‘ಬಸವಣ್ಣನವರ ಮೌಲ್ಯಗಳನ್ನು ತಿರಸ್ಕರಿಸುವ ವ್ಯಕ್ತಿ ಯಾರನ್ನೂ ಪ್ರೀತಿಸಲಾರ’
'A person who rejects Basavanna's values cannot love anyone'
ಬೆಳಗಾವಿ 22: ಬಸವಣ್ಣನವರ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳನ್ನು ತಿರಸ್ಕರಿಸುವ ಮನಸ್ಥಿತಿಯ ವ್ಯಕ್ತಿ ಸಮಾಜದಲ್ಲಿ ಯಾರನ್ನೂ ಪ್ರೀತಿಸಲಾರ. ಯಾರು ಬಸವಾದಿ ಶರಣರ ತತ್ವ ಆದರ್ಶಗಳನ್ನು ಅಪಪ್ರಚಾರ ಮಾಡುವ ಮನಸ್ಥಿತಿಯಲ್ಲಿದ್ದವರು ಮನುಷ್ಯತ್ವದ ವಿರೋಧಿಗಳು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರ ತತ್ವ ಆದರ್ಶ,ಹಾಗು ಅವರ ಬದುಕು ವಿಶ್ವಕ್ಕೆ ನೀಡಿದ ಒಂದು ಅಮೂಲ್ಯ ಕೊಡುಗೆಯಾಗಿದೆ. ಸದ್ಯ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದವರು ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ. ವಿದ್ಯಾರ್ಥಿಗಳೊಂದಿಗಿನ ವಚನ ಸಂವಾದ ಸಮಾಜೋ ಧಾರ್ಮಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವದಾಗಿದೆ ಎಂದು ಹಿರಿಯ ಸಾಹಿತಿ ಶರಣೆ ಮೈತ್ರೇಯಿನಿ ಗದಿಗೆಪ್ಪಗೌಡರ ಹೇಳಿದರು.
ಅವರು ಮಹಾಂತೇಶ ನಗರದ ಮಹಾಂತ ಭವನದಲ್ಲಿ (21/09/2025) ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕ ಆಯೋಜಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ " ಬಸವ ಸಂಸ್ಕೃತಿ ಅಭಿಯಾನ - ಒಂದು ವಿಶ್ಲೇಷಣೆ "ಎಂಬ ವಿಷಯ ಕುರಿತು ಉಪನ್ಯಾಸ ಕಾರ‌್ಯಕ್ರಮದಲ್ಲಿ ಮಾತನಾಡಿ ಧರ್ಮ, ಜಾತಿ, ವರ್ಗ, ವರ್ಣ, ಲಿಂಗಭೇಧಗಳ ಕುರಿತು ವಿದ್ಯಾರ್ಥಿಗಳಲ್ಲಿ ಮೂಡಿಬಂದ ಕ್ಲಿಷ್ಟಕರ ಪ್ರಶ್ನೆಗಳಿಗೆ ಸಂತೃಪ್ತಿ ಉತ್ತರವನ್ನು ಪಡೆಯುತ್ತಿದ್ದಾರೆ. ಇದುವೇ ಬಸವ ಸಂಸ್ಕೃತಿಯ ಮೂಲ ಉದ್ದೇಶ. ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಕಟ್ಟಿಕೊಟ್ಟ ಲಿಂಗಾಯತ ಧರ್ಮ ಋಷಿ ಮೂಲದ ಧರ್ಮ ಅಲ್ಲ, ಅದು ಕೃಷಿ ಮೂಲದ ಧರ್ಮ.ಶರಣರ ಕಾಯಕ ದಾಸೋಹ ತತ್ವ ಸಮಸಮಾಜದ ಮೂಲ ಮಂತ್ರ. ಮಾನವ ಹಕ್ಕುಗಳನ್ನು ಮತ್ತು ಸಂವಿಧಾನದ ಮೌಲ್ಯಗಳನ್ನು ನಾವು ಪಠ್ಯಗಳಲ್ಲಿ ಓದುತ್ತೇವೆ. ಆದರೆ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಪ್ರಾಯೋಗಿಕವಾಗಿ ಸ್ವಯಂ ಸಿದ್ಧರಾಗಿ ಬದುಕಿ ತೋರಿಸಿದರು. ಅವರ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಬೇಕಾದ ಅನಿವಾರ್ಯತೆ ಇದೆ ಅಂತಾ ಇಂದಿಲ್ಲಿ ನೀಡಿದ ಹಿರಿಯ ಸಾಹಿತಿ ಶರಣೆ ಮೈತ್ರೇಯಿನಿ ಗದಿಗೆಪ್ಪಗೌಡರ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಬಸವರಾಜ ರೊಟ್ಟಿ ಅದ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಅವರು ಇತ್ತೀಚಿಗೆ ಕೆಲವು ಮಠಾಧೀಶರು ಹಾಗೂ ಕೆಲವು ರಾಜಕಾರಣಿಗಳು ವಿಶ್ವ ಗುರು ಬಸವಣ್ಣನವರ ಕುರಿತು ಅವಹೇಳನಕರ ಹೇಳಿಕೆಯನ್ನು ಕೊಡುತ್ತಿದ್ದು ದುರದೃಷ್ಟಕರ ಎಂದು ಹೇಳಿದರು. ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಅವರು ಬಸವಣ್ಣನವರು "ಲಿಂಗಾಯತ ಧರ್ಮದ ಸ್ಥಾಪನೆ ಮಾಡಿಲ್ಲ" ಅಂತಾ ಹೇಳಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭಾವು ಉಗ್ರವಾಗಿ ಖಂಡಿಸುತ್ತದೆ. ಎಲ್ಲಾ ಲಿಂಗಾಯತ ಒಳ ಪಂಗಡದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ " ಲಿಂಗಾಯತ " ಅಂತಾ ಬರೆಸಬೇಕು.ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಜಾತಿಯ ಹೆಸರನ್ನು ಬರೆಸಬೇಕೆಂದು ಕರೆಕೊಟ್ಟರು. ಪಾವನ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದ ಪ.ಪೂ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರ ಬೆಳಗಾವಿ ಅವರು ನಮ್ಮ ಮುಂದಿನ ಪೀಳಿಗೆಗೆ ಬಸವಾದಿ ಶರಣರ ತತ್ವಾದರ್ಶಗಳನ್ನು ಕೊಡಬೇಕಾದ ಹೊಣೆಗಾರಿಕೆ ನಮ್ಮ ತಾಯಂದಿರ ಮೇಲಿದೆ.ಇಂತಹ ಗೋಷ್ಠಿ, ಉಪನ್ಯಾಸಗಳಿಗೆ ತಮ್ಮತಮ್ಮ ಮಕ್ಕಳನ್ನು ಕರೆತರಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಪ್ರಸಾದ ದಾಹೋಹಿಗಳಾದ ಶರಣ ಎಸ್.ಜಿ.ಸಿದ್ನಾಳ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಸದಸ್ಯರಾದ ಶರಣೆ ಶೈಲಜಾ ಭಿಂಗೆ ಇದ್ದರು. ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಪ್ರವೀಣ ಚಿಕಲಿ,ಚಂದ್ರು ಬೂದಿಹಾಳ,ಮುರಿಗೆಪ್ಪ ಬಾಳಿ,ಶರಣೆ ರತ್ನಾ ಬೆಣಚಮರ್ಡಿ, ಸುಜಾತಾ ಮತ್ತಿಕಟ್ಟಿ,ಅನಿತಾ ಚಟ್ಟರ ನಯನಾ ಗಿರಿಗೌಡರ, ಕಾವೇರಿ ಕಿಲಾರಿ ಅವರನ್ನು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಗೌರವಿಸಲಾಯಿತು.
ಶರಣೆ ಶೋಭಾ ಶಿವಳ್ಳಿ ಅವರು ನಿರೂಪಣೆ ಮಾಡಿದರು.ಶರಣೆ ರತ್ನಾ ಬೆಣಚಮರ್ಡಿ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಸುಜಾತಾ ಮತ್ತಿಕಟ್ಟಿ ಶರಣು ಸಮರೆ್ಣ ಮಾಡಿದರು. ಅಶೋಕ ಮಳಗಲಿ, ಅರವಿಂದ ಪರುಶೆಟ್ಟಿ,ಎಫ್ ಆರ್ ಪಾಟೀಲ, ಈರಣ್ಣ ಚಿನಗುಡಿ, ಗಂಗಪ್ಪ ಗುರುವನ್ನನವರ,ಶಂಕರ ಶೆಟ್ಟಿ, ಮೋಹನ ಗುಂಡ್ಲೂರ,ಭಾಗ್ಶಶ್ರೀ ಬೆಣಚಮರ್ಡಿ, ನೇತ್ರಾ ರಾಮಾಪುರಿ, ಕೆಂಪಣ್ಣ ರಾಮಾಪುರಿ,ಕುಲಗೋಡಿ,ಚಂದ್ರ್ಪ ನಾವಲಗಟ್ಟಿ, ನಯನಾಉಃಉ ಗಿರಿಗೌಡರ,ಕಾವೇರಿ ಕಿಲಾರಿ,ಸದಾನಂದ ಬಶೆಟ್ಟಿ, ಬಸವರಾಜ ಮತ್ತಿಕಟ್ಟಿ, ಸುಲೋಚನಾ ವಸ್ತ್ರದ, ಶರಣೆ ಹೇಮಾ ಕಾಜಗಾರ ಅಲ್ಲದೇ ವಿವಿಧ ಬಡವಣೆಗಳ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 