ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 
ಹೃದಯ ವೈಫಲ್ಯ ಕಾಯಿಲೆಯು ದೀರ್ಘಕಾಲಿಕ/ಪ್ರಗತಿಯಾಗುತ್ತ ಹೋಗುವ ಸ್ಥಿತಿಯಾಗಿದ್ದು, ಹೃದಯವನ್ನು ಪಂಪ್ ಮಾದುವುದಕ್ಕೆ ಕಾರಣವಾದ ಸ್ನಾಯುಗಳು ಕೃಶವಾಗುತ್ತವೆ ಅಥವಾ ಕಾಲಾಂತರದಲ್ಲಿ ಗಡುಸಾಗುತ್ತ ಹೋಗುತ್ತವೆ.
ಬೆಂಗಳೂರಿನ ಶ್ರೀ ಜಯದೇವ ಹೃದಯನಾಳೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ಶಾಸ್ತ್ರ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರ ಪ್ರಕಾರ, “ದಕ್ಷಿಣ ಪೂರ್ವ ಏಷಿಯಾದಲ್ಲಿ ಶ್ರೀ ಜಯದೇವ ಹೃದಯನಾಳೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ ಹೃದಯ ಆರೈಕೆಗೆ ಅತಿದೊಡ್ಡ ಆಸ್ಪತ್ರೆ. 2017 ರಲ್ಲಿ, ತೀವ್ರ ಹೃದಯರೋಗ ಘಟಕಕ್ಕೆ ದಾಖಲಾದ ರೋಗಿಗಳ ಪೈಕಿ 2000 ರೋಗಿಗಳು ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. ಇವರ ಪೈಕಿ ಪುರುಷರ ಪ್ರಮಾಣ 65% ಮತ್ತು ಮಹಿಳೆಯರ ಪ್ರಮಾಣ 35%”.
ಈ ಕಾಯಿಲೆಯು ಪ್ರಮುಖವಾದ ಹಾಗೂ ಗಂಭೀರವಾದ ಆರೋಗ್ಯ-ಹಣಕಾಸು ಹೊರೆಯನ್ನು ತರುವಂಥದ್ದು. ಪ್ರತಿವರ್ಷ ಈ ಕಾಯಿಲೆಯ ವಿಶ್ವ ಆರ್ಥಿಕ ಹೊರೆ 108 ಬಿಲಿಯನ್ ಡಾಲರ್. ಇದರಲ್ಲಿ ನೇರ ಹಾಗೂ ಪರೋಕ್ಷ ವೆಚ್ಚಗಳು ಒಳಗೊಂಡಿವೆ. ಮುಂದುವರೆಸುತ್ತಾ ಡಾ. ಸಿ.ಎನ್. ಮಂಜುನಾಥ್ ಹೇಳುತ್ತಾರೆ, “ಮತ್ತೆ ಮತ್ತೆ ಆಸ್ಪತ್ರೆಗೆ ದಾಖಲಾಗುವ ಹೃದಯ ಸಂಬಂಧಿತ ಕಾಯಿಲೆಗಳಲ್ಲಿ ಗೃದಯ ವೈಫಲ್ಯ ಮುಖ್ಯ ಕಾರಣವಾಗಿದೆ. ಇದು ರೋಗಿಗಳಿಗಷ್ಟೇ ನರಳಾಟ ತರುವಂಥದ್ದಲ್ಲ , ಜೊತೆಗೆ ಕುಟುಂಬದ ಆರ್ಥಿಕ ಭಾರವನ್ನೂ ಹೆಚ್ಚಿಸುತ್ತದೆ. ಸಾವಿನ ಪ್ರಮಾಣ ಹೆಚ್ಚಾಗಲು ಇದೂ ಒಂದು ಮುಖ್ಯ ಕಾರಣ”.
ಭಾರತದ ಕಾರ್ಡಿಯೋಲಾಜಿಕಲ್ ಸೊಸೈಟಿಯ ಅಧ್ಯಕ್ಷ ಡಾ. ಕೆ. ಸರತ್ ಚಂದ್ರ ಅವರ ಪ್ರಕಾರ, “ ಭಾರತೀಯ ರೋಗಿಗಳಲ್ಲಿ ಅಧಿಕ ಸಾವುಗಳೊಂದಿಗೆ ಹೃದಯ ವೈಫಲ್ಯವು ಪ್ರಗತಿಯಾಗುವ ಕಾಯಿಲೆಯಾದ್ದರಿಂದ, ಹೃದಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚಿಂತಿಸುವ ಮತ್ತು ಆತಂಕಪಡುವ ಕಾರಣಗಳಿವೆ. ಭಾರತದಲ್ಲಿ ಹೃದಯ ವೈಫಲ್ಯವನ್ನು ಸಾರ್ವಜನಿಕ ಆರೋಗ್ಯ ಆದ್ಯತೆಯಾಗಿ ಗುರುತಿಸುವ ತುರ್ತು ಅವಶ್ಯಕತೆ ಇದೆ. ಇಂದು, ಹೃದಯ ವೈಫಲ್ಯಕ್ಕೆ ಅತ್ಯಾಧುನಿಕ ಚಿಕಿತ್ಸಾ ವಿಕಲ್ಪಗಳು ಲಭ್ಯವಿದೆ. ಜೀವನಶೈಲಿ ಬದಲಾವಣೆ ಕಡ್ಡಾಯ . ಜೊತೆಗೆ ಔಷಧಿಗಳ ಸೇವನೆಯಿಂದ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು, ಜೀವನ ಗುಣಮಟ್ಟ ಸುಧಾರಿಸಬಹುದು ಮತ್ತು ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ.”
ಪ್ರಕಟಿಸಿರುವ ಅಧ್ಯಯನದಲ್ಲಿ, ಹೃದಯ ವೈಫಲ್ಯಕ್ಕೆ ಚಿಕಿತ್ಸೆ ನೀಡುವಲ್ಲಿ ಕಂಡುಹಿಡಿಯಲಾದ ಅತ್ಯಾಧುನಿಕ ಚಿಕಿತ್ಸೆಯ ವಿಕಲ್ಪಗಳು , 8 ತಿಂಗಳ ಅವಧಿಯಲ್ಲಿ ಹೃದಯ ವೈಫಲ್ಯವಿರುವ ರೋಗಿಗಳಲ್ಲಿ ದೈಹಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ 10 ರಲ್ಲಿ 7 ಜನರಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಅಧ್ಯಯನ ಮುನ್ನಡೆಸಿದ ಮೂರು ವರ್ಷಗಳ ಅನುಸರಣಾ ಅವಧಿಯಲ್ಲಿ ರೋಗಿಯ ಜೀವನ ಗುಣಮದಲ್ಲಿ ಸುಧಾರಣೆ ಮುಂದುವರೆದಿತ್ತು.
ದೈನಂದಿನ ಚಟುವಟಿಕೆಗಳ ಚಿಕಿತ್ಸೆಯ ಧನಾತ್ಮಕ ಫಲಿತಾಂಶ ವನ್ನು ವಿಶ್ಲೇಷಣೆಯು ಸಂಶೋಧಿಸಿದ್ದು , ಹೃದಯ ವೈಫಲ್ಯವಿರುವ ರೋಗಿಗಳ ಜೀವನ ಗುಣಮಟ್ಟ ಕೊನೆಗೂ ಸುಧಾರಣೆ ಕಂಡಿತು ಎನ್ನುತ್ತದೆ.