ತಾಯಿ ಹೆಸರಲ್ಲಿ ಒಂದು ಮರ ಕಾರ್ಯಕ್ರಮ: ಮಕ್ಕಳೊಂದಿಗೆ ಪಾಲಕರಿಂದ ಸಸಿ ನೆಡುವ ಮೂಲಕ ಪರಿಸರ ಜಾಗೃತಿ
'A Tree in Mother's Name' Initiative: Raising environmental awareness through parents and children p
ವಿಜಯಪುರ 12 : ನಗರದ ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ನಡೆಯುತ್ತಿರುವ ಎಂ.ಎಸ್. ಖೇಡ್ ಪೂರ್ವ ಹಾಗೂ ಪ್ರಾಥಮಿಕ ಶಾಲೆಯಲ್ಲಿ ತಾಯಿ ಹೆಸರಲ್ಲಿ ಒಂದು ಮರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಖಜಾಂಚಿ ವಿನೋದ್ ಎಂ. ಖೇಡ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಸೀತಾ ಲಮಾಣಿ, ಎಂ.ಡಿ. ಹೆಬ್ಬಿ, ಸಂಜೋತಾ ಖೇಡ್ ಹಾಗೂ ಶ್ರೀದೇವಿ ಸೊನ್ನದ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಹಾಗೂ ಅವರ ಪಾಲಕರು ಉತ್ಸಾಹದಿಂದ ಭಾಗವಹಿಸಿದರು. ಮಕ್ಕಳಲ್ಲಿ ಪರಿಸರದ ಬಗ್ಗೆ ಪ್ರೀತಿ ಮತ್ತು ಕಾಳಜಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಪಾಲಕರು ಸಂತಸ ವ್ಯಕ್ತಪಡಿಸಿದರು. ಮಕ್ಕಳೊಂದಿಗೆ ಪಾಲಕರು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಕಲಾವತಿ ಬಸನಾಳ, ಸುಶ್ಮಿತಾ ಕಾಂಬ್ಳೆ, ಶ್ರೀದೇವಿ ಕದನಳ್ಳಿ, ರೇವತಿ ಹುಲ್ಲೂರು, ರೇಣುಕಾ ಕದನಳ್ಳಿ, ಸನಾ ಜಮಾದಾರ್, ಆಯಿಷಾ ಶೇಖ್, ಪ್ರೀತಿ ಪೀರ್ನಾಯಕ್, ರಸಿದಾ ತಾಳಿಕೋಟಿ, ಪ್ರೇಮ ಕದನಳ್ಳಿ, ಸಲ್ಮಾ ದೇಸಾಯಿ, ಸುಭಾಷ್ ರಜಪೂತ್, ಆನಂದ್ ಬಿರಾದಾರ್ ಸೇರಿದಂತೆ ಹಲವಾರು ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 