ಮಾಯದ ಗಾಯ

ಡಾ. ನಿರ್ಮಲಾ ಬಟ್ಟಲ

ಡಳಿತಾತ್ಮಕ ಜವಾಬ್ದಾರಿಗಳು, ಅಧ್ಯಯನ, ಸಂಶೋಧನಾ ವಿದ್ಯಾಥರ್ಿಗಳಿಗೆ ಮಾರ್ಗದರ್ಶನಅದರ ಜೊತೆಗೆ ಆತ್ಮೀಯರ ಬರಹಗಳಿಗೆ ಬೆನ್ನುಡಿ, ಮುನ್ನುಡಿಗಳನ್ನು ಬರೆಯುತ್ತ ಸದಾತಮ್ಮನ್ನು ಕ್ರೀಯಾಶೀಲತೆಯಲ್ಲಿ ತೊಡಗಿಸಿಕೊಂಡ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದಶ್ರೀ ಡಾರಂಗರಾಜ ವನದುರ್ಗಅವರುಕಥೆ, ಲೇಖನ ವಿಮಶರ್ೆ, ಹಲವಾರು  ಸಂಶೋಧನಾ ಕೃತಿಗಳನ್ನು ರಚಿಸಿದರೂ ಅವರ ಬರವಣಿಗೆ ಮೂಸೆಯಿಂದ ಕವನ ಸಂಕಲನವೊಂದು ಇನ್ನೂ ಹೊರಬಂದಿರಲಿಲ್ಲ. ಮಾಯದಗಾಯಎನ್ನುವ ಕವನ ಸಂಕಲನದ ಮೂಲಕ ಕಾವ್ಯಕ್ಷೆತ್ರಕ್ಕೂ ಕಾಲಿರಿಸಿದ್ದಾರೆ.

ಬೆಂಗಳೂರಿನ ಗೀತಾಂಜಲಿ ಪ್ರಕಾಶನದವರು ಪ್ರಕಟಿಸಿರುವ ಮಾಯದಗಾಯ ಕವನ ಸಂಕಲನವು ಇಪ್ಪತೈದು ಕವನಗಳನ್ನು ಒಳಗೊಂಡಿದೆ ಪುರಾಣ, ಚರಿತ್ರೆ, ಜಾನಪದ ವಾಸ್ತವದೊಂದಿಗೆ ಬಂಡಾಯದದ್ವನಿ ಬೆಸೆದುಕೊಂಡು ಸಿಟ್ಟು ನೋವುಗಳನ್ನು ವ್ಯಕ್ತಪಡಿಸುವ ಬಂದೂಕಿನ ಗುಂಡುಗಳಾಗಿ ಕವಿತೆಗಳು ಮೂಡಿ ಬಂದಿವೆ.

ಹುಟ್ಟಿ ಬರುವೆವುಕವನದಲ್ಲಿ

"ಹುಟ್ಟಿ ಬರುವೆವು ಮತ್ತೆ

ಉರಿವ ಸೂರ್ಯನ ಒಳಗೆ

ರಕ್ತಗಾಲಿನ ನೆಲಕೆ ಬೆವರ ಬಿತ್ತಿ

ದುಡಿವ ಜನಗಳ ಧನಿಯನಭಕೆಎತ್ತಿ"

ಎನ್ನುವ ಸಾಲುಗಳು ವ್ಯವಸ್ಥೆಯ ತುಳಿತಕ್ಕೆ ಒಳಗಾದವರ ಒಡಲ ಕೂಗಾಗಿ ಪ್ರತಿಧ್ವನಿಸುತ್ತದೆ

ಒಡಲ ಅರಿಕೆಎನ್ನುವಕವನದ ಸಾಲುಗಳಲ್ಲಿ 

"ಪೊರೆವ ಕಣ್ಣುಗಳೆಲ್ಲ ಉರಿವ

ಪಂಜುಗಳಾಗಿ

ಬೆಳಕು ಬೀರಲಿ ಬೆಳೆವ ಇರುಳ ಜನಕೆ

ನಡೆವ ಕಾಲುಗಳೆಲ್ಲ

ಬರೆವ ಕೈಗಳಾಗಿ 

ಎದೆಗೆ ಬೀಳಲಿ ಹಗಲು ನೂರು ಮನಕೆ''

ಕಣ್ಣುಗಳಲ್ಲಿಯ ಊನತೆ ಮಾಯವಾಗಿಉರಿವ ಪಂಜುಗಳಾದಾಗಲೇ ಶೋಷಣೆಯ ಕತ್ತಲೆಯೊಳಗೆ ಬಳಲುವ ಜನಕೆ ಬೆಳಕಾಗಲು ಸಾಧ್ಯ ಶಿಕ್ಷಣದಿಂದ ಮಾತ್ರ ಶೋಷಣೆಯನ್ನು ಮುಕ್ತಗೊಳಿಸಬಹುದೆನ್ನುವ ಕವಿಯ ಆಶಯರೋಷದಲ್ಲಿ ವ್ಯಕ್ತವಾಗುವುದು ಕಾಣಬಹುದು.

ಕೊನೆಯುಸಿರು ಎನ್ನುವ ಕವನವು 

"ದೇವದೆವ್ವದೆದೆಯ

ಜಾತಿ ಭೂತ ಬೇತಾಳ

ಮಯರ್ಾದೆಗೇಡು ಮಚ್ಚುಗಳು 

ನನ್ನ ಕೊಳರ ಕೊಯ್ಯಲಿ

ಕೊನೆಯುಸಿರಲಿ ನಿನ್ನ ಉಸಿರ ಸೇರುವೆ"

ಮನಷ್ಯ ತನ್ನೊಳಗಿನ ದೇವರನ್ನೆ ಮರೆತುದೆವ್ವದಂತೆ ವತರ್ಿಸುತ್ತ ಕೊರಳು ಕೊಯ್ದ ಕೊಲೆ ಮಾಡುವಜಾತಿ ವ್ಯವಸ್ಥೆಗೆ ಸವಾಲಗೊಡುವ ಸಾಲುಗಳು ಪ್ರೀತಿಯ ಪ್ರತೀಕವಾಗಿ ಪ್ರತಿಧ್ವನಿಸುತ್ತದೆ.

"ನಮಸ್ಕಾರ" ಕವನದಲ್ಲಿ

"ಕಟ್ಟಬೇಕಿತ್ತುಗುಬ್ಬಿಯಗೂಡು

ಬಂದೂಕಿನ ಬಾಯೊಳಗೆ 

ಆಗಬೇಕಿತ್ತುಜನಾಧಿಕಾರ

ಬೆವರಿನ ಹನಿಗಳಿಗೆ"

ನಲವತ್ತರ ಬಂಡಾಯವೇ ನಿನಗಿದೋ ನಮಸ್ಕಾರಎನ್ನುವ ಮೂಲಕ ಸಮಾಧಾನ ಪಟ್ಟುಕೊಳ್ಳುವುದರ ಜೊತೆಗೆ ಹಾಗೇ ಉಳಿದ ಒಂದಿಷ್ಟು ನಿರೀಕ್ಷೆಗಳನ್ನು ಮೆಲಕು ಹಾಕುತ್ತಾರೆ ಬಂಡಾಯದ ನಂತರವೂ ಬದಲಾಗದ ಸಾಮಾಜಿಕ ವ್ಯವಸ್ಥೆಗಳಿಗೆ ನಿಟ್ಟುಸಿರು ಬಿಡುತ್ತಾ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಉರುಳುತಿವೆ 

ಗುಡಿಗೋಪುರ

ಮಸೀದಿ ಮಂದಿರ

ವಿಗ್ರಹ ವಿಚಾರ

ಆದರೆ

ಗೋಡೆ ಮಾತ್ರ ಹಾಗೆ ಇವೆ 

ಮುಗಿಲೆತ್ತರ

"ಹಾಗೆ ಇವೆ"ಎನ್ನುವಕವನದಲ್ಲಿ ವ್ಯಕ್ತಿಯ ಸಾಮಾಜಿಕಜೀವನ ಬದಲಾಗಿ ಸಮಾನತೆ ಬಂದರೂ ಮನಸ್ಸಿನ ಗೋಡೆಗಳನ್ನು ಕಟ್ಟಿಕೊಂಡು ಅವುಗಳ ಮುಂದೆ ಮನುಷ್ಯಕುಬ್ಜನಾಗುತ್ತಿದ್ದಾನೆ ವಸ್ತು ಸ್ಥಿತಿಗಳಲ್ಲಿ ವ್ಯವಸ್ಥೆ ಬದಲಾದರೂಅಂತರ್ಯದಲ್ಲಿ ಉಳಿದಿರುವ ಅಂತರಗಳ ಬಗ್ಗೆ ಬೇದವನ್ನು ವ್ಯಕ್ತಪಡುತ್ತಿದೆ.

ಬರೆಯುತ್ತೇನೆ ಎನ್ನುವ ಕವನದಲ್ಲಿ

ಅಳುತ್ತಿರು ಕವಿತೆಗಳೇ 

ಅಳದಿರು ನಿಮ್ಮನ್ನು ಬರೆಯುತ್ತೇನೆ

ಎನ್ನುವ ಕವಿಯ  ಕಣ್ಣೀರ  ಕಥೆಗಳಿಗೆ ಅಧಿಕಾರದ  ಕ್ರೌರ್ಯಕ್ಕೆ ಮೂಕಾದ ಮೌನಕೆಕರಗಿದ ಕನಸುಗಳಿಗೆ ಹೆದರಿದ ಅಬಲೆಯರಿಗೆದೇಶ ಧರ್ಮಗಳ ದಾಳಿಗೆ ಸಮಾಧಾನ ಪಡಿಸುತ್ತಾರೆ ನಾನು ನಿಮ್ಮನ್ನು ಬರೆಯುತ್ತೇನೆ ಎನ್ನುವ ಮೂಲಕ ವಾಸ್ತವದ ಚಿತ್ರಣವನ್ನು ಚರಿತ್ರೆಗೆ ಸೇರಿಸುತ್ತಾರೆ.

ಬಿತ್ತಿ ಬೆಳೆದಿರುವ 

ಬಾಂಬಿನ ಬೆಳೆಗಳು 

ಊರತುಂಬಿರುವ

ಅರಗಿನ ಮನೆಗಳು 

ಭೂಗೋಳ ಸೀಳುವ 

ಬೆರಳ ತುದಿಗಳು 

ಕಟಾವು ಹೇಗೆಂದು

ಕೇಳದಿರುವ ಕದನವೇ ನಿನಗಾಗಿ ಕಾದಿವೆ ನೂರು ಯುದ್ದಗಳು ಜಾತಿಧರ್ಮ ದ್ವೇಷಗಳು ರಕ್ತ ಪಿಪಾಸುಗಳಾಗಿ ಮಾನವಕುಲದ ಬಲಿಗಾಗಿ ಕಾದು ಕುಳಿತಿವೆ ಎಂದುಎಚ್ಚರಿಕೆ ನೀಡುವುದರಜೊತೆಗೆ ಯುದ್ದಗಳಿಂದ ಜಾತಿ ಧರ್ಮಗಳು ಅಳಿಯುದರಲ್ಲಿ ಅವು ಮನಗಳಿಂದ ಅಳಿಯಬೇಕು ಯುದ್ದ ಮನುಕುಲವನ್ನೇ ಅಳಿಸಿ ಹಾಕಲು ಹಾತೊರೆಯುತ್ತದೆಎನ್ನುವುದುನಿನಗಾಗಿ ಕಾದಿವೆಕವನದ ಸಂದೇಶವಾಗಿದೆ

"ಕೇಳುವ ಕಿವಿ ಬಾಯಿಗೆ 

ಪವಿತ್ರ ಭಾವ ಭಾಷೆಗಳು 

ಕಾದಸೀಸವನು ಕುಡಿಸಿವೆ 

ಹೇಗೆ ಹಾಡಲಿ ಯಜ್ಞಯಾಗವ"

ಎನ್ನುವಕವಿಯ ಪ್ರಶ್ನೆಯಲ್ಲಿ  ಮತ್ತದೆ ಮೇಲು ಕೀಳಿನ ನೂರು ನೋವುಗಳಿವೆ ಏಕಲವ್ಯನ ರಕ್ತದ  ಹನಿಯಿದೆ ನಾಲಿಗೆ ಇಲ್ಲದ ನುಡಿಯುವ ಬಡವನ ಮಾತಿದೆ ಮೆದುಳು ಗಾಯ ಮಾಡಿಕೊಂಡು ಬದುಕುವ ವ್ಯವಸ್ಥೆಯಿದೆ.

ಸುತಚರಿತಕವನದಲಿ

"ಗಾಳೆಯೆದ್ದು ಹೊರಟಿರುವ

ಜೋಪಡಿ ಜೀವಗಳು 

ಕತ್ತಲ ಮನೆಯಲ್ಲಿಕೆಂಪಾದವೂ"

ಎನ್ನುವ ಸಾಲುಗಳು ಬಡತನದ ವಾಸ್ತವ ಚಿತ್ರಣವನ್ನು ತೆರೆದಿಡುತ್ತವೆ. ಕಂಪಾದವೂ ಎನ್ನುವ ಕವನದಲ್ಲಿ ಪ್ರಕೃತಿಯನ್ನು ವಣರ್ಿಸುವ ಕವಿ  ಮುತ್ತಗ ಕಮಲದ ಹೂವು ಸೂರ್ಯನ ಕಿರಣಕ್ಕೆ ಕೆಂಪಾದರೆ ಬಡವರ ಎದೆಯ ಉರಿ ಮನೆ ಹೆಣ್ಣು ವ್ಯಶಾಗೃದ ಕೆಂಪು ಕೋಣೆಯ ಸೇರುವ ಕೆಸರಿನಲ್ಲಿ ಹುಟ್ಟಿದ್ದಕ್ಕೆ ಚಿತೆ ಏರುವ ಮುತ್ತುಗದಂತೆ.

ಒತ್ತಲಗುದುರಿ ಹತ್ತಿ ಬಂದ

ದಂಡಿನಗಂಡನಿಗೂ

ನೀನು ಮಾತಾಡಲಿಲ್ಲ  ಮುಖ ತೋರಲಿಲ್ಲ

ಆದರೂ ಅವ ಕಾವಲಿನ ಕೆರೆಏರಿ

ತುಂಬಿದ ನಿನ್ನೊಂದಿಗೆ ತುಳಿಕಿಬಿಟು

ಎನ್ನುವ ಭಾಗಿರಲೇರ ಬಲಿದಾನವನ್ನುಕವನದಲ್ಲಿ

ನೆನೆಯುವಕವಿಯ ಸಾಲುಗಳು ಓದುಗನನ್ನು

ಕಾಡುತ್ತವೆ

"ಬಾಗಿನದ ಪಟ್ಟಿಯಲಿ ಇನ್ನೆಷ್ಟು ಬಾಗಿರಲೆಯರಿದ್ದಾರೋ" ಏನೋ ಎನ್ನುವಕವಿಯ ಸಂಶಯ, ಪಟ್ಟ ಪಂಚಾಗಗಳಲ್ಲಿ ಶೋಷಣೆಯಾಗುವ ಭಾಗೀರತಿಯರು ಮತ್ತೆ ಮತ್ತೆ ನಮ್ಮನ್ನುಕಾಡುತ್ತಲೇಇರುವರು ಬಾಗೀನ ನೀಡುವ ಪರಿ ಬದಲಾಗಿದೆ ಭಾಗೀರತಿಯರು ನಮ್ಮ ನಡುವೆಇದ್ದಾರೆ

"ನುಗ್ಗಿಬರುವ" ಎನ್ನುವಕವನದಲ್ಲಿ ಕವಿ ತನ್ನ ಭಾವ ಸೆಲೆಯೊಳಗಿಂದ ನುಗ್ಗಿ ಬರುವ ನೂರಾರು ಮಾತು  ಮೌನ ನೆನಪು ಕನಸುಗಳನ್ನು ಜೋಡಿಸುತ್ತ ನುಗ್ಗಿ ಬರುವ ನೂರು ಮಾತುಗಳು  ತುಟಿ ತುಂಬಾ ನಕ್ಕು 

ಕಣ್ತುಂಬಾಕುಣಿದು ಗುಳಿ ಬಿದ್ದಗಲ್ಲಕ್ಕೆ ಮುತ್ತಿಕ್ಕುತ್ತಿವೆ" ಹರ್ಷ ವ್ಯಕ್ತಪಡಿಸಲು ಹಾತೊರೆದರೆ ಮೌನಕಣ್ಣ ಹನಿಗೆ ಅಕ್ಷರವಾಗುತ್ತಿದೆ ನೆನಪು ಎಡವಿದ ನಡಿಗೆಯಲ್ಲಿ ನರಳುತ್ತವೆ ಕನಸು ಗಿಣಿಕಚ್ಚಿದ ಹಣ್ಣಿನ ಸವಿಯ ಸವಿಯುತ್ತಿದೆಎನ್ನುವ ನುಗ್ಗಿಬರುವ ಹತೂರು ಭಾವಗಳು ಕವನದ ಸಾಲುಗಳಲ್ಲಿ ಚಿತ್ತೂರ ಮೂಡಿಸಿವೆ ನಿನ್ನ ಕಣ್ಣಕವನದಲಿ ಯಾವ ಉಪಮೇಯ ಹುಡುಕಲಿ ಎನ್ನುವ ಕವನದ ಸಾಲುಗಳು ಪ್ರೀತಿಯ ಭಾವದಲ್ಲಿ ಪ್ರಿಯತಮೆಯನ್ನು ರಮಿಸುವ ಕವಿ, ಪಿಸುಗುಟ್ಟುವ ಪ್ರೇಯಸಿಯ ಮಾತುಗಳಿಗೆ ಗುಮ್ಮಟದ ಹೋಲಿಕೆ ನೀಡಿದರೆ ಮೈಮಾಟವನ್ನುಅಂದವಾದತಾಜ್ ಮಹಲ್ಗೆ ಹೋಲಿಸಿ ನೀನೆ ಕವಿತೆಯಾದ ಮೇಲೆ ಯಾವಕವಿತೆ ಬರೆಯಲಿ ಎನ್ನುವ ಪ್ರಶ್ನೆಯಲ್ಲಿಯೇ ನೀನೇ ಕವಿತೆ ಎನ್ನುವ ಅಂಧವಾದ ಕವಿತೆಯೊಂದನ್ನು ರಚಿಸಿದ್ದಾರೆ.ಕೈಜಾರಿದ ಪ್ರೀತಿಯನ್ನು ನೆನೆದು ಹಲುಬುವ ಹಾಡೊಂದು ಬೆಳ್ಳಿ ಚುಕ್ಕಿಯಾಗಿ ಮೂಡಿ ಬಂದಿದೆ

ಜಿಗಿದ ಆಗಸದಲಿ

ಚಂದ್ರನಿಗೆ ಚಕ್ಕಂದ ಕಲಿಸಿ 

ಮೋಡಕ್ಕೆ ಮಳೆಬಿಲ್ಲಾದ ನನ್ನ ಬೆಳ್ಳಿಚುಕ್ಕಿ

ಇಂದು ಯಾರ ಸಿಟ್ಟಿಗೆ ಉಲ್ಕೆಯಾಗಿ ಉರಿಯಿತೋ

ಎನ್ನುವ ಅಸಹಾಯಕತೆಯ ಹತಾಶೆ ಭಾವ ವ್ಯಕ್ತವಾಗುತ್ತದೆ ನೀ ದೂರವಾದರೆ

ಉಮ್ಮಳಿಸಿದ ದುಃಖದಲಿ

ಅಬ್ಬರಿಸಿ ಅತ್ತುಬಿಡಬೇಕೆಂದಿದ್ದೇನೆ ಹೇಗೆ ಅಳಲಿ

ಎಂದು ಪ್ರಶ್ನಿಸುತ್ತಾ 

ನೀ ದೂರವಾದರೆ ಬರೆದ ಕವಿತೆಗಳೆಲ್ಲ

ಸಿಟ್ಟಲ್ಲಿ ಸುಡಬೇಕೆಂದಿದ್ದೆ

ಮನದಗಾಯಕೆ ಮುಲಾಮು ಹಚ್ಚುತ್ತಿವೆ ಹೇಗೆ ಸುಡಲಿ ಎನ್ನುವ ಸಾಲುಗಳು ಭಗ್ನ ಪ್ರೇಮಿಯಎದೆಯಗಾಯಕೆ ಮುಲಾಮು ಹಚ್ಚುವ ಕಳೆದುಕೊಂಡ ಪ್ರೀತಿಯನು ನೋವಿನಲಿ ಹುಡುಕುವ ಪರಿಯನು ಹೇಗೆ ಸುಡಲಿ ಕವನ ಪ್ರಶ್ನಿಸುತ್ತಾ  ಓದುಗನ ಮನದೊಳಗೆ ಉತ್ತರದ ಹುಡುಕಾಟಕ್ಕೆ ಹಚ್ಚುತ್ತದೆ ಹೆಣ್ಣಿನ ನೋವು ನಲಿವು ವಿರಹಗಳನ್ನು ತಮ್ಮಕವನದಲ್ಲಿ ಕವಿ ಬಣ್ಣಿಸುತ್ತಾ ಸಾಗುತ್ತಾರೆ ಉಟ್ಟಚಿನ್ನ ಇಟ್ಟಗಂಧ ನೊಂದ ನಿರಿಗೆಯಲಿ ನೆರಳಿ ಬಂದರೆ ಪಳಗಿಸುವ ರಾತ್ರಿ ರಣದೊಳಗೆ ಎನ್ನುವ ಅಂತಃಪುರಕವನದ ಸಾಲುಗಳು ಹೆಣ್ಣಿನ ಅಂತಃಪುರದ ನೋವುಗಳ ಸುರುಳಿಯನ್ನು ಬಿಚ್ಚಿಡುತ್ತದೆ. ತುಂಬಿದಹೊಳೆಯ, ನಂಬಿದ ಇಳೆಯ ಶಿವಗಂಗೆ ನಾನು ತಿಳಿಯ ಗೆಳೆಯ ಈಟಿಲ್ಲ ಜೋಡು ಹೊಳೆಯ ವೈವಾಹಿಕ ಸಂಬಂಧದಾಚೆಗಿನ ಪ್ರೀತಿಯ ನಿವೇದನೆಯನ್ನು ನವಿರಾಗಿತಿರಸ್ಕರಿಸುವ ಹೆಣ್ಣಿನ ಮನ ಸಾಯಲ್ಲ ಪ್ರೀತಿ ಪರುಷ ಮುಂದಿನ ಜನ್ಮ ಬಾಳ ಎಂದು ಹೇಳುವ ನನ್ನ ಪ್ರೀತಿಗಾಗಿ ಮುಂದಿನ ಜನ್ಮದಲ್ಲಿ ಕಾಯಿ ಎರಡು ಹೊಳೆಯನ್ನು ಈಜಿದ್ರೋಹಮಾಡುವುದಿಲ್ಲವೆನ್ನುವ ಸಾಲುಗಳು ಹೆಣ್ಣಿನ ನೈತಿಕ ನೆಲೆಗಟ್ಟನ್ನು ಎತ್ತಿ ಹಿಡಿಯುತ್ತವೆ

"ಕಣ್ಣು ಮಿಟುಕಿಸಿ 

ಕರೆಯದಿರುವಚಂದಿರ

ಸೂರ್ಯ ಸಿಟ್ಟಾಗುತ್ತಾನೆ" ಎನ್ನುವಕವನದ ಸಾಲುಗಳಲ್ಲಿ ದರ್ಪಕ್ಕೆ ಬಲಿಯಾದ ಹೆಣ್ಣಿನ ನೋವಿನ ಕಥೆಯುಚಂದ್ರನ ಶೀತಲ ಪ್ರೀತಿಯ ಬಯಸುವ ಮನಸ್ಥಿತಿಯು ಅರ್ಥವಾಗುತ್ತದೆ

ಹೀಗೆ ಕವನ ಸಂಕಲನದಲ್ಲಿನ ಇಪ್ಪತೈದು ಕವನಗಳು ಓದುಗನ ಮನದಲ್ಲಿ ಅಚ್ಚೊತ್ತುತ್ತ ಸಾಗುತ್ತವೆ. ಸಂಕಲನ ಚಿಕ್ಕದಾದರೂ ಚೊಕ್ಕದಾಗಿಕವಿಯ ಆಶಯಗಳನ್ನು ಓದುಗನಿಗೆ ಉಣಬಡಿಸುವಲ್ಲಿ ಯಶಸ್ವಿಯಾಗುತ್ತವೆ.