ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಬೆಳಗಾವಿ ಯುವಕರ ಅನ್ವೇಷಣೆ
ಕೋವಿಡ್-19 ಸೃಷ್ಟಿಸಿದ ಈ ಕಠಿಣ ಸಮಯಕ್ಕೆ ನಾವೆಲ್ಲರೂ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕುತ್ತದೆ. ಪ್ರತಿನಿತ್ಯದ ಹಲವು ಸಮಸ್ಯೆಗಳಲ್ಲಿ ಒಂದನ್ನು ಪರಿಹರಿಸುವ ನಿಟ್ಟಿನಲ್ಲಿ ಆಕಾಶ್ ಬಿ. ಕಾಲಂಗೆ ಸಪ್ಲಾಯಸ್ಸರ್ ಮೂಲಕ ನಮಗೆ ಎಸ್.ಬ್ಯಾಂಡ್ ಎಂಬ ಉತ್ಪನ್ನವನ್ನು ನೀಡಿದ್ದಾರೆ. ಇದು ನೈರ್ಮಲೀಕರಣಕ್ಕೆ ಪರಿಹಾರ ಒದಗಿಸುತ್ತದೆ. ಎಸ್. ಬ್ಯಾಂಡ್ ನಿಮ್ಮ ಕೈಮೇಲೆ ಹಿತಕರವಾಗಿ ಹೊಂದಿಕೊಳ್ಳುತ್ತದೆ ಮತ್ತು ಅದರಲ್ಲಿರುವ ಗುಂಡಿಯನ್ನು ಒತ್ತಿದರೆ ನಿಮ್ಮ ಕೈಗೆ ಸ್ಯಾನಿಟೈಜರ್ ಬರುತ್ತದೆ. ಸಪ್ಲಾಯಸ್ಸರ ಇ-ಕಾಮಸ್ರ್ ಪ್ಲಾಟ್ಫಾರ್ಮ್ ಆಗಿದ್ದು, ಇದು ಕಸ್ಟಮೈಸ್ ಮಾಡಿದ ಪ್ಯಾಕೇಜಿಂಗ್ ಉತ್ಪನ್ನಗಳು, ಕಚೇರಿ ಲೇಖನ ಸಾಮಗ್ರಿ, ಐಟಿ ಘಟಕಗಳು ಮತ್ತು ವಿದ್ಯುತ್ ವಸ್ತುಗಳನ್ನು ತಲುಪಿಸುವ ಎಲ್ಲಾ ವ್ಯವಹಾರಗಳಲ್ಲಿ ಸುರಕ್ಷತೆಗೆ ವರದಾನವಾಗಿದೆ. ಎಸ್. ಬ್ಯಾಂಡ್ ಉತ್ಪನ್ನದ ಕುರಿತು ಉತ್ಪಾದಕರಾದ ಆಕಾಶ್ ಬಿ. ಕಾಲಂಗೆ ಲೋಕದರ್ಶನ ಪತ್ರಿಕೆಗೆ ನೀಡಿರುವ ಸಂದರ್ಶನ ಇಂತಿದೆ.
ಪ್ರಶ್ನೆ: ಎಸ್.ಬ್ಯಾಂಡ್ ಎಂದರೇನು?
ಇದು ಸ್ಯಾನಿಟೈಜರ್ ವಿತರಕವಾಗಿದ್ದು, ನಿಮ್ಮನ್ನು ರೋಗಾಣುಗಳಿಂದ ರಕ್ಷಿಸುತ್ತದೆ. ಎಸ್.ಬ್ಯಾಂಡ್ನ ವಿಶಿಷ್ಟ ಕಾರ್ಯವೆಂದರೆ ಸ್ಯಾನಿಟೈಜರನ್ನು ಬ್ಯಾಂಡ್ಗೆ ಜೋಡಿಸಲಾಗಿದೆ, ಹೀಗಾಗಿ ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಪ್ರಶ್ನೆ ಬರುವುದಿಲ್ಲವಾದ್ದರಿಂದ ಇದು ಸೋಂಕುಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಇದು ಸಾಗಿಸಲು, ಪುನಃ ತುಂಬಿಸಲು ಮತ್ತು ಬಳಸಲು ಸುಲಭವಾಗಿದೆ. ಕಡಿಮೆ ತೂಕ, ಬಲವಾದ ಮತ್ತು ಆರಾಮದಾಯಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಕೈಗಳನ್ನು ಸೂಕ್ಷ್ಮಾಣುಗಳಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಬ್ಯಾಂಡ್ನಿಂದ ಕೊಕ್ಕೆಗೆ ಎಸ್.ಬ್ಯಾಂಡ್ನ್ನು ಸುಲಭವಾಗಿ ತೆಗೆಯಬಹುದು. ಕೋವಿಡ್-19 ಕಾರಣದಿಂದ ಜಗತ್ತು ಜರ್ಝರಿತವಾಗಿದೆ. ನೈರ್ಮಲ್ಯ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಕೈಕುಲುಕುವುದು, ಮೆಟ್ಟಿಲುಗಳನ್ನು ಏರುವುದು ಅಥವಾ ವಸ್ತುಗಳನ್ನು ಖರೀದಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ವಸ್ತುಗಳನ್ನು ಸ್ಪಶರ್ಿಸುವುದು ಸಾಮಾನ್ಯ. ಆದ್ದರಿಂದ, ಸೂಕ್ಷ್ಮಾಣು ಮುಕ್ತವಾಗಿರಲು ಎಸ್.ಬ್ಯಾಂಡ್ ನಿಮಗೆ ಸಹಾಯ ಮಾಡುತ್ತದೆ. 2020ರ ಆಗಸ್ಟ್ 2ರಂದು ಎಸ್.ಬ್ಯಾಂಡ್ ಅನ್ನು ಪ್ರಾರಂಭಿಸಲಾಯಿತು.
ಪ್ರಶ್ನೆ: ಎಸ್.ಬ್ಯಾಂಡ್ನ ಬೆಲೆ ಎಷ್ಟು ಮತ್ತು ಅದನ್ನು ಎಲ್ಲಿ ಖರೀದಿಸಬಹುದು ?
ಎಸ್.ಸ್ಯಾಂಡ್ ಒಂದರ ಬೆಲೆ 399 ರೂ. ಮತ್ತು ಪ್ರಸ್ತುತ ನಮ್ಮ ವೆಬ್ಸೈಟ್ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಇದನ್ನು ಅಮೆಜಾನ್ ಮತ್ತು ಫ್ಲಿಪ್ಕಾಟರ್್ನಲ್ಲಿ ಬಿಡುಗಡೆ ಮಾಡಲು ನಾವು ಎದುರು ನೋಡುತ್ತಿದ್ದೇವೆ.
ಪ್ರಶ್ನೆ: ಸದ್ಯ ನಿಮ್ಮ ಮಾರಾಟ ಹೇಗಿದೆ ?
ಉತ್ಪನ್ನವನ್ನು ಮಾರ್ಕೆಟಿಂಗ್ ಮಾಡದೇ ಕೆಲವೇ ದಿನಗಳಲ್ಲಿ 3,000 ಆರ್ಡರ್ ಸ್ವೀಕರಿಸಿದ್ದೇವೆ. ಅಲ್ಲದೆ, ಉತ್ಪನ್ನವನ್ನು ಭಾರತದಾದ್ಯಂತ ಪೊರೈಸುತ್ತಿದ್ದು, ವಿಶ್ವಾದ್ಯಂತ ಮಾರಾಟ ಮಾಡಲು ಎದುರು ನೋಡುತ್ತಿದ್ದೇವೆ.
ಪ್ರಶ್ನೆ: ನಿಮ್ಮ ಉತ್ಪನ್ನವನ್ನು ಯಾವ ವಯಸ್ಸಿನ ಜನ ಬಳಸಬಹುದು ?
ಒಂಭತ್ತು ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ನಮ್ಮ ಉತ್ಪನ್ನವನ್ನು ಬಳಸಬಹುದು. ಉತ್ಪನ್ನವನ್ನು ಮಹಿಳೆಯರು ಮತ್ತು ಪುರುಷರಿಗಾಗಿ ವಿನ್ಯಾಸಗೊಳಿಸಲಾಗಿದೆ. ಕೈ ಸುತ್ತಲೂ ಕಟ್ಟುಬಹುದು, ಸೊಂಟದ ಪಟ್ಟಿಗೆ ಜೋಡಿಸಬಹುದು. ಹೀಗಾಗಿ ಪ್ರಯಾಣದಲ್ಲಿರುವಾಗ ಬಳಸುವುದು ಸುಲಭ. ಇದಕ್ಕೆ ಯಾವುದೇ ಅನುಮೋದಿತ ಲಿಕ್ವಿಡ್ ಸ್ಯಾನಿಟೈಜರ್ ಅನ್ನು ಭತರ್ಿ ಮಾಡಿ ಅಪಾಯವಿಲ್ಲದೇ ನಿಮ್ಮ ದಿನಚರಿಯನ್ನು ಆರಂಭಿಸಬಹುದು. ಬಾಟಲಿ ಸ್ಯಾನಿಟೈಜರ್ಗಾಗಿ ಇನ್ನು ಮುಂದೆ ಪಾಕೆಟ್ಸ್ ಅಥವಾ ಬ್ಯಾಗ್ಗಳನ್ನು ಹುಡುಕುವ ಅಗತ್ಯವಿಲ್ಲ.
ಪ್ರಶ್ನೆ: ಈ ಆಲೋಚನೆೆ ನಿಮಗೆ ಹೇಗೆ ಬಂತು?
ಲಾಕ್ಡೌನ್ ಸಮಯದಲ್ಲಿ ಸ್ನೇಹಿತನನ್ನು ಕರೆತರಲು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆವು. ಕಾರಿನಲ್ಲಿ ಸ್ಯಾನಿಟೈಜರ್ ಬಾಟಲಿಯನ್ನು ಹಂಚಿಕೊಳ್ಳುತ್ತಿದ್ದೆವು. ಹೀಗೆ ಹಂಚಿಕೊಳ್ಳುವುದು ಅಸುರಕ್ಷಿತವೆಂಬುದು ಅರಿವಾಯಿತು. ಅಶುದ್ಧವಾಗಿರುವ ಮೇಲ್ಮೈಗಳನ್ನು ಸ್ಪಶರ್ಿಸುತ್ತಿದ್ದೇನೆ. ಸೋಂಕು ನಿವಾರಿಸುವ ಸ್ಯಾನಿಟೈಜರ್ದಿಂದಲೇ ವೈರಸ್ ಹರಡಬಹುದು ಎಂಬುದು ಮನವರಿಕೆಯಾಯಿತು. ಆಗಲೇ ರಿಸ್ಟ್ಬ್ಯಾಂಡ್ ಮಾದರಿಯ ಸ್ಯಾನಿಟೈಜರ್ ವಿತರಕ ತಯಾರಿಸುವ ಆಲೋಚನೆಯೊಂದಿಗೆ ಮತ್ತು ಉತ್ಪನ್ನದ ಮೂಲಮಾದರಿಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆವು. ಪ್ರಯೋಗದ ಆರಂಭಿಕ ದಿನಗಳಲ್ಲಿ ನಮ್ಮ ಕೆಲಸ ನಮಗೆ ತೃಪ್ತಿ ನೀಡಲಿಲ್ಲ. ಆದರೆ ಹಲವಾರು ಪ್ರಯೋಗಗಳ ನಂತರ ನಮ್ಮ ಆಲೋಚನೆಯಂತೆ ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ಸಾಧ್ಯವಾಯಿತು. ಅದು ಸಮಯದ ಅವಶ್ಯಕತೆ ಎಂದು ಅರಿತುಕೊಂಡೆವು. ಇದರಿಂದ ಜನರನ್ನು ತಲುಪಬೇಕು ಮತ್ತು ಸ್ಯಾನಿಟೈಜರ್ ಬಳಕೆಯನ್ನು ಸರಳೀಕರಿಸಬೇಕೆಂದು ಮನವರಿಕೆ ಮಾಡಿಕೊಂಡೆವು.
ಪ್ರಶ್ನೆ: ಉತ್ಪಾದನೆಯ ಸಮಯದಲ್ಲಿ ನೀವು ಎದುರಿಸಿದ ಅಡೆತಡೆಗಳೇನು?
ಕೊವೀಡ್-19 ಪರಿಸ್ಥಿತಿಯ ಕಾರಣದಿಂದಾಗಿ ಮಾರಾಟಗಾರರೊಂದಿಗೆ ಸಂಪರ್ಕದಲ್ಲಿರಲು ನಮಗೆ ಸಾಧ್ಯವಾಗದ ಕಾರಣ ಉತ್ಪನ್ನವನ್ನು ಅಭಿವೃದ್ಧಿಪಡಿಸುವಾಗ ನಾವು ಹಲವಾರು ಸವಾಲುಗಳನ್ನು ಎದುರಿಸಿದ್ದೇವೆ. ಇದು ಎಸ್.ಬ್ಯಾಂಡ್ ನಿಮರ್ಿಸಲು ಬಹಳ ಅವಶ್ಯಕ ಸಮಯ ಎಂಬುದು ಅರಿವಾಯಿತು. ಆದರೆ ಆ ಸಮಯದಲ್ಲಿ ವಸ್ತುಗಳು ಲಭ್ಯವಿರಲಿಲ್ಲ. ಮೇ ತಿಂಗಳಲ್ಲಿ ಲಾಕ್ಡೌನ್ ನಿಯಮಗಳು ಸ್ವಲ್ಪ ಸಡಿಲಗೊಂಡಿದ್ದರಿಂದ ಉತ್ಪಾದನಾ ಕಾರ್ಯವನ್ನು ಪ್ರಾರಂಭಿಸಲು ಹತ್ತಿರದ ನಗರಗಳಿಗೆ ಪ್ರಯಾಣಿಸಲು ಸಾಧ್ಯವಾಯಿತು. ನಾವು ಎದುರಿಸಿದ ಮತ್ತೊಂದು ಸವಾಲು ಎಂದರೆ ಉತ್ಪನ್ನವನ್ನು ಬಳಕೆದಾರ ಸ್ನೇಹಿ ಮತ್ತು ನಾವು ಯೋಚಿಸಿದಂತೆ ಬಳಸಲು ಸುಲಭವಾಗಿಸುವ ಯಾಂತ್ರಿಕ ವ್ಯವಸ್ಥೆಯನ್ನು ಜಗಳ ಮುಕ್ತವಾಗಿ ಮಾಡುವುದು. ಹಿರಿಯ ನಾಗರಿಕರಿಗೂ ಸಹ. ಉತ್ಪನ್ನದ ತೂಕ, ಬಳಸಿದ ವಸ್ತುಗಳ ಗುಣಮಟ್ಟ ಮತ್ತು ನೈರ್ಮಲ್ಯವನ್ನು ವಿತರಿಸುವ ವಿಧಾನವನ್ನೂ ನಾವು ಪರಿಗಣಿಸಬೇಕಾಗಿತ್ತು. ನಿಖರವಾದ ಸಂಶೋಧನೆ ಮತ್ತು ಗಂಟೆಗಳ ಕಠಿಣ ಪರಿಶ್ರಮದಿಂದ ನಾವು ಬಯಸಿದ ಉತ್ಪನ್ನ ತಯಾರಿಸಲು ಸಾಧ್ಯವಾಯಿತು.
ಪ್ರಶ್ನೆ: ನಿಮ್ಮ ಕಂಪನಿಯ ಸ್ಥಾಪಕರು ಯಾರು ?
ನಾನು (ಆಕಾಶ ಬಿ. ಕಲಾಂಗೆ) ಎಸ್.ಬ್ಯಾಂಡ್ನ್ನು ರಚಿಸಿದ, 'ಸಪ್ಲಾಯಸ್ಸರ' ಸ್ಥಾಪಕ. ಬೆಳಗಾವಿಯ ಭರತೇಶ ಕಾಲೇಜ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ನಿಂದ ಪದವಿ ಪೂರೈಸಿದ್ದೇನೆ. ಹಲವಾರು ಹೆಸರಾಂತ ಇ-ಕಾಮಸ್ರ್ ಮತ್ತು ಉತ್ಪಾದನಾ ಕಂಪನಿಗಳೊಂದಿಗೆ ಕೆಲಸ ಮಾಡಿದ್ದೇನೆ. ಹಿತೇಶ್ ಎಸ್. ಮುದಕಣ್ಣವರ 'ಸಪ್ಲಾಯಸ್ಸರ' ಸಹ-ಸಂಸ್ಥಾಪಕರು. ಅವರು ಬೆಳಗಾವಿ ಗೋಗಟೆ ಕಾಮಸ್ರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದು, ಜವಳಿ ವ್ಯವಹಾರ ನಡೆಸುತ್ತಿದ್ದಾರೆ.
ಪ್ರಶ್ನೆ: ಕೋವಿಡ್-19ನಿಂದಾಗಿ ದೇಶದಲ್ಲಿ ಅನೇಕರು ನಿರುದ್ಯೋಗಿಗಳಾಗಿರುವುದು. ಕೆಲಸ ಹುಡುಕುವಲ್ಲಿ ತೊಂದರೆ ಎದುರಿಸುತ್ತಿರುವ ಯುವಕರಿಗೆ ನೀವು ಯಾವ ಸಲಹೆ ನೀಡಲು ಬಯಸುತ್ತೀರಿ?
ಪ್ರತಿ ಮುಚ್ಚಿದ ಬಾಗಿಲಿನ ಹಿಂದೆ ಒಂದು ಅವಕಾಶ ಇದ್ದೇ ಇರುತ್ತದೆ. ನಮ್ಮ ದೇಶದ ಯುವಕರು ಅಂತಹ ಅವಕಾಶವನ್ನು ಬಳಸಿಕೊಳ್ಳಬೇಕು ಹಾಗೂ ಯಶಸ್ಸಿಗೆ ಶ್ರಮಿಸಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನಮ್ಮ ಜೀವನ ವಿಧಾನವು ಸಕಾರಾತ್ಮಕವಾಗಿರಬೇಕು. ಕಷ್ಟಪಟ್ಟು ದುಡಿದು ಸಕಾರಾತ್ಮಕವಾಗಿದ್ದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
ಪ್ರಶ್ನೆ: ಪ್ರಸ್ತುತ ಕೊವೀಡ್-19 ಪರಿಸ್ಥಿತಿ ನಿಮಗೆ ಏನು ಪಾಠ ಕಲಿಸಿದೆ?
ಈ ಕಷ್ಟದ ಸಮಯದಲ್ಲಿ ನಾನು ಕಲಿತ ಅತಿದೊಡ್ಡ ಪಾಠವೆಂದರೆ, ನಮ್ಮ ಜೀವನ ಹೇಗೆ ಇರಬೇಕು ಎಂಬುದರ ಕುರಿತು ನಾವು ಹಲವಾರು ಯೋಜನೆಗಳನ್ನು ರೂಪಿಸುತ್ತೇವೆ. ಅವುಗಳು ನಾವು ಯೋಚಿಸಿದ ರೀತಿಯಲ್ಲಿ ಕೆಲಸ ಮಾಡದೇ ಇರಬಹುದು. ಜೀವನ ನಮ್ಮ ಮೇಲೆ ಎಸೆಯುವ ಯಾವುದೇ ಸಮಸ್ಯೆ ಎದುರಿಸಲು ನಾವು ಸಿದ್ಧರಾಗಿರಬೇಕು. ಅದರಿಂದ ಉತ್ತಮವಾದದ್ದನ್ನು ಮಾಡಬೇಕು ಎಂಬುದರ ಬಗ್ಗೆ ಅರಿತುಕೊಂಡೆ.