'ರಾಮಚಂದ್ರ ಶೇಡಬಾಳರ ಸಮಗ್ರ ಕಾವ್ಯ ಸಂಗ್ರಹ'

-ಶಿ.ಗು.ಕುಸುಗಲ್ಲ

ಬೆಳಗಾವಿ

ಮನದ ತುಮುಲವನ್ನು, ಬಯಕೆಗಳನ್ನು, ನೋವು ನಲಿವುಗಳನ್ನು, ಜೀವನಾನುಭವನ್ನು, ಧನ್ಯತಾಭಾವವನ್ನು ವ್ಯಕ್ತಿ ತನ್ನಲ್ಲಿ ಹುದುಗಿದ ಶಿಲ್ಪ, ಚಿತ್ರ, ಸಂಗೀತ, ಸಾಹಿತ್ಯ ಮೊದಲಾದ ಸದಭಿರುಚಿಯ ಮೂಲಕ ತನ್ನ ಅಭಿವ್ಯಕ್ತಿಗೊಳಿಸಿ ಸಂತಸಪಡುತ್ತಾನೆ.  'ನಾನು ಬರೆಯುತ್ತೇನೆ, ಸುಮ್ಮನಿರಲಾರದಕ್ಕೆ, ನನ್ನ ವೇದನೆ, ಸಂವೇದನೆಗಳನ್ನು, ಕ್ರಿಯೆ ಪ್ರತಿಕ್ರಿಯೆಗಳನ್ನು ದಾಖಲು ಮಾಡುವದಕ್ಕೆ.'  ಎಂದು ಜಿ.ಎಸ್.ಶಿವರುದ್ರಪ್ಪ ಇವರು ತಮ್ಮ ಕವನದಲ್ಲಿ ಬರೆದ ಸಾಲುಗಳು ಈ ಸಮಯದಲ್ಲಿ ನೆನೆಪಿಗೆ ಬರುತ್ತವೆ. 

ನಾನಿಲ್ಲಿ ಹೇಳಹೊರಟಿರುವದು ಮಕ್ಕಳು, ತಂದೆಯ ಅಭಿಮಾನದ ದ್ಯೋತಕವಾಗಿ ಅಪ್ಪ ಬರೆದಿಟ್ಟ ಕವನಗಳನ್ನು ಸಂಗ್ರಹಿಸಿ ಪ್ರಕಟಿಸಿ ಅವರಿಗೆ ಗೌರವ ಸೂಚಿಸಿದ್ದು ಹೆಮ್ಮೆ ಪಡುವಂಥಹದು.  ತಮ್ಮ ಮನದಾಳದ ಭಾವನೆಗಳನ್ನು ಕವನದ ಮೂಲಕ ತೆರೆದಿಟ್ಟದ್ದನ್ನು, ಪ್ರಕಟಗೊಳ್ಳದ ಆ ಕವನಗಳ ಸಮಗ್ರ ಸಂಕಲನವನ್ನು ಮಕ್ಕಳು  ಹೊರತಂದು ಆ ಹಿರಿಯ ಚೇತನವನ್ನು ಸ್ಮರಿಸಿದ್ದನ್ನು ಇಲ್ಲಿ ಉದ್ಧರಿಸಲು ಅಭಿಮಾನವೆನಿಸುತ್ತದೆ.  'ರಾಮಚಂದ್ರ ಶೇಡಬಾಳರ ಸಮಗ್ರ ಕಾವ್ಯ ಸಂಗ್ರಹ ' 197 ಪುಟಗಳ ಈ ಪುಸ್ತಕವನ್ನು ಬೆಂಗಳೂರಿನ ಇವರ  ಮಗಳಾದ ಶ್ರೀಮತಿ ಮಂಗಳಾ. ಎನ್. ಇನಾಮದಾರ ಮತ್ತು ಇದಕ್ಕೆ ಕೈಜೋಡಿಸಿ ಸಹಕರಿಸಿದ ಪ್ರಕಾಶರಾದ ಮಗ ಅಶೋಕ ಶೇಡಬಾಳಕರ ಇವರು ಪ್ರಸ್ತುತ ಸಂದರ್ಭದಲ್ಲಿ ಅಭಿನಂದನಾರ್ಹರಾಗಿದ್ದಾರೆ.

ಎತ್ತರದ ನಿಲುವಿನ, ಸ್ನೇಹಜೀವಿ ರಾಮಚಂದ್ರಇವರದು ಕವಿಮನಸ್ಸು ನಾಟಕ, ಗಾಯನ, ಶಿಕ್ಷಣ ಇಂತೆಲ್ಲ ಬಹುಮುಖ ವ್ಯಕ್ತಿತ್ವದ ಇವರು 1924 ರಲ್ಲಿ ಬದಾಮಿ ತಾಲೂಕಿನ ಕೇರೂರಿನಲ್ಲಿ ಜನಿಸಿದರು. 1945 ರಲ್ಲಿ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಸೇವೆಗಾಗಿ ಮುಂಬಯಿಯತ್ತ ಮುಖ ಮಾಡಿದರು.  ವೃತ್ತಿಯಲ್ಲಿ ನಿರತರಾದ ಇವರಲ್ಲಿದ್ದ ಪ್ರವೃತ್ತಿಗಳಾದ ಸಾಹಿತ್ಯ, ನಾಟಕ ಮೊದಲಾದ ಕಲಾಪ್ರಕಾರಗಳು ಇವರಲ್ಲಿ ಸದಾ ಜಾಗೃತವಾಗಿದ್ದವು.  ಇವರ ಆಸಕ್ತಿ ಮತ್ತು ಸಾಧನೆಗೆ ಹತ್ತು ಹಲವಾರು ಪ್ರಶಸ್ತಿ ಸನ್ಮಾನಗಳು ಇವರಿಗೆ ಸಂದಿವೆ.    ತಂದೆಯ ದಿವ್ಯ ನೆನಪಿನಲ್ಲಿ 'ನಮ್ಮ ನುಡಿ' ಯಲ್ಲಿ 'ನಮ್ಮ ತಂದೆ ಕವಿತೆ, ಪ್ರಹಸನ, ಪ್ರಬಂಧ, ನಾಟಕ, ಕತೆ, ಅಭಿನಯನ, ಹಾಡುಗಾರಿಕೆ ಎಲ್ಲ ಕಲೆಗಳಲ್ಲಿಯೂ ಪರಿಣಿತರಿದ್ದಂತೇಯೇ ತುಂಬ ಸುಂದರ ಆಗಿದ್ದರು.  ದೇವರು ನೀಡಿದ ಗುಣಗಳಿಲ್ಲ ಎನ್ನುವಂತ್ತಿದ್ದ ಅವರಿಗೆ ಬಾಳಿನಲ್ಲಿ ನಂಜಿನ ನೋವುಗಳನ್ನಿತ್ತು, ಆಯುಷ್ಯ ಕ್ಷೀಣಿಸುವಂತಾಗಿದ್ದು ನಮ್ಮ ದುದರ್ೆವ.  ಕೊನೆಗೆ ಅವರು ಪಟ್ಟ ಶ್ರಮವಾದರೂ ಕನ್ನಡ ಸಾರಸ್ವತ ಲೋಕಕ್ಕೆ ತಿಳಿಯುವಂತಾಗಲಿ, ಅಲ್ಲಿಯೂ ಎಲೆಮರೆಯ ಕಾಯಿಯಾಗಿ ಉಳಿಯುವದು ಬೇಡ ಎನ್ನುವದೇ ನಮ್ಮ ಆಶಯವಾಗಿ ಪ್ರಯತ್ನಪಟ್ಟು ಕೊನೆಗೆ ಸಾಧಿಸಿದ್ದೇವೆ"   ಈ ವಾಕ್ಯಗಳಲ್ಲಿ ಮಕ್ಕಳ ಅಪ್ಪಟ ಪ್ರೀತಿ, ಅಭಿಮಾನ, ಕೃತಜ್ಞತಾ ಭಾವ ತುಂಬಿ ಪ್ರವಹಿಸಿದೆ. 

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರಾದ,  ಅರೋಗ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದ ಸಾಹಿತಿ ಜಿ.ಕೆ.ಕುಲಕಣರ್ಿ ಇವರು  ಬೆನ್ನುಡಿಯಲ್ಲಿ ರಾಮಚಂದ್ರರ ಸಾಧನೆ, ಅಪರೂಪ ವ್ಯಕ್ತಿತ್ವವನ್ನು ಸ್ಪಷ್ಟಗೊಳಿಸಿದ್ದಾರೆ. 'ಕಾಲಗರ್ಭದಲ್ಲಿ ಮರೆಯಾದ ರತ್ನವೊಂದು ಬೆಳಕಿಗೆ ಬರಲು ಸಹರಿಸಿದ ಎಲ್ಲರೂ ಅಭಿನಂದನೆಗೆ ಅರ್ಹರು' ಎಂದು ತಮ್ಮ ಮೆಚ್ಚುಗೆ ಸಲ್ಲಿಸಿದ್ದು ಔಚಿತ್ಯಪೂರ್ಣವಾದುದು.   ಅಶೋಕ ಶೆಡಬಾಳರು ತಂದೆಯವರ ಜೀವನಶೈಲಿ,, ಆದರ್ಶ, ಆಸಕ್ತಿ, ಕ್ರಮಿಸಿದ ಬದುಕಿನ ದಾರಿ ಹೀಗೆಲ್ಲ ಸಮಗ್ರವಾಗಿ ತಮ್ಮ ಅಂತರಾಳದ ಮಾತುಗಳನ್ನು ತೆರೆದಿಟ್ಟು ಅಪ್ಪನನ್ನು ಪೂಜ್ಯಭಾವದಿಂದ ಸ್ಮರಿಸಿದ್ದಾರೆ.  

ವೃತ್ತಿಯಾವುದದರೇನು ವ್ಯಕ್ತಿಯಲ್ಲಿ ಅಡಗಿದ ಪ್ರವೃತ್ತಿ ಎಂದಿಗೂ ಉಡುಗಿಹೋಗುವದಿಲ್ಲ. ಅವಕಾಶ ಸಿಕ್ಕಾಗೆಲ್ಲ ಅದು ಪ್ರಕಾಶಿಸುತ್ತಿರುತ್ತದೆ.  ಒಳ್ಳೆಯ ಪ್ರವೃತ್ತಿ ವೃತ್ತಿಯಲ್ಲಿರುವ ಏಕತಾನತೆಯನ್ನು, ನಿರುತ್ಸಾಹವನ್ನು ಕಳೆದು ಅಲ್ಲಿ ಕ್ರಿಯಾಶೀಲತೆಯನ್ನು ವೃದ್ಧಿಸುತ್ತದೆ. ಸಮಯದ ಸ್ಪೂತರ್ಿಯಲ್ಲಿ ಇವರ ಕವನಗಳು ದಾಂಗುಡಿಯಿರಿಸಿವೆ.  ಶೇಡಬಾಳರ ಸಮಗ್ರ ಸಂಕಲನದ ಮೊದಲನೆಯ ಭಾಗದಲ್ಲಿ ಎಪ್ಪತ್ತೈದು ಕವನಗಳಿವೆ.  ಇವು ಅಧಿಕವಾಗಿ ದೈವಾರಾಧಾನಗೆ ಮೀಸಲಾಗಿವೆ.  ಗಣೇಶ, ರಾಮ, ಶಾರದೆ, ಕೃಷ್ಣ, ದತ್ತದೇವ, ಆಂಜನೇಯ, ಸ್ವಾಮಿ ಅಯ್ಯಪ್ಪ, ಶಂಕರಾಚಾರ್ಯ, ರಾಘವೇಂದ್ರ ಪ್ರಭು ಇಂತೆಲ್ಲ ದೇವಸ್ತುತಿಗಳು, ದೈವಾರಾಧನೆಗೆ ಸಂಬಂಧಿಸಿದವುಗಳಾಗಿವೆ. ಮನೋನೆಮ್ಮದಿಗೆ, ಮನೋವಿಕಾಸಕ್ಕಾಗಿ, ಸಾತ್ವಿಕ ಮತ್ತು ಸಂಸ್ಕಾರ ಭಾವನೆಯ ಸಂವರ್ಧನೆಗಾಗಿ  ದೇವಸ್ತುತಿ ಅವಶ್ಯವಾದುದು. 

ರನ್ನಮೂರುತಿ ತಾಯೆ

ಸುರವಂಬೆ ಶಾರದೆಯೆ

ಕಾರುಣ್ಯದಿ ಕಾಯೆ

ವಿದ್ಯಾ ದೇವತೆಯನ್ನು ಭಕ್ತಿಭಾವದಿಂದ ನಮಿಸುತ್ತಾರೆ. 

'ಪಯಣಿಗ ಪಯಣಿಗ

ಬಾಳಿನೊಂದಿಗೆ ಕಾಳಗ'

'ಪಯಣಿಗ' ಕವನದಲ್ಲಿ ಬಾಳಿನ ದಾರಿಯಲ್ಲಿ ಸಾಗುವವರೆಲ್ಲ ಎಲ್ಲರೂ ಪಯಣಿಗರು.  ಸೋಲು ಗೆಲವುಗಳು ಸಾಮಾನ್ಯ, ದಿಟ್ಟ ಹೆಜ್ಜೆಯಿರಿಸಿ ಮುಂದೆ ಸಾಗಿ ಗುರಿ ತಲುಪುವದು ಜೀವನದ ಸಾರ್ಥಕತೆ ಎಂಬುದು ಇಲ್ಲಿಯ ಸಾರ. 

ಚಹಾ, ಚುಟ್ಟಾ, ಕರಾಪ್ ಎಲ್ಲಾ

ಒಕ್ಕೊಟ್ ಬಿಟ್ ನಿಂತಿದ್ದ ;

ಯಾದರ್ೊ ಗುಂಡಿಗೆ ಪ್ರಾಣಾ ಕೊಟ್ಟು

ಬುದ್ಧನ ಸಾಲಿಗೆ ಬಿದ್ದ

ಸತಂತ್ರ ಬಂತು ಭಾರ ಭುಮಿಗೆ. ಇದು ಗಾಂದೆಪ್ಪ ಕವನದಲ್ಲಿ ಗಾಂಧಿಯ ದೇಶಕ್ಕಾಗಿ ಗಾಂಧಿ ಮಾಡಿದ ತ್ಯಾಗ, ಹೋರಾಟ, ಅಹಿಂಸಾ ಮಂತ್ರ ಇಲ್ಲಿ ಜನಪದ ಶೈಲಿಯಲ್ಲಿ ನಿರೂಪಿತಗೊಂಡಿದೆ. 

ನಾ ಕರೆಯೇ ನೀ ಬರುವೆ

ನೀ ಬರಲು ನಾ ಕರೆವೆ

ಮಮತೆಯಾಜ್ಞೆಯದಂತಿರೆ

ನೀ ಬರಲು ಸವಿ ಶಾಂತಿ

ಇಲ್ಲ್ದಿರೆ ಮತಿ ಭ್ರಾಂತಿ

ಬಾಳ್ ಮೊಗ್ಗು ಕೋದಂತಿರೆ

'ಕವಿತೆಗೆ' ಕವನದಲ್ಲಿ ಕವಿ ತನ್ನ ಕವಿತೆಗಿರುವ ಅದಮ್ಯ ಮೋಹವನ್ನು ಪ್ರಕಟಿಸಿದ್ದಾರೆ. 

ಸಕ್ಕದ ಸವಿ, ಸಿಗದ ಜನಕೆ

ಕನ್ನಡದಲಿ ಧರ್ಮದರಿಕೆ

ನೀಡಿ'ವೀರಶೈವ' ಶುಭಕೆ

ದುಡಿದ ಕೀತರ್ಿ ಹರಡೆ ನಭಕೆ

'ಶೈವವೀರ ಬಸವಣ್ಣ' ಕವನದಲ್ಲಿ  ಕಾಯಕಯೋಗಿ ಅಣ್ಣನವರ ಜೀವನಾದರ್ಶ ಇಲ್ಲಿ ಸ್ಫುಟಗೊಂಡಿದೆ. 

ಇಲ್ಲಿಯ ಕವನಗಳೆಲ್ಲ ಬದುಕಿಗೆ, ಭಾವನೆಗೆ, ಭಕ್ತಿಗೆ, ಆಂತರಿಕ ಬೆಳಕಿಗೆ, ಪ್ರೀತಿ ಪ್ರೇಮಕ್ಕೆ ಮೀಸಲಾಗಿವೆ.  ಇವು ಓದುಗರ ಮನಗೆಲ್ಲಲು ಸಮರ್ಥವಾಗಿವೆ. ಈ ಹೊತ್ತಿಗೆಯನ್ನು ಹೊರತಂದ ಮಕ್ಕಳು ಧನ್ಯರಾಗಿದ್ದಾರೆ.