ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
-ಗುಂಡೇನಟ್ಟಿ ಮಧುಕರ
ಪತ್ರಕರ್ತರು, ಲೇಖಕರು
ಸಹೋದರಿ ಸುಧಾ ಸರನೋಬತ್ ಹಿರಿಯ ನಗೆಬರೆಹಗಾರರಲ್ಲೊಬ್ಬರು. ಸುಮಾರು ಐದು ದಶಕಗಳಿಂದ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಲೇಖಕಿ ಸುಧಾ ಸರನೋಬತ್ ಅವರ ಬರಹಗಳು ಸುಧಾ, ತರಂಗ, ಕರ್ಮವೀರ, ತುಷಾರ, ಮಯೂರ ಹೀಗೆ ಎಲ್ಲ ರಾಜ್ಯಮಟ್ಟದ ಪತ್ರಿಕೆ, ದೀಪಾವಳಿ ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ. ನಗೆಬರೆಹಗಳತ್ತಲೇ ಹೆಚ್ಚಿನ ಒಲವನ್ನು ಹೊಂದಿರುವ ಇವರ ಸುಪುತ್ರಿ ಆರತಿ ಘಟಿಗಾರ ದುಬೈದಲ್ಲಿದ್ದುಕೊಂಡು ಕನ್ನಡ ಪ್ರೀತಿ ಮೆರೆಯುತ್ತಿರುವ ಚಿರಪರಿತ ನಗೆಬರೆಹಗಾತರ್ಿ ಹಾಗೂ ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಮನಗೆದ್ದಿರುವ ಹಾಡುಗಾತರ್ಿ ಸುಪುತ್ರಿ ಅಂಜಲಿ ಹಳಿಯಾಳ ಇವರ ಇನ್ನೋರ್ವ ಸುಪುತ್ರಿ. ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆ ಇವರ ಸಹೋದರಿ ಹೀಗೆ ಇವರ ಕುಟುಂಬವೆಂದರೇನೆ ಒಂದು ಸಾಂಸ್ಕೃತಿಕ ಲೋಕ. ಇನ್ನೊಂದು ವಿಶೇಷವೆಂದರೆ ಮೂಲತಃ ಬೆಳಗಾವಿಯವರೇ ಆದ ಸುಧಾ ಅವರು ಬೆಂಗಳೂರಿಗೆ ಹೋಗಿ ನಾಲ್ಕು ವರ್ಷಗಳ ಮೇಲಾದರೂ ಉತ್ತರ ಕನರ್ಾಟಕದ ದೇಸಿಭಾಷೆ ಇವರ ನಾಲಿಗೆಯಿಂದ ಅಳಿಸಿಲ್ಲ. ಶ್ರೀಮತಿ ಸುಧಾ ಸರಣೋಬತ ಅವರ 'ಚಿನ್ನದಂತಹ ಗಂಡ' ನಗೆಬರೆಹಗಳ ಸಂಕಲನದ ದ್ವಿತೀಯ ಮುದ್ರಣವಾಗಿ ಬೆಂಗಳೂರಿನ ತೇಜು ಪಬ್ಲಿಕೇಶನ್ಸ್ದವರು ಹೊರತಂದಿದ್ದಾರೆ.
ಸುಧಾ ಸರನೋಬತ್ ಅವರ 'ಚಿನ್ನದಂಥ ಗಂಡ' ನಗೆಬರೆಹಗಳ ಸಂಕಲನದಲ್ಲಿ ಒಟ್ಟು ಹತ್ತೊಂಬತ್ತು ನಗೆಬರೆಹಗಳಿವೆ. ಮತ್ತೊಂದು ಲೇಖನ ಸೇರ್ಪಡೆ ಮಾಡಿ ದ್ವಿದಶ ಲೇಖನಗಳ ಸಂಕಲನವನ್ನಾಗಿ ಪೂರ್ಣಗೊಳಿಸುವುದು ಅವರಿಗೆ ಕಷ್ಟದ ಕಾರ್ಯವೇನೂ ಅಲ್ಲ. ಇಲ್ಲಿ ಹತ್ತೊಂಬತ್ತೇ ಲೇಖನಗಳು ಇರುವುದು "ಹತ್ತೊಂಬತ್ತು" ಸುಧಾರವರ ಲಕ್ಕಿ ನಂಬರ ಇರಬಹುದೆನೋ ಎಂದು ಭಾವಿಸಿದೆ. ಇರಲಿ, ಇದರಲ್ಲಿ ಬರುವ ಲೇಖನಗಳು ವೈವಿಧ್ಯತೆಯನ್ನು ಹೊಂದಿದ್ದು. ಲೇಖಕಿ ಸುಧಾ ಸರನೋಬತ ಅವರು ತಮ್ಮ ಲೇಖನಗಳಲ್ಲಿ ಪತ್ನಿಯಾಗಿ ಕಾಣಸಿಕೊಳ್ಳದೇ ಪತಿಯಾಗಿ ಕಾಣಿಸಿಕೊಂಡು ತುಂಬ ನೈಜವಾದ ಸಂಭಾಷಣೆಯಿಂದ ಓದುಗರಿಗೆ ಕಚಗುಳಿಯನ್ನಿಟ್ಟಿದ್ದಾರೆ.
ಕೃತಿಯ ಶಿಷರ್ಿಕೆಯನ್ನು ಹೊಂದಿರುವ 'ಚಿನ್ನದಂಥ ಗಂಡ' ನಗೆಬರೆಹದಲ್ಲಿ ಲೇಖಕಿ ಸುಧಾ, ಚಿನ್ನದ ಕುರಿತಂತೆ ಮಹಿಳೆಯರಲ್ಲಿರುವ ಮೋಹವನ್ನು ಬಿಡಿಸುವುದರೊಂದಿಗೆ ಪತಿ ಚಿನ್ನದಂಥ ಗಂಡನಾದ ಬಗೆ ಓದುಗರನ್ನು ರಂಜಿಸುತ್ತದೆ. ಅಲ್ಲದೇ ಎಲ್ಲ ಸತಿವೃತ(!) ಪತಿಬಳಗ ಈ ಲೇಖನವನ್ನೋದಿದಲ್ಲಿ ತಾವೂ ಚಿನ್ನದಂಥ 'ಗಂಡ'ರಾಗುವ ದಾರಿಯನ್ನ ಕಂಡುಕೊಳ್ಳಬಹುದು! ಇದರಲ್ಲಿ ಬರುವ ಇನ್ನೊಂದು ನಗೆಬರೆಹ 'ಪಾಂಡಪ್ಪನ ಪ್ರಸಂಗಗಳು' ಇಂಗ್ಲೀಷ ಬಾರದ ಪಾಂಡಪ್ಪ ಇಂಗ್ಲೀಷ ಮಾತನಾಡುತ್ತ ಚೀಫ್ ಮಿನಿಸ್ಟರ್ನ್ನು ಚೀಪ್ ಮಿನಸ್ಟರ್ ಅಂತಲೂ, ಬೈಪಾಸ್ ಸರ್ಜರಿಯನ್ನು ಟೈಮ್ಪಾಸ್ ಸರ್ಜರಿ ಹೀಗೇ ಪಾಂಡಪ್ಪನ ಕಂಗ್ಲೀಷ, ಓದುಗನ ಮುಖದಲ್ಲಿ ನಗೆಯರಳಿಸುವದರಲ್ಲಿ ಯಶಸ್ವಿಯಾಗಿದೆ. ಮಡದಿ ಪ್ರೀತಿ ಪಡೆಯಲು ಇಲ್ಲದ ಬಿ.ಪಿ.ಯನ್ನು ತಂದುಕೊಂಡ ಪತಿರಾಯನ ಫಜೀತಿಯನ್ನು 'ಮಾದಮ್ಮನ ಮೋಡಿ'ಯಲ್ಲಿ ಕಾಣಬಹುದಾಗಿದೆ. 'ಕೇಳಿದಿರಾ?' ನಗೆಬರೆಹದಲ್ಲಿ ರಾಮರಾಜ್ಯದ ಕನಸನ್ನು ಕಂಡರೆ 'ಹಗರಣದ ಹಗರಣ' ದಲ್ಲಿ ಹಗರಣ ಕುರಿತಾದ ತಂದೆ ಹಾಗೂ ಮುಗ್ಧ ಮಗನ ನಡುವಿನ ಸಂಭಾಷಣೆ. ಇಂದು ನಡೆಯುತ್ತಿರುವ ಹಗರಣಗಳ ಕುರಿತಂತೆ ತಮ್ಮ ಲಘುವಾದ ಶೈಲಿಯಲ್ಲಿಯೇ ಚಾಟಿಯೇಟು ನೀಡಿದ್ದಾರೆ. ಕೃತಿಯಲ್ಲಿ ಬರುವ ಗಂಡ ಹೆಂಡಿರ ಸಂಭಾಷಣೆಯನ್ನು ಓದಿದಾಗ ಮುದ್ದಣ ಮನೋರಮೆ ಸಲ್ಲಾಪದ ಶೈಲಿ ನೆನಪಿಗೆ ಬಾರದೇ ಇರದು.
'ಚಿನ್ನದಂಥ ಗಂಡ' ಸಂಕಲನದಲ್ಲಿ ಬರುವ ಎಲ್ಲ ಲೇಖನಗಳೂ ಓದುಗನನ್ನು ತನ್ನೆಡೆ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹಾಸ್ಯಭಾಷಣಕಾರರು ವಾಟ್ಸಾಪ್ ಹಾಗೂ ಫೇಸಬುಕ್ದಲ್ಲಿ ಬರುವ ಜೋಕುಗಳನ್ನೇ ತಮ್ಮ ಭಾಷಣಗಳಲ್ಲಿ ಬಳಿಸುವುದು ಸವರ್ೆಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಕೃತಿಗಳನ್ನು ಓದಿಕೊಂಡು ತಮ್ಮ ಭಾಷಣಗಳಲ್ಲಿ ಬಳಿಸಿಕೊಂಡದ್ದೇ ಆದಲ್ಲಿ ಭಾಷಣದ ಮೌಲ್ಯ ಹೆಚ್ಚುವುದಲ್ಲದೇ ಹೊಸವಿಷಯಗಳನ್ನು ಕೇಳಗರಿಗೆ ಕೊಟ್ಟಂತಾಗುತ್ತದೆ. ಒಟ್ಟಿನಲ್ಲಿ ಹಾಸ್ಯಪ್ರಿಯರೆಲ್ಲ ಕೊಂಡು ಓದಲೇ ಬೇಕಾದ ಕೃತಿ ಇದಾಗಿದೆ.
ಹಿರಿಯ ಬರೆಹಗಾರ ಅ.ರಾ. ಮಿತ್ರ ಅವರು ಮುನ್ನುಡಿಯಲ್ಲಿ ಲೇಖಕಿ ಸುಧಾ, ಸಮಾಜದ ಜನರ ಸ್ವಭಾವವನ್ನು ಸೊಗಸಾಗಿ ವಿಶ್ಲೇಷಿಸುವ ಗುಣ ಹೊಂದಿದ್ದಾರೆ. ಆದುದರಿಂದ ಉತ್ಪ್ರೇಕ್ಷೆಯ ಶೈಲಿಯ ಮೊರೆಹೊಕ್ಕು ಸುತ್ತಮುತ್ತಣವರ ಲೋಪದೋಷಗಳನ್ನು ಅನಾವರಣ ಮಾಡಿದ್ದಾರೆ ಎಂದು ಲೇಖಕಿಯ ಬರೆವಣಿಗೆ ಕುರಿತಂತೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಇನ್ನು ಪುಸ್ತಕದ ಮುದ್ರಣ, ಪುಟವಿನ್ಯಾಸಗಳ ಕುರಿತು ಹೇಳಬೇಕೆಂದರೆ. ಒಳಪುಟಗಳ ವಿನ್ಯಾಸ ಚೆನ್ನಾಗಿ ಮೂಡಿಬಂದಿದೆ. ಪೇಪರ ಬಳಿಕೆ ಹಾಗೂ ಮುದ್ರಣವೂ ಚೆನ್ನಾಗಿದೆ. ಆದರೆ ಮುಖಪುಟ ಚಿತ್ರ ನಗೆಬರೆಹಗಳ ಸಂಕಲನವೆಂದು ಬಿಂಬಿಸುವುದಿಲ್ಲ. ಮಖಪುಟದ ಚಿತ್ರವೂ ಎದ್ದುಕಾಣುವಂತಹ ವ್ಯಂಗ್ಯಚಿತ್ರವಿರಬೇಕಾಗಿತ್ತು ಅಲ್ಲದೇ 'ಚಿನ್ನದಂಥ ಗಂಡ' ಶಿಷರ್ಿಕೆಯಡಿಯಲ್ಲಿ ನಗೆಬರೆಹಗಳ ಸಂಕಲನವೆಂದಿದ್ದರೆ. ಹಾಸ್ಯಸಾಹಿತ್ಯಪ್ರಿಯ ಓದುಗರನ್ನು ತಕ್ಷಣ ಸೆಳೆಯುತ್ತಿತ್ತೆಂಬುದು ನನ್ನ ವೈಯಕ್ತಿಕ ಅನಿಸಿಕೆ. ಇಂಥದೊಂದು ಒಳ್ಳೆಯ ಹಾಸ್ಯಸಾಹಿತ್ಯವನ್ನು ಓದುಗರಿಗೆ ನೀಡಿರುವ ಬೆಂಗಳೂರಿನ ತೇಜೂ ಪಬ್ಲಿಕೇಶನ್ಸದವರನ್ನು ಅಭಿನಂದಿಸಲೇಬೇಕು. ಸಹೋದರಿ ಸುಧಾ ಸರಣೋಬತರವರಿಂದ ಇನ್ನಷ್ಟು ನಗೆಬರೆಹಗಳ ಸಂಕಲನಗಳು ಹೊರ ಬರಲಿ ಹಾಸ್ಯಪ್ರಿಯರ ಮನ ತಣಿಸಲಿ.