ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಚಿತ್ರನಗರಿ ಎಂಬ ಕನಸು ಗಗನ ಕುಸುಮವಾಗಿದೆ. ಕಳೆದ 50 ವರ್ಷಗಳಿಂದಲೂ ಒಂದು ನಿರ್ದಿಷ್ಟ ಜಾಗವನ್ನು ಮಂಜೂರು ಮಾಡಲಾಗದ ಸರ್ಕಾರಕ್ಕೆ ಚಿತ್ರನಗರಿ ಕಟ್ಟಿಕೊಡುವುದು ಯಾವಾಗ?...ಪಕ್ಕದ ರಾಜ್ಯ ಹೈದರಾಬಾದ್ನಲ್ಲಿ 2000 ಎಕರೆ ಪ್ರದೇಶದಲ್ಲಿ ಜಗತ್ತಿನ ಅತಿದೊಡ್ಡ ಚಿತ್ರನಗರಿ ನಿರ್ಮಿಸಿದೆ. ನಮ್ಮ ರಾಜ್ಯದಲ್ಲಿ ನೂರಿನ್ನೂರು ಎಕರೆ ಭೂಮಿ ನೀಡಲು ರಾಜ್ಯಸರ್ಕಾರ ಮೀನಮೇಷ ಮಾಡುತ್ತಿದೆ.
ಯಾವುದೇ ಉದ್ಯಮ ಬೆಳೆಯಬೇಕಾದರೆ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು. ಅದರಲ್ಲೂ ತಮಿಳು-ತೆಲುಗು ಚಿತ್ರರಂಗ ಉತ್ತುಂಗಕ್ಕೆ ಏರಿದಂತೆ ಕನ್ನಡ ಚಿತ್ರರಂಗವನ್ನು ಬೆಳೆಸಲು ಮೂಲಭೂತವಾಗಿ ಬೇಕಾಗಿರುವುದು ಒಂದು ಚಿತ್ರನಗರಿ, ಇನ್ನೊಂದು ಚಿತ್ರಮಂದಿರಗಳು. ಇವೆರಡು ಸೌಕರ್ಯವನ್ನು ಒದಗಿಸಲಾಗದ ಸರ್ಕಾರ ಚಿತ್ರರಂಗವನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತಿದೆ.
ಫಿಲ್ಮ್ ಸಿಟಿ ಯಾಕೆ ಬೇಕು...?
ಬಿಗ್ ಬಜೆಟ್ ಸಿನಿಮಾಗಳನ್ನು ನಿಮರ್ಾಣ ಮಾಡಬೇಕಾದರೆ 50 ರಿಂದ 100 ಕೋಟಿಯ ಬಜೆಟ್ ಬೇಕು. ಏನೇ ಡಿಜಿಟಲ್ ಟೆಕ್ನಾಲಜಿ ಸೌಲಭ್ಯವಿದ್ದರೂ, ಸಿನಿಮಾ ನೈಜವಾಗಿ ಬರಲು ಲೊಕೆಷನ್ ತುಂಬಾ ಮುಖ್ಯ. ಕನ್ನಡ ಚಿತ್ರೋದ್ಯಮದವರು ಯಾವುದೇ ದೊಡ್ಡ ಸಿನಿಮಾ ಮಾಡಬೇಕಾದರೂ ಹೈದರಾಬಾದ್, ಬಾಂಬೆ, ಚೆನೈಗೆ ಹೋಗಲೇ ಬೇಕು. ಹೊರರಾಜ್ಯಗಳ ಅವಲಂಬನೆ ಇಲ್ಲದೇ ನಾವು ಚಿತ್ರಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ. ಹೀಗಾಗಿ ನಮ್ಮ ದೊಡ್ಡ ಸಿನಿಮಾಗಳ ಬಜೆಟ್ ಹೆಚ್ಚಿನ ಬಾಗ ಪರ ರಾಜ್ಯಗಳ ಪಾಲಾಗುತ್ತಿದೆ.
ಕನ್ನಡ ಚಿತ್ರರಂಗ ಹಾಗೂ ಚಿತ್ರಕರ್ಮಿಗಳು ಬೆಳೆಯಲು ಚಿತ್ರನಗರಿ ಅವಶ್ಯಕತೆಯಿದೆ
ರಾಜ್ಯ ಸರ್ಕಾರದ ಕನ್ನಡ ಚಿತ್ರೋದ್ಯಮಕ್ಕೆ 200-300 ಎಕರೆ ಪ್ರದೇಶವನ್ನು ಮಂಜೂರು ಮಾಡಿದಾಗ, ಚಿತ್ರೋದ್ಯಮಿಗಳಿಗೆ ಹೊಸ ಹುಮ್ಮಸ್ಸು ಬರುತ್ತದೆ. ಒಂದು ಚಿತ್ರನಗರಿಯಲ್ಲಿ ಎಲ್ಲವು ಇರಬೇಕಾಗುತ್ತದೆ. ಸ್ಟುಡಿಯೋಸ್, ಲೊಕೆಷನ್, ಪಾಕರ್್, ಕಾಡು, ಲೇಕ್, ದೊಡ್ಡ ದೊಡ್ಡ ಕಟ್ಟಗಳು ಇತ್ಯಾದಿ.. ಅಲ್ಲದೇ ಕೆಲವು ಸಿನಿಮಾಗಳಿಗೆ ಸೆಟ್ ಹಾಕಲೂ ಖಾಲಿ ಜಾಗಗಳು. ಹೀಗೆ ಒಂದು ಸ್ಥಳದಲ್ಲಿ ಎಲ್ಲಾ ಸೌಲಭ್ಯಗಳನ್ನು ಸಿಕ್ಕಾಗ ಚಿಕ್ಕ ಬಜೆಟ್ ಸಿನಿಮಾಕ್ಕಾಗಲಿ, ಇಲ್ಲವೇ ಬಿಗ್ ಬಜೆಟ್ ಸಿನಿಮಾವಾಗಲಿ ನಿರಾಳವಾಗಿ ಒಂದೇ ಸ್ಥಳದಲ್ಲಿ ಸಿನಿಮಾವನ್ನು ಕಂಪ್ಲೀಟ್ ಮಾಡಲು ಅವಕಾಶ ದೊರೆಯುತ್ತದೆ. ಪ್ರಿಪ್ರೊಡಕ್ಷನ್, ಶೂಟಿಂಗ್ ಹಾಗೂ ಪೊಸ್ಟ್ ಪ್ರೊಡಕ್ಷನ್ ಇತ್ಯಾದಿ. ಇದರಿಂದ ಬಜೆಟ್ ಕೂಡ ಕಡಿಮೆಯಾಗುತ್ತದೆ. ಕನ್ನಡಿಗರಿಗೆ ನೂರಾರು ರೀತಿಯ ಕೆಲಸದ ಅವಕಾಶಗಳು ದೊರೆಯುತ್ತವೆ.

ಶಿವಣ್ಣನ ನಾಯಕತ್ವ ಚಿತ್ರನಗರಿಯ ಸ್ಥಾಪನೆಗೆ ಆಶಾಭಾವ
ಮೊನ್ನೆ ಕನ್ನಡ ಚಿತ್ರರಂಗಕ್ಕೆ ಡಾ.ಶಿವರಾಜ್ ಕುಮಾರವರ ನಾಯಕತ್ವ ಸಿಕ್ಕಿದೆ. ಈಗಾಗಲೇ ಸಮಗ್ರ ಚಿತ್ರಂಗದ ಅಭಿವೃದ್ಧಿಗೆ ಶಿವಣ್ಣನ ಜೊತೆಗೆ ಕನ್ನಡ ವಾಣಿಜ್ಯಮಂಡಳಿ ಕೂಡ ಟೊಂಕ ಕಟ್ಟಿ ನಿಂತಿದೆ. ಮೊನ್ನೆ ಚಿತ್ರನಗರಿಯ ಕುರಿತು ಶಿವಣ್ಣ ಹಾಗೂ ನಿಮರ್ಾಪಕರಾದ ಕೆ.ಪಿ.ಶ್ರೀಕಾಂತ್ ಹಾಗೂ ಕಾರ್ತಿಕ್ ಗೌಡ ಮುಂತಾದವರು ಡಿ.ಸಿ.ಎಮ್. ಅಶ್ವತ್ ನಾರಾಯಣ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ.
ಸಮಗ್ರ ಚಿತ್ರರಂಗ ಒಂದಾಗಿ ಸಕರ್ಾರದ ಬೆನ್ನುಬಿದ್ದರೆ ಶೀಘ್ರವಾಗಿ ಜಮಿನನ್ನು ಪಡೆದು, ಚಿತ್ರನಗರಿಯ ಸ್ಥಾಪನೆಗೆ ಅಡಿಗಲ್ಲೂ ಮುಹೂರ್ತವಾಗುತ್ತದೆ. ಅಲ್ಲದೇ ರಾಜ್ಯಸಕರ್ಾರ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಸಿ, ಚಿತ್ರೋದ್ಯಮದ ಮೂಲಭೂತ ಸೌಕರ್ಯಗಳಾದ ಚಿತ್ರನಗರಿ ಹಾಗೂ ಚಿತ್ರಮಂದಿರಗಳ ನಿಮರ್ಾಣಕ್ಕೆ ಸಂಪೂರ್ಣ ಪ್ರಾಮಾಣಿಕ ಸಹಕಾರದ ಅವಶ್ಯಕತೆಯಿದೆ.
ಸರ್ಕಾರ ಮನಸ್ಸು ಮಾಡಿದರೆ ಸಾವಿರಾರು ಎಕರೆ ಜಮೀನು ನೀಡಬಹುದು-ಜಾಕ್ ಮಂಜು
ಈಗಾಗಲೇ ಸುದೀಪ್ ಅಭಿನಯದ ಬಿಗ್ ಬಜೆಟ್ ಪ್ಯಾಂಟಮ್ ಸಿನಿಮಾ ನಿರ್ಮಾಣಮಾಡುತ್ತಿರುವ ಜಾಕ್ ಮಂಜು ತಮ್ಮ ನೂರಕ್ಕೂ ಹೆಚ್ಚು ಚಿತ್ರಕರ್ಮಿಗಳನ್ನು ಕರೆದುಕೊಂಡು ರಾಮೋಜಿ ಪಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದ್ದಾರೆ. ಅವರು ಫಿಲ್ಮ್ ಸಿಟಿಯ ಅವಶ್ಯಕತೆಯ ಬಗ್ಗೆ ಮಾತಾಡಿರುವುದು ಹೀಗೆ, ಒಂದು ದೊಡ್ಡ ಸಿನಿಮಾ ನಿರ್ಮಾಣ ಮಾಡಲು ಚಿತ್ರನಗರಿಯ ಅವಶ್ಯಕತೆ ತುಂಬಾ ಇದೆ. ಈಗ ನಾವು ಫ್ಯಾಂಟಮ್ ಸಿನಿಮಾಕ್ಕಾಗಿ ಒಬ್ಬ ನಿಂದ ಹಿಡಿದು ಸೆಟ್, ಸ್ಟುಡಿಯೋ, ಲೊಕೆಷನ್ ಕೆಲಸಗಳಿಗೆ ಕೊಟಿಗಟ್ಟಲೇ ಹಣ ಸುರಿಯುತ್ತಿದೇವೆ. ಈ ಎಲ್ಲಾ ಹಣವು ತೆಲಗು ಚಿತ್ರರಂಗದ ಕಾರ್ಮಿಕರಿಗೆ ಹಾಗೂ ಜಿಎಸ್ಟಿ ಹಣ ಆ ರಾಜ್ಯಸರಕಾರಕ್ಕೆ ರಕ್ಕೆ ಸಂದಾಯವಾಗುತ್ತದೆ. ಒಂದು ಚಿತ್ರನಗರಿಯನ್ನು ನಮ್ಮ ರಾಜ್ಯದಲ್ಲಿಯೇ ಇದ್ದಾಗ ಚಿತ್ರದ ಬಜೆಟ್ ಕೂಡ ಕಡಿಮೆಯಾಗುತ್ತದೆ. ನಮ್ಮ ಚಿತ್ರರಂಗ ಸದೃಢವಾಗಿ ಬೆಳೆಯುತ್ತದೆ, ಎಂದು ಮಂಜು ಹೇಳುತ್ತಾರೆ.
ಚಿತ್ರನಗರಿ ಬೆಂಗಳೂರಿನಲ್ಲಿಯೇ ಸ್ಥಾಪನೆಯಾಗಬೇಕು
ಮಾತು ಮುಂದುವರೆಸುತ್ತಾ ಜಾಕ್ ಮಂಜು, ಸಿನಿಮಾ ನಿಮರ್ಾಣಕ್ಕೆ ಅನುಕೂಲವಾಗಬೇಕಾದರೆ, ಮೆಟ್ರೋ ಹಾಗೂ ಸುಲಭ ಸಂಚಾರಕ್ಕೆ ಅನುಕೂಲವಾಗುವಂತಹ ಸ್ಥಳದಲ್ಲಿ ಫಿಲ್ಮ್ಸಿಟಿಯಾಗಬೇಕು. ಹೆಸರಘಟ್ಟ ಮಾತ್ರವಲ್ಲ ಕನಕಪುರ ರೋಡ್ನಲ್ಲಿ ದೇವಿಕಾ ರಾಣಿ ಎಸ್ಟೇಟ್ ನಂತಹ ಸಾವಿರಾರು ಎಕರೆ ಪ್ರದೇಶಗಳು ದೊರೆಯುತ್ತವೆ. ಸರ್ಕಾರ ಚಿತ್ರರಂಗದ ಅಭಿವೃದ್ಧಿಗಾಗಿ ಶೀಘ್ರವೇ ಜಮೀನು ಮಂಜೂರು ಮಾಡಿದರೆ, ನಮ್ಮ ರಾಜ್ಯದಲ್ಲಿಯೇ ನೂರಾರು ಮಂದಿ ಫಿಲ್ಮ್ಸಿಟಿಯನ್ನು ನಿಮರ್ಿಸಲು ಮುಂದೆ ಬರುತ್ತಾರೆ, ಎಂದು ಜಾಕ್ ಮಂಜು ಹೇಳುತ್ತಾರೆ
ಡಿಜಿಟಲ್ ಯುಗಕ್ಕೆ ಸೂಕ್ತವಾದ ಚಿತ್ರನಗರಿನಿರ್ಮಾಣವಾಗಬೇಕು: ಬಾ.ನ.ಸುಬ್ರಹ್ಮಣ್ಯ
.jpg)
ಚಿತ್ರನಗರಿ ನಿರ್ಮಾಣಕ್ಕೆ ಭೂಮಿ ನೀಡಲು ಸರ್ಕಾರಕ್ಕೆ ಕಳೆದ 50 ವರ್ಷಗಳಿಂದಲೂ ಸಾಧ್ಯವಾಗಿಲ್ಲ. ಸಕರ್ಾರ ಚಿತ್ರರಂಗಕ್ಕೆ ಈಗಾಗಲೇ ಘೋಷಿಸಿದ ಅನುದಾನಕ್ಕೆ ಪ್ರತಿಯಾಗಿ ಪ್ರೇಕ್ಷಕರ ಟಿಕೆಟ್ಗಳಿಗೆ ಸರ್ಚಾಜರ್್ ಹಾಕಿ ಸುಂಕದ ರೂಪದಲ್ಲಿ ಹಣ ಹಿಂಪಡೆಯುತ್ತಿದೆ. ಹಿಂದೆಂದಿಗಿಂತಲೂ ಇಂದು ಚಿತ್ರೋದ್ಯಮದ ಅಭಿವೃದ್ಧಿಗೆ ಚಿತ್ರನಗರಿಯ ಅಗತ್ಯ ಬಹಳಷ್ಟಿದೆ. ಚಿತ್ರನಗರಿಯ ಸ್ವರೂಪವು ಸೆಲ್ಯೂಲೈಡ್ ನಿಂದ ಡಿಜಿಟಲ್ ಯುಗಕ್ಕೆ ಸೂಕ್ತವಾದ ರೀತಿಯಲ್ಲಿ ಬ್ಲೂಪ್ರಿಂಟ್ ರೆಡಿಯಾಗಬೇಕು. ಸಕರ್ಾರ ಗಟ್ಟಿ ನಿರ್ಧಾರದ ಮೂಲಕ ಚಿತ್ರನಗರಿಗೆ ಭೂಮಿ ನೀಡಿದರೆ ಚಿತ್ರನಗರಿಯ ಕನಸು ನನಸಾದಂತೆ, ಎನ್ನುತ್ತಾರೆ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ, ಬಾ.ನ.ಸುಬ್ರಹ್ಮಣ್ಯ