್‌, ಮುಂತಾದವರು ತಾರಾ ಬಳಗದಲ್ಲಿದ್ದಾರೆ.  

ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ಅಲ್ಲದೆ ಕ್ರಿಸ್ಟೋಫರ್ ಜಾಯ್ಸನ್ ಅವರ ಸಂಗೀತ ನಿರ್ದೇಶನದಲ್ಲಿ ಬಂದಿರುವ ಹಾಡುಗಳು ಸುಮಧುರವಾಗಿದೆ. ನವೀನ್ ಊಗಿ ಅವರ ಸಾಹಸ ಸಂಯೋಜನೆಯಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳು ಮೂಡಿಬಂದಿದೆ. ಚಿತ್ರದ ಬಹುತೇಕ ಚಿತ್ರಿಕರಣವನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮೇ 22ರಂದು ಮಂಗಳೂರು, ಮೈಸೂರು, ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ.