‘ಅಭಂಗ ದಾಸವಾಣಿ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ’
'Abhanga Dasavani programs bring peace of mind'
ಧಾರವಾಡ 20: ಆಷಾಡ ಮಾಸದಲ್ಲಿ ದಾಸವಾಣಿ ಹಾಗೂ ಅಭಂಗದ ಮೂಲಕ ವಿಠ್ಠಲನ ಸ್ಮರಣೆ ಮಾಡುವುದೇ ಸೌಭಾಗ್ಯದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ದಾಸವಾಣಿ, ಅಭಂಗ, ನೃತ್ಯ, ನಾಟಕ ಕಲೆಗಳು ಮತ್ತೆ ಮತ್ತೆ ಹೆಚ್ಚು ಪ್ರಚಲಿತಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಖ್ಯಾತ ಮಕ್ಕಳ ತಜ್ಞರಾದ ಡಾ. ರಾಜನ್ ದೇಶಪಾಂಡೆ ಹೇಳಿದರು.
ದಿನಾಂಕ: 19ರಂದು ಸಂಜೆ ನಗರದ ಸೃಜನಾ ರಂಗಮಂದಿರದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಆರ್.ಕೆ.ಫೌಂಡೇಶನ್, ಧಾರವಾಡ ಇವರ ಸಹಯೋಗದಲ್ಲಿ ಏರಿ್ಡಸಿದ್ದ ಬೋಲಾವಾ ವಿಠ್ಠಲ ಅಭಂಗ ದಾಸವಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ರಾಜನ್ ದೇಶಪಾಂಡೆ ಮಾತನಾಡುತ್ತ ಸಂಗೀತ ದಿಗ್ಗಜರುಗಳಾದ ಪಂ.ಭೀಮಸೇನ ಜೋಶಿ, ಡಾ.ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್, ಪಂ.ಮಾಧವ ಗುಡಿ, ಪಂ.ಎಮ್. ವೆಂಕಟೇಶಕುಮಾರ ಅವರಂತ ಗಾಯಕರ ಒಡನಾಟದಿಂದ ನನಗೆ ಸಂಗೀತದಲ್ಲಿ ಹೆಚ್ಚಿನ ಒಲವು ಮೂಡಲು ಕಾರಣವಾಯಿತು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡುತ್ತ ಧಾರವಾಡ ಸಂಗೀತದ ಕರ್ಮಭೂಮಿಯಾಗಿರುವದರಿಂದ, ಬಹಳ ದೊಡ್ಡ ದೊಡ್ಡ ಕಲಾವಿದರು ಇಲ್ಲಿ ಬಂದು ಸಂಗೀತ ಪ್ರಸ್ತುತ ಪಡಿಸಲು ಇಚ್ಚಿಸುತ್ತಾರೆ. ಸಂಗೀತ ಕೇಳುವುದರಿಂದ ಮನ-ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಮಾತನಾಡುತ್ತ ಧಾರವಾಡದ ಸಂಗೀತ ಪರಂಪರೆ ನಿರಂತರವಾಗಿ ಸಾಗಲಿ, ಅನೇಕ ಸಂಗೀತ ದಿಗ್ಗಜರು ಸಾಂಸ್ಕೃತಿಕ ರಾಜಧಾನಿಯ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಇಲ್ಲಿ ಪ್ರತಿವರ್ಷ ಇಂತಹ ಬೋಲಾವಾ ವಿಠ್ಠಲ ಪರಂಪರೆ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟರು.
ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಶಶಿಧರ ತೋಡಕರ ಮಾತಾನಾಡುತ್ತ ಅವರಿವರೆನ್ನದೇ ಎಲ್ಲರನ್ನೂ ಸಮ್ಮೀಳಿತಗೊಳಿಸುವ ಶಕ್ತಿ ಪುಂಡರಿಕ ವರದ ವಿಠ್ಠಲನದಾಗಿದೆ. ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ದೇವಸ್ಥಾನದಲ್ಲಿ ದೇವರ ಪಾದಸ್ಪರ್ಶ ಮಾಡಿ ನಮಸ್ಕರಿಸುವ ಅವಕಾಶವಿದೆ ಎಂದರೆ ಅದು ಪಂಡರಪುರದ ಪಂಡರಿನಾಥ ವಿಠ್ಠಲನಲ್ಲಿ ಮಾತ್ರ ಎನ್ನಬಹುದು. ವಿಶೇಷವಾಗಿ ಜನಸಾಮಾನ್ಯರು ಸೃಷ್ಟಿದ ಸಾಹಿತ್ಯವಾಗಿ ಮೊಟ್ಟ ಮೊದಲು ಪ್ರಕಟಗೊಂಡಿರುವುದು ವಚನ ಸಾಹಿತ್ಯ, ನಂತರದಲ್ಲಿ ವಿಠ್ಠಲ ಸಂಪ್ರದಾಯ ಕನ್ನಡಕ್ಕೆ ಅದ್ಬುತವಾದ ದಾಸ ಸಾಹಿತ್ಯವನ್ನು ಕೊಟ್ಟಿದೆ. ಕನ್ನಡ ಪರಂಪರೆಯಲ್ಲಿ ಬರುವ ಎಲ್ಲ ದಾಸರು ತಮ್ಮ ಸುಳಾದಿಗಳಲ್ಲಿ, ಕೀರ್ತನೆಗಳಲ್ಲಿ, ವಿಠ್ಠಲ ನಾಮದೊಂದಿಗೆ ಮುಕ್ತಾಯಗೊಳಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡುತ್ತ ಉದಯೋನ್ಮುಖ ಕಲಾವಿದರುಗಳಿಗೆ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಮಾಡುವುದರ ಮೂಲಕ ವೇದಿಕೆ ಕಲ್ಪಿಸುವುದೇ ನಮ್ಮ ಸೊಸೈಟಿಯ ಉದ್ದೇಶವಾಗಿದೆ ಎಂದರು.
ಕೋಯಿನೂರ ಗಂಧರ್ವ ಪ್ರಶಸ್ತಿ ಪುರಸ್ಕರಾದ ಪಂ.ಕೈವಲ್ಯಕುಮಾರ ಗುರವ ಅವರನ್ನು ಸನ್ಮಾನಿಸಲಾಯಿತು.
ನಂತರ ಜರುಗಿದ ಬೋಲಾವಾ ವಿಠಲ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪಂ.ಕೈವಲ್ಯಕುಮಾರ ಗುರವ, ವಿದುಷಿ ಸುಜಾತಾ ಗುರವ ಕಮ್ಮಾರ ಹಾಗೂ ಪುಣೆಯ ನಾಗೇಶ ಅಡಗಾಂವಕರ ಅಭಂಗ ದಾಸವಾಣಿ ಪ್ರಸ್ತುತಿಯು ಕಿಕ್ಕಿರಿದು ನೆರೆದ ಪ್ರೇಕ್ಷಕ ವರ್ಗವನ್ನು ಭಕ್ತಿಭಾವದಲ್ಲಿ ಮಿಂದೇಳಿಸಿತು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಹಾರ್ಮೊನಿಯಂದಲ್ಲಿ ಬಸು ಹಿರೇಮಠ, ಪಖವಾಜದಲ್ಲಿ ಆಶೀಶ್ ಶೆಡೇಕರ, ಸಾವಂತವಾಡಿ, ಚಿಪ್ಪಳಿ ವಾದ್ಯ ಸುಧೀಂದ್ರ ಸಿದ್ಧಾಪೂರ, ತಾಳದಲ್ಲಿ ಸಮರ್ಥ ಪಾಟೀಲ, ಸಂತೋಷ ದೀಕ್ಷಿತ ಅಳವಂಡಿ ಸಮರ್ಥ ಸಾಥ್ ಸಂಗತ ನೀಡಿದರು.
ಮಾಯಾ ರಾಮನ್ ನಿರೂಪಿಸಿದರು. ಜ್ಯೋತಿ ನೀಲೋಪಂತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂಯೋಜಕ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಡಾ.ಗುರುಬಸವ ಮಹಾಮನೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 