ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 
"ಸರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ"
ಸುಸ್ಥಿರ ಬದುಕಿಗೆ ಸರಳತೆ ಅಗತ್ಯ. ಇದು ಅಕ್ಷರಶಃ ಸತ್ಯ. ನಾವು ನಮ್ಮ ಪೂರ್ವಿಕರ ಹಾಗೂ ನಮ್ಮ ಜೀವನವನ್ನು ಹೋಲಿಕೆ ಮಾಡಿದರೆ ಅಜಗಜಾಂತರ ವ್ಯತ್ಯಾಸ ಕಾಣಬಹುದು. ಉದಾಹರಣೆಯೊಂದಿಗೆ ಹೇಳಬೇಕಾದರೆ ಆಸ್ಪತ್ರೆಗೆ ಹೋದಾಗ ಅಲ್ಲಿರುವ ಮಾತ್ರೆಗಳನ್ನು ತೆಗೆದುಕೊಂಡು ಬೇಗ ಗುಣಮುಖವಾಗುತ್ತೇವೆ. ಆದರೆ ಆ ನೋವು ಮತ್ತೆ ಕಾಣಿಸಿಕೊಳ್ಳುವುದು. ಇದು ಕ್ಷಣಿಕವಾದದ್ದು, ಆದರೆ ಆಯುರ್ವೇದಿಕ ಔಷಧಿಯನ್ನು ತೆಗೆದುಕೊಂಡರೆ ಶಾಶ್ವತ ಪರಿಹಾರವಾಗುವುದು. ಅದೇ ರೀತಿ ವೈಭವೋಪೇತ ಜೀವನವನ್ನು ನಡೆಸುತ್ತಾ ಹೋದರೆ ಆಸೆ ಆಕ್ಷಾಂಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿ ನಾವು ಹೆಣೆದ ಬಲೆಗೆ ಬಲಿಯಾಗಬೇಕಾಗುವುದು. ಅದಕ್ಕೆ ನಮ್ಮ ಬದುಕು ಸುಸ್ಥಿರವಾಗಲು ಸರಳತೆಯ ಅವಶ್ಯಕತೆಯಿದೆ. ಒಂದೆಡೆ ಕುಮಾರವ್ಯಾಸ ಹೇಳುವನು ವ್ಯಾಸ ರಚಿಸಿದ ಮಹಾಭಾರತವನ್ನು ಈಜಾಡಿ ಬಂದರು ವ್ಯಾಸವೆಂಬ ಗರ್ವ ನನ್ನಲ್ಲಿ ಇಲ್ಲ ಎಂದು. ಆದರೆ ಈಗಿನ ಆಧುನಿಕ ಯುಗದಲ್ಲಿ ಅದೆಲ್ಲಾ ಮರೆಯಲಾಗುತ್ತಿದೆ.
ಅದ್ಧೂರಿ, ವೈಭವ ಜೀವನವನ್ನು ನಡೆಸಲು ಸಕಲವೂ ಇದ್ದರೂ ಕೂಡಾ, ಸರಳತೆಯನ್ನು ಆರಿಸಿಕೊಂಡಿರುವ ನಮ್ಮ ಸುಧಾಮೂರ್ತಿ ಅಮ್ಮನವರನ್ನು ಕಾಣಬಹುದು. ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿಯವರನ್ನು ನೋಡಬಹುದು. ಹಾಗೆಯೇ ಬುದ್ಧ, ಬಸವ, ಮಹಾವೀರ ಅಂಬೇಡ್ಕರ್, ಗಾಂಧೀಜಿ ಹೇಳಿದಷ್ಟು ಪಟ್ಟಿ ದೊಡ್ಡದಾಗುತ್ತದೆ. ಇವರೆಲ್ಲರೂ ಕೂಡ ನಮ್ಮ ಸಮಾಜದಲ್ಲಿಯೇ ಜೀವನ ಸಾಗಿಸಿದ್ದಾರೆ. ಸಾಗಿಸುತ್ತಿದ್ದಾರೆಯೂ ಕೂಡಾ ಹಾಗೆಯೇ ನಾವು ವೈಭವ ಜೀವನ ನಡೆಸಲು ಅಥವಾ ಯಾರದ್ದೊ ನೋಡಿ ಅನುಕರಿಸಿದರೆ ಅದು ಪ್ರತಿಫಲವಾಗುವುದಿಲ್ಲ. ಎಲ್ಲಾ ಸಾಧಕರ ಜೀವನವನ್ನು ಕೆದಕಿ ನೋಡಿದಾಗ ಅವರು ಅವರ ಪೂವರ್ಿಕರು ಸರಳ ಜೀವನ ನಡೆಸಿದ್ದು ಕಂಡು ಬರುವುದು. ಸರಳ ಜೀವನವನ್ನು ನಡೆಸಿದ ನಮ್ಮ ಪೂರ್ವಿಕರು ಶತಾಯುಷಿಗಳಾದು. ಆದರೆ ಇವತ್ತಿನ ಪೀಳಿಗೆಯಲ್ಲಿ ಆಸೆ, ದ್ವೇಷ, ಮೋಸ, ಅಸೂಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣವೇ ವೈಭವೊಪೇತ ಜೀವನ ನಡೆಸುವುದು. ಇದ್ದುದರಲ್ಲಿ ಸಂತೃಪ್ತಿಯನ್ನು ಪಡೆಬೇಕೆ ವಿನಹ, ನಿಲುಕದ ನಕ್ಷತ್ರಕ್ಕೆ ಕೈಚಾಚಬಾರದು.
"ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು" ಇಲ್ಲದಿದ್ದರೆ ನಮ್ಮ ಏಳ್ಗೆಯನ್ನು ನಾವೇ ಹಾಳು ಮಾಡಿಕೊಂಡಂತಾಗುವುದು. ಒಟ್ಟಾರೆಯಾಗಿ ಹೇಳುವುದಾದರೆ "ಸರಳ ಜೀವನ ಸುಖೀ ಜೀವನ". ಬದುಕು ಸುಸ್ಥಿರವಾಗಿರಲು ಈ ಸೂತ್ರ ಪಾಲಿಸುವುದು ಅವಶ್ಯವಾಗಿದೆ.