ಟ್ರೆಂಡಿಂಗ್‌ನಲ್ಲಿ '45' ಟ್ರೇಲರ್
'45' trailer is trending
ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಹಾವಳಿ ಬಲು ಜೋರು!
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರುವ ಬಹು ನೀರೀಕ್ಷಿತ '45' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಜಾಲತಾಣದಲ್ಲಿ ಸಂಚಲ ಮೂಡಿಸುತ್ತಿದೆ. ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಚಿತ್ರದ ಟ್ರೇಲರ್‌ನಲ್ಲಿ ಸಾಕಷ್ಟು ಅಂಶಗಳಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ. ವಿಭಿನ್ನ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಗಮನ ಸೆಳೆದರೆ, ರಾಜ್ ಬಿ ಶೆಟ್ಟಿ ಮುಗ್ಧವಾಗಿಯೇ ಇಷ್ಟವಾಗುತ್ತಾರೆ. ಅದ್ಧೂರಿಯಾಗಿ ಮೂಡಿಬಂದಿರುವ ಈ ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ‘45' ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಟ್ರೇಲರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾ ಬಿಡುಗಡೆಯಾದ ಮೇಲೂ ಅದೇ ಬಗೆಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಚಿತ್ರತಂಡದ ಮಾತು.
ಶಿವಣ್ಣ ಈ ಚಿತ್ರದಲ್ಲಿ ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ 'ಚೆಲುವೆಯ ನೋಟ ಚೆನ್ನ' ಎಂದಾಗ ಬರುವ ಗೆಟಪ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಉಪೇಂದ್ರ ಸಹ ವಿಭಿನ್ನ ರೀತಿಯಲ್ಲಿ ಕಾಣಸಿಗುತ್ತಾರೆ. '45 ಅನ್ನೋದು ಒಂದು ಹೊಸತನದ ಸಿನಿಮಾ. ಹೀಗಾಗಿ 'ವೆಲ್‌ಕಮ್ ಟು ದ ವರ್ಲ್ಡ್ ಆಫ್ 45' ಎಂದು ಟ್ಯಾಗ್‌ಲೈನ್ ಹಾಕಿದ್ದೇವೆ. 45 ಅಂದರೆ ಯೂನಿವರ್ಸ್. ಸಿನಿಮಾ ನೋಡಿದವರಿಗೆಲ್ಲ ಒಂದು ಹೊಸ ವಿಸ್ಮಯ ಜಗತ್ತನ್ನು ನೋಡಿದ ಅನುಭವ ಆಗುವುದು ನಿಶ್ಚಿತ. 45 ಅಂದರೆ ದಿನದ ಲೆಕ್ಕ. ಯಾಕೆ 45 ಎಂಬುದು ಸಿನಿಮಾ ನೋಡಿದ ಬಳಿಕ ತಿಳಿಯುತ್ತದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಡಿಸೆಂಬರ್ 25ರಂದು ರೀಲೀಸ್ ಆಗಲಿದೆ. ಹಿಂದಿಯಲ್ಲಿ ಮಾತ್ರ ಒಂದು ವಾರದ ನಂತರ ಬಿಡುಗಡೆ ಆಗುತ್ತದೆ' ಎಂಬುದು ನಿರ್ದೇಶಕ ಅರ್ಜುನ್ ಜನ್ಯ ಅನಿಸಿಕೆ.
'ಇದೊಂದು ಫ್ಯಾಂಟಸಿ ಸಿನಿಮಾ ಅನ್ನಬಹುದು. ಆದರೆ ಸಂಪೂರ್ಣವಾಗಿ ಫ್ಯಾಂಟಸಿ ವಿಭಾಗಕ್ಕೆ ಸೇರಿಕೊಳ್ಳುವುದಿಲ್ಲ. ಫ್ಯಾಂಟಸಿ ಜೊತೆಗೆ ಲಾಜಿಕ್ ಕೂಡ ಇದೆ. ಮೂರೂ ನಾಯಕರ ಅಭಿಮಾನಿಗಳಿಗೆ ಎಲ್ಲೂ ಬೇಜಾರಾಗುವುದಿಲ್ಲ. ಸಾಕಷ್ಟು ಖರ್ಚು ಮಾಡಿ '45' ಸಿನಿಮಾ ಮಾಡಿದ್ದೇವೆ' ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 