ಜನಪದ ಸಾಹಿತ್ಯ ಬೆಳೆದಷ್ಟು ಸಾಹಿತ್ಯ ಬೆಳೆಯುತ್ತದೆ: ಶೈಲಜಾ ಭಿಂಗೆ


ಶ್ರೀಮತಿ ಶೈಲಜಾ ಜಯಪ್ರಕಾಶ ಭಿಂಗೆ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಇವರು ಬೆಳಗಾವಿಯಲ್ಲಿ ಶಿಕ್ಷಣ ಪಡೆದು ಖ.ಐ.ಖ ಛಿಠಟಟಜರಜ ನಿಂದ ಃ.ಛಿ ಪದವಿ ಪಡೆದಿದ್ದಾರೆ.

1980ರಿಂದ ಸಾಮಾಜಿಕ, ಶೈಕ್ಷಣಿಕ, ಸಹಕಾರ, ಆಧ್ಯಾತ್ಮಿಕ, ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.

 ಸಹಕಾರ ಕ್ಷೇತ್ರದಲ್ಲಿ ಇಡೀ ಕನರ್ಾಟಕದಲ್ಲಿಯೇ ಪ್ರಥಮ ಮಹಿಳಾ ನಿದರ್ೇಶಕಿಯಾಗಿ ಶ್ರೀ ಬಸವೇಶ್ವರ ಕೊ.ಆಪ್.ಬ್ಯಾಂಕಿಗೆ ಆಯ್ಕೆಯಾದರು. ನಂತರ 1994ರಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದರು. ತಮ್ಮ ಅಧಿಕಾರ ಅವಧಿಯಲ್ಲಿ 'ಭಾಗ್ಯಜ್ಯೋತಿ ಮಹಿಳಾ ಸಾಲ' ಯೋಜನೆ ರೂಪಿಸಿ ಅನೇಕ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಆಥರ್ಿಕವಾಗಿ ಸಬಲಗೊಳಿಸಿದ್ದಾರೆ.

1995ರಲ್ಲಿ 'ಲಿಂಗಾಯತ ಮಹಿಳಾ ಸಮಾಜ'ವನ್ನು ಹುಟ್ಟಿಹಾಕಿ ಅನೇಕ ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. 600 ಜನ ಸದಸ್ಯತ್ವ ಹೊಂದಿದ ದೊಡ್ಡ ಸಮಾಜವನ್ನು 24 ವರುಷಗಳವರೆಗೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಲಯನ್ಸ ಕ್ಲಬ್ ಆಪ್ ಸಹೇಲಿಯ ಸಂಸ್ಥಾಪಕರಾದ ಇವರು ದೀನದಲಿತರಿಗೆ, ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ ಅಧ್ಯಕ್ಷೆ ಎಂದು ಪುರಸ್ಕಾರ ಪಡೆದಿದ್ದಾರೆ.

ಅಂಧಮಕ್ಕಳ ಶಾಲೆ, ಅನಾಥ ಮಕ್ಕಳ ಆಶ್ರಮ, ಕಾರ್ಯನಿರತ ಮಹಿಳಾ ವಸತಿ ನಿಲಯ ಲಿಂಗರಾಜ ಕಾಲೇಜಿನ ಜಥಜಛಿಣಣತಜ ಟಜಟಛಜಡಿ  ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾ ಸಭೆಯ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ವಧುವರರ ಅನ್ವೇಷಣ ಕೇಂದ್ರದ ನಿದರ್ೇಶಕರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.

ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಕನರ್ಾಟಕ ಭಗಿನಿ ಮಂಡಳ, ಖಠಣಟಿಜ ಣಚಿಛಟಜ, ಡಿಠಣಚಿಡಿಥಿ ಛಿಟಣಛ,  ಲಿಂಗಾಯತ ಮಹಿಳಾ ಸಮಾಜ ಇವರನ್ನು ಗೌರವಿಸಿದ್ದಾರೆ. ಸಮಾಜಕಲ್ಯಾಣ ಇಲಾಖೆ ಬೆಂಗಳೂರು ಇವರಿಂದ " ಉತ್ತಮ ಸಮಾಜಸೇವಕಿ" ಎಂಬ ಪ್ರಶಸ್ತಿ ಲಭಿಸಿದೆ. ಸಹಕಾರ ಫೆಡರೇಶನ್ ಬೆಂಗಳೂರು " ಅತ್ಯುತ್ತಮ ಸಹಕಾರ ಪ್ರಶಸ್ತಿ" ಕೊಟ್ಟು ಗೌರವಿಸಿದ್ದಾರೆ. " ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ" ಮತ್ತೆ ಈಗ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ " ಟಜಿಜ ಣಟಜ ಚಿಛಿಜತಜಟಜಟಿಣ"  ಜೀವಮಾನ ಪ್ರಶಸ್ತಿ" ಇವರ ಸಾಧನೆಗೆ ಸಂದ ಗೌರವವಾಗಿದೆ.

ಉತ್ತಮ ವಾಗ್ಮಿ, ನಿರೂಪಕಿ, ಗಾಯಕಿ, ಪಾಕಪ್ರವೀಣೆಯಾದ ಇವರು ಕನ್ನಡ ಮರಾಠಿ  ನಾಟಕಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದಾರೆ. ಅನೇಕ ಮರಾಠಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ ಇವರು ಲೋಕದರ್ಶದ ಸಾಪ್ತಾಹಿಕ ಅಂಕಣ ಬರಹಗಾತರ್ಿಯಾಗಿದ್ದಾರೆ ಒಟ್ಟಿನಲ್ಲಿ ಹೆಣ್ಣುಮಕ್ಕಳ ಅಸ್ತಿತ್ವಕ್ಕಾಗಿ, ಉನ್ನತಿಗಾಗಿ ಹಗಲಿರುಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.

* ನಿಮ್ಮ ಬಾಲ್ಯ ಹೇಗಿತ್ತು? 

- ನಾನು ಚಿಕ್ಕವಳು ಇದ್ದಾಗ ನನ್ನ ಬಾಲ್ಯ ಬಹಳ ಚನ್ನಾಗಿತ್ತು. ಸುಂದರವಾಗಿತ್ತು. ಶ್ರೀಮಂತ ಮನೆತನದಲ್ಲಿ ಜನಸಿದ್ದು ನಮ್ಮ ತಂದೆ ಕೋಟ್ಯಾಧಿಶರಾಗಿದ್ದರು ನಮಗೆ ಅವರು ಕಾಯಕದ ಮಹತ್ವ ಚನ್ನಾಗೆ ಕಲಿಸಿದರು. ಅವರ ಮಾತಿನಲ್ಲಿ ಹೇಳಿದರೆ, `ಕಾಯಕವೇ ಕೈಲಾಸ'. ಮನೆಯಲ್ಲಿ ಎಲ್ಲ ಕೆಲಸವನ್ನು ನಾವೇ ಮಾಡುತ್ತಿದ್ದೆವು. ನಮ್ಮ ಬಾಲ್ಯವನ್ನು ಆಟ ಮತ್ತು ಕೆಲಸದಲ್ಲಿ ಸಂತೊಷದಿಂದ ಕಳೆದೆವು. 

* ನಿಮ್ಮ ಶಿಕ್ಷಣವನ್ನು ಎಲ್ಲಿ ಮಾಡಿದ್ದಿರಿ?

- ನಾನು ವನಿತಾ ವಿದ್ಯಾಲಯದಲ್ಲಿ ನನ್ನ ಮಾಧ್ಯಮಿಕ  ಶಿಕ್ಷಣವನ್ನು ಪಡೆದಿದ್ದೆನೆ. ಅನಂತರ ಆರ್. ಎಲ್. ಎಸ್. ಕಾಲೇಜಿನಲ್ಲಿ 1981 ನಲ್ಲಿ ನಾನು ಬಿಎಸ್ಸಿ ಪದವಿ ಪಡೆದೆ. 

* ನಿಮ್ಮ ವೃವೃತ್ತಿಪರ ಜೀವನದ ಬಗ್ಗೆ ಹೇಳಿ?

- 1981ರಿಂದಾ ನಾನು ಸಾಮಾಜಿಕ ಕ್ಷೇತ್ರದಲ್ಲಿ ಲಯನ್ಕ್ಲಬ್ ಮೂಲಕ ಕಾಲನ್ನು ಇಟ್ಟೆ. 1984ರಲ್ಲಿ ಸಕರ್ಾರ ಒಂದು ಕಾಯಿದೆ ಹೊರಡಿಸಿತು ಅದು ಎಲ್ಲಾ ಸಕರ್ಾರಿ ಬ್ಯಾಂಕ್ನಲ್ಲಿ ಮಹಿಳೆರಿಗೆ ಸಿಟು ಕಾಯ್ದಿರಿಸುವುದ್ದಾಗಿತ್ತು. ಆ ವೇಳೆ ಬಸವೇಶ್ವವರ ಬ್ಯಾಂಕ್ನಲ್ಲಿ ನನ್ನನ್ನು ಪ್ರಥಮ ಮಹಿಳಾ ನಿದರ್ೇಶಕಿಯಾಗಿ ನೇಮಕಮಾಡಿದರು. 

* ಪ್ರಥಮ ಮಹಿಳಾ ನಿದರ್ೇಶಕಿಯಾಗಿ ನಿಮ್ಮ ಅನುಭವ ಏನು?

- ಬ್ಯಾಂಕಿನ ಎಲ್ಲಾ ಇಲಾಖೆಗಳ ಬಗ್ಗೆ ಮಾಹಿತಿಯನ್ನು ಕಲಿತೆ ಮತ್ತು ಬೇರೆ ಬೇರೆ ಎಲ್ಲಾ ನಿದರ್ೇಶಕರು ಬಹಳ ಸಹಕಾರ ನೀಡಿದರು ಆದ್ದರಿಂದ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲಾ ಎಲ್ಲವನ್ನು ಕಲಿತೆ. ನಾವು ಯಾವಾಗ ಒಂದು ಸ್ಥಾನಕ್ಕೆ ಬರತ್ತಿವಿ ಆವಾಗ ನಾವು ಆ ಸ್ಥಾನಕ್ಕೆ ಮಹತ್ವವನ್ನು ಕೊಡಬೇಕು. ಒಬ್ಬ ನಿದರ್ೇಶಕಿಯಾಗಿ ಏನು ಮಾಡಬೇಕಿತ್ತೋ ಆ ಎಲ್ಲ ಕಾರ್ಯವನ್ನು ಮಾಡಿದೆ. ಕೆಲವು ಆಡಳಿತ ವಿಭಾಗದಲ್ಲಿ ಬಹಳ ಸುಧಾರಣೆ ಮಾಡಿದೆ, ಸಮಯ ಪಾಲನೆ ಹಾಗೂ ನೇಮಕಾತಿ ಪರೀಕ್ಷೆಗಳನ್ನು ಮತ್ತು ತರಬೇತಿಗಳನ್ನು ಬಸವೇಶ್ವರ ಬ್ಯಾಂಕ್ನಲ್ಲಿ ನಾನು ಆಯೋಜಿಸಿದೆ. ಇದಲ್ಲದೆ ನಾನು 6 ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಿದೆ. ಮಹಿಳೆಯರಿಗಾಗಿ ಏನಾದರು ಮಾಡಬೇಕು ಅಂತ ನಾನು ಭಾಗ್ಯಜ್ಯೋತಿ ಮಹಿಳಾ ಸಾಲ ಯೋಜನೆ ಅನ್ವಯ ಸುಮಾರ 300 ಮಹಿಳೆಯರಿಗೆ ಕಾಟೇಜಉದ್ಯಮ ಮತ್ತು ಹಲವಾರು ಉದ್ಯಮ ಮಾಡಲು ಕಡಿಮೆ ಬಡ್ಡಿಗೆ ಸಾಲ ನೀಡುವ ವ್ಯವಸ್ಥೆ ಮಾಡಿದೆ. 

* ನಿಮ್ಮಗೆ ಸಾಹಿತ್ಯ ಕ್ಷೇತ್ರದಲ್ಲಿ ಹೇಗೆ ಆಸಕ್ತಿ ಹುಟ್ಟಿತು?

- ನನಗೆ ಓದುವ ಬರೆಯುವ ಹವ್ಯಾಸ ಬಹಳ ಇತ್ತು. 2005ರಲ್ಲಿ `ಭ್ರಷ್ಟಾಚಾರ' ಬಗ್ಗೆ ಒಂದು ಲೇಖನವನ್ನು ಬರದಿದೆ. ಆಗಿನಿಂದ ನಾನು ಲೇಖನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದೆನೆ ಅದು ಈಗಲು ರೂಢಿಯಲಿದೆ.

* ನಿಮ್ಮ ಪ್ರಕಾರ ಸಾಹಿತ್ಯ ಎಂದರೆ ಏನು?

- ಸಾಹಿತ್ಯದಲ್ಲಿ ಎಲ್ಲರಿಗೂ ಆಸಕ್ತಿ ಇರುವುದಿಲ್ಲಾ. ಸಾಹಿತ್ಯ ಬೆಳೆಯಬೇಕು. ಸಾಹಿತ್ಯ ಬೆಳೆಯಬೇಕಾಂದರೆ ಜನರು ಹೆಚ್ಚೆಚ್ಚು ಪುಸ್ತಕಗಳನ್ನು ಓದಬೇಕು ಓದುವುದರಿಂದ ನಮ್ಮ ಜ್ಞಾನ ಕೂಡ ಹೆಚ್ಚಾಗುತ್ತದೆ. ನಾನು ಜನಪದ ಸಾಹಿತ್ಯಕ್ಕೆ  ಹೆಚ್ಚು ಒತ್ತುಕೊಡುತ್ತೆನೆ. ಜನಪದ ಸಾಹಿತ್ಯವನ್ನು ಬೆಳಸಿದಷ್ಟು ನಮ್ಮ ಸಾಹಿತ್ಯವು ಬೆಳೆಯುತ್ತದೆ. ನಮ್ಮ ಸಂಸ್ಕೃತಿಯನ್ನು ನಾವೇ ಬೆಳೆಸಬೇಕು. 

* ನಿಮ್ಮ ಸಾಮಾಜಿಕ ಕಾರ್ಯದ ಬಗ್ಗೆ ನಮಗೆ ಹೇಳಿ?

- ನಾನು ಅಂಧ ಮಕ್ಕಳಿಗೆ ಹಾಗೂ ಅನಾಥಶ್ರಮದ ಮಕ್ಕಳಿಗೆ ಸಹಾಯ ಮಾಡಿದ್ದೆನೆ. ನನ್ನ ಪ್ರಕಾರ ಸಮಾಜ ಸೇವೆ ಮಾಡುವಾಗ ನಾವು ಯಾವುದೇ ಪ್ರಸಿದ್ಧಿಗಾಗಲಿ ಅಂತವಾ ಹೆಸರಿಗಾಗಲಿ ಸಹಾಯ ಮಾಡುವುದರ ಹಿಂದೆ ಹೋಗಬಾರದು. ನಾವು ಪ್ರಾಮಾಣಿಕ ಹಾಗೂ ನಿಸ್ವಾರ್ಥದಿಂದ ಸೇವೆ ಮಾಡಬೇಕು ಮತ್ತೆ ಯಾರಿಗೆ ನಮ್ಮಿಂದ ಸಹಾಯದ ಅಗತ್ಯವಿದೆಯೋ ಅವರಿಗೆ ಸಹಾಯ ಮಾಡಬೇಕು.

* ಮಹಿಳೆರಿಗೆ ನಿಮ್ಮ ಸಲಹೆ ಏನು?

- ನಾನು ಲಿಂಗಾಯತ ಮಹಿಳಾ ಸಮಾಜ ಪ್ರಾರಂಭಿಸಿದ ಕಾರಣ ಗೃಹಿಣಿಯರಿಗೆ ಒಂದು ವೇದಿಕೆ ಮತ್ತು ಧ್ವನಿ ನೀಡಲು ಈ ಸಮಾಜವನ್ನು ಮಹಿಳೆಯರಿಗೆ ನೀಡಿದ್ದೆನೆ. ಅವರು ಹತ್ತಿಕ್ಕಿಟ್ಟ ಅವರ ಪ್ರತಿಭೆಯನ್ನು ಹೊರಗೆ ತರಲು ಅವಕಾಶ ಮಾಡಿದ್ದೆನೆ. ಮುಖ್ಯವಾಗಿ ಎಂದರೆ ಮಹಿಳೆಯರು ಹೊರಗೆ ಬರುವುದರಿಂದ ಅವರ ಆತ್ಮವಿಶ್ವಾಸ ಬೆಳೆಯುತ್ತೆ ಮತ್ತು ಮಹಿಳೆಯರು ತಮ್ಮದೆ ಆದ ಒಂದು ಗುರುತು ಹಾಗೂ ಗೌರವವನ್ನು ಬೆಳಸಿಕೊಳ್ಳಬಹುದು.