ಮನೆಯಲ್ಲೊಂದು ಗ್ರಂಥಾಲಯ ಯೋಜನೆ: ಕ್ರಾಂತಿಕಾರಕ ಯೋಜನೆ
'A Library in Every Home' Initiative: A Revolutionary Scheme
ಹಾವೇರಿ ೧೮: ಕನ್ನಡ ಪುಸ್ತಕ ಪ್ರಾಧಿಕಾರದ ಮನೆಯಲ್ಲೊಂದು ಗ್ರಂಥಾಲಯ ಯೋಜನೆ, ಕನ್ನಡದ ಕೆಲಸಕ್ಕೆ ಹೊಸ ಅಂತರ್ಜಾಲ ಸೃಷ್ಟಿಸುವ ಕ್ರಾಂತಿಕಾರಕ ಯೋಜನೆ. ಗ್ರಂಥಾಲಯಗಳಲ್ಲಿ ಇಂದಿನ ಆಧುನಿಕ ತಂತ್ರಜ್ಞಾನದ ಪುಸ್ತಕಗಳ ಜೊತೆಗೆ ಹಿರಿಯರ ಆತ್ಮಕಥೆಗಳೂ ಸಿಗುವಂತಾಗಬೇಕು. ಹೊಸ ಪೀಳಿಗೆಯನ್ನು ಆಕರ್ಷಿಸುವ ಶಕ್ತಿ ಬರಬೇಕಾದರೆ ಪುಸ್ತಕಗಳನ್ನೇ ಗೆಳೆಯರನ್ನಾಗಿಸಿಕೊಳ್ಳಿ ಎಂದು ಜಿ.ಎಚ್. ಕಾಲೇಜಿನ ನಿವೃತ್ತ ಪ್ರಾ. ಬಸವರಾಜ ಬನ್ನೂರ ಹೇಳಿದರು.
ಇಲ್ಲಿಯ ಹಳೆಪೋಸ್ಟ್ ರಸ್ತೆಯಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಾವನೂರ ಪ್ರತಿಷ್ಠಾನದ ಅಧ್ಯಕ್ಷರಾದ ವಿರೂಪಾಕ್ಷ ಹಾವನೂರ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆ ಅಡಿಯ ಜಿಲ್ಲೆಯ ೪೯ನೇ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆವಹಿಸಿದ ಶಿಕ್ಷಕಿ ಶ್ರೀಮತಿ ಶ್ರೀದೇವಿ ಹಾವನೂರ ಹಳೆ ತಲೆಮಾರಿಗೂ ಮತ್ತು ಹೊಸ ತಲೆಮಾರಿಗೂ ಕಂದಕ ಇಂದು ನಿರ್ಮಾಣವಾಗಿದೆ. ಇದನ್ನು ಗ್ರಂಥಾಲಯಗಳು ಮಾತ್ರ ತುಂಬಬಲ್ಲವು. ಓದಿನ ವಿಧಾನ ಇಂದು ಬದಲಾಗಿದ್ದು, ಡಿಜಿಟಲ್ ಓದಿಗೂ ಗ್ರಂಥಾಲಯಗಳು ಒತ್ತನ್ನು ಕೊಟ್ಟರೆ ಪ್ರಾಧಿಕಾರದ ಯೋಜನೆ ಇನ್ನಿಷ್ಟು ಯಶಸ್ವಿಯಾಗಬಹುದು ಎಂದು ಅವರು ಹೇಳಿದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ಮಾತನಾಡಿ ಪುಸ್ತಕ ಪ್ರಕಟಣೆಯಲ್ಲಿ ಮುದ್ರಣಾಲಯಗಳ ಪಾತ್ರ ಬಹಳ ದೊಡ್ಡದು. ಪುಸ್ತಕಗಳನ್ನು ಸೃಷ್ಟಿ ಮಾಡಿದ್ದೇ ಮುದ್ರಣಾಲಯಗಳು ಎಂದು ಹೇಳಿ, ಇಡೀ ಕರ್ನಾಟಕದಲ್ಲಿ ಮುದ್ರಣಾಲಯದಲ್ಲಿ ಉದ್ಘಾಟನೆ ಆಗುತ್ತಿರುವ ಏಕೈಕ ಗ್ರಂಥಾಲಯವೆAದು ಪ್ರಶಂಸಿಸಿದರು.ಶ್ರೀ ವಿರೂಪಾಕ್ಷ ಹಾವನೂರ ಮತ್ತು ಶ್ರೀಮತಿ ಗೀತಾ ಅವರನ್ನು ಪ್ರಾಧಿಕಾರದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತದ ಸ್ವಾತಂತ್ರೊö್ಯÃತ್ಸವ ಪ್ರಶಸ್ತಿಗೆ ಭಾಜನರಾದ ಸಮತಾ ಸೈನಿಕ ದಳದ ಎನ್.ಎಮ್. ಗಾಳೆಮ್ಮನವರನ್ನೂ ಕೂಡ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸರ್ವಶ್ರೀ ವ್ಹಿ.ಜಿ. ಬಣಕಾರ, ಹನುಮಂತಗೌಡ ಗೊಲ್ಲರ, ನಿವೃತ್ತ್ ಪ್ರಾಚಾರ್ಯ. ಪಿ.ಸಿ.ಹಿರೇಮಠ, ರಮೇಶ ಪಾಟೀಲ, ಸುಭಾಸ ಹುಲ್ಯಾಳದ, ವಾಯ್.ಬಿ. ಆಲದಕಟ್ಟಿ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ಪ್ರಭಾಕರ ರಿತ್ತಿ ಮುಂತಾದವರು ಉಪಸ್ಥಿತರಿದ್ದರು.ಆರಂಭದಲ್ಲಿ ಕುಮಾರಿ ಮಾನಸಾ ಪ್ರಾರ್ಥನೆ ಹಾಡಿದರು. ವಿರೂಪಾಕ್ಷ ಹಾವನೂರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಿದ್ದೇಶ್ವರ ಹುಣಸಿಕಟ್ಟೀಮಠ ನಡೆಸಿಕೊಟ್ಟರು. ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕರಾದ ಎಸ್.ಆರ್. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಕೊನೆಯಲ್ಲಿ ಈರಣ್ಣ ಬೆಳವಡಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 