‘ಸ್ಪರ್ಧೆ ಮಾಡಬಾರದೆಂದು ಮತಗಳ್ಳತನದ ಆರೋಪ’
'Allegations of vote rigging to prevent contesting'
ಕಲಬುರಗಿ: ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಎಂಬುದು ಶಾಸಕ ಬಿ.ಆರ್. ಪಾಟೀಲ್ ಸೃಷ್ಟಿಸಿರುವ ಕಥೆ. ಪ್ರಮುಖವಾಗಿ ನನಗೆ ಮತ್ತು ನನ್ನ ಮಗನಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಗದಂತೆ ಮಾಡುವುದೇ ಬಿ.ಆರ್ ಪಾಟೀಲ್ ಕುತಂತ್ರ ಎಂದು ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಆರೋಪಿಸಿದರು.
ಮತಗಳ್ಳತನ ಸಂಬಂಧಿಸಿದಂತೆ ಎಸ್ಐಟಿ ಸಲ್ಲಿಸಿದ ಚಾರ್ಜಶೀಟ್ ನಲ್ಲಿ ಆರೋಪಿಗಳೆಂದು ಉಲ್ಲೇಖಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಶಾಸಕ ಗುತ್ತೇದಾರ, ಸೋಮವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಇದೇ ವಿಚಾರಕ್ಕೆ ಪ್ರತಿಭಟನಾ ಸಮಾವೇಶ ಮಾಡುತ್ತಿದ್ದಾರೆ. ಇದಕ್ಕೆ ಸಹಾಯಕವಾಗಲೆಂದು ಆತುರದಲ್ಲಿ ಚಾರ್ಜ್ ಶೀಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಳಂದದಲ್ಲಿ ಮತಗಳ್ಳತನ ಎಂಬ ಆರೋಪದ ಹಿಂದೆ ಶಾಸಕ ಬಿ.ಆರ್ ಪಾಟೀಲ್ ಕೈವಾಡ ಇದೆ. ನಾವು ವೋಟು ಡಿಲಿಟ್ ಮಾಡಲು ಆಗದು. ಇದೆಲ್ಲಾ ನಮ್ಮಲ್ಲಿ ಏನೂ ಆಗಿಯೇ ಇಲ್ಲ. ನ್ಯಾಯಾಲಯದಲ್ಲಿ ನಮಗೆ ಗೆಲುವು ಸಿಗುತ್ತದೆಂಬ ಅಚಲ ನಂಬಿಕೆ ಇದೆ ಎಂದು ಗುತ್ತೇದಾರ ಪುನರುಚ್ಚರಿಸಿದರು.
ಬರುವ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧಿಸಬೇಕೋ, ನಾನು ಸ್ಪರ್ಧಿಸಬೇಕೋ ಎನ್ನುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸುಮ್ಮನೇ ಮತಗಳ್ಳತನ ಎಂಬ ಆರೋಪ ಮಾಡಲಾಗುತ್ತಿದೆ ಎಂದರು.
ರಾಜಕೀಯ ಪ್ರೇರಿತ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನದ ಬಗ್ಗೆ ನಮ್ಮ ವಿರುದ್ದ ಎಸ್ಐಟಿ ಚಾರ್ಜ ಶೀಟ್ ಸಲ್ಲಿಸಿರುವುದು ರಾಜಕೀಯವ ಪ್ರೇರಿತ ಶುದ್ದ ಸುಳ್ಳು ಎಂದ ಸುಭಾಷ ಗುತ್ತೇದಾರ ಪುತ್ರ, ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷ ಗುತ್ತೇದಾರ ತಿಳಿಸಿದ್ದಾರೆ.
ನಾವು ಯಾವುದೇ ರೀತಿಯ ವೋಟು ಚೋರಿ ಮಾಡಿಲ್ಲ. ಮಾಡಿದರೆ ನಮ್ಮ ತಂದೆಯವರು ಏಕೆ ಸೋಲುತ್ತಿದ್ದರು? ಬಿಹಾರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸಲು ರಾಹುಲ್ ಗಾಂಧಿ ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ಆರೋಪಿಸಿದ್ದರು. ಇದನ್ನೇ ದುರುಪಯೋಗ ಮಾಡಿಕೊಂಡಿರುವ ಆಳಂದ ಶಾಸಕ ಬಿ.ಆರ್ ಪಾಟೀಲ್ ರಾಹುಲ್ ಗಾಂಧಿಗೆ ಹತ್ತಿರವಾಗಲು ಅವರ ಮೂಲಕ ಇದನ್ನೆಲ್ಲ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಸಮಾವೇಶ ನಡೆಸುತ್ತಿರುವ ಕಾರಣ ಆತುರವಾಗಿ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಇದು ಕೇವಲ ರಾಜಕೀಯ ಪ್ರೇರಿತವೇ ಹೊರತು ಇದರಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ. ನ್ಯಾಯಾಲಯದಲ್ಲಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ. ಅವರ ಉದ್ದೇಶ ಸರಿಯಿಲ್ಲ. ನಮ್ಮನ್ನು ಹೇಗಾದರೂ ಮಾಡಿ ಸಿಲುಕಿಸಲು ಯತ್ನಿಸುತ್ತಿದ್ದ ಕಾರಣ ನಾವು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇವೆ ಎಂದು ಹರ್ಷ ತಿಳಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 