ಪ್ರೈಮ್ ಮತ್ತು ನೆಟ್ಫ್ಲೆಕ್ಸನಲ್ಲಿ ವೀಕ್ಷಿಸಬೇಕಾದ ಕನ್ನಡ ಚಲನಚಿತ್ರಗಳು

ಟಿ ವಿಯ ಸುತ್ತ ಸುತ್ತುತ್ತಿದ್ದ ಸೋದರ ಸಂಬಂಧಿಗಳಾದ ನಾವು ಟವಿಯ ಮುಂದೆ ಕುಳಿತು ದೂರದರ್ಶನದ ರಾಗ ಮುಗಿಯುವುದನ್ನು ಕಾತುರದಿಂದ ಕಾಯುತ್ತಿದ್ದೆವು. ಪ್ರತಿ ರವಿವಾರ 4ಗಂಟೆಗೆ ತಪ್ಪದೇ ಕನ್ನಡ ಚಲನಚಿತ್ರವನ್ನು ವೀಕ್ಷಿಸುತ್ತಿದ್ದೆವು. ನೀವು 90ರ ದಶಕದ ಯಾರನ್ನಾದರೂ ಕೇಳಿದರೂ, ಪ್ರಾದೇಶಿಕ ಚಲನಚಿತ್ರವನ್ನು ಅವರು ಸ್ವೀಕರಿಸಿದ ಹಾಗೂ ಅವರು ವೀಕ್ಷಿಸಿದ ಪರಿಯನ್ನು ನಿಮಗೆ ವಿವರಿಸುತ್ತಾರೆ. ಆಗಿನ ಕಾಲದಲ್ಲಿ ಚಲನಚಿತ್ರಗಳಲ್ಲಿ ನಟರು ನಮ್ಮ ಮಾತೃಭಾಷೆಯಲ್ಲಿ ಮಾತಾಡುವುದನ್ನು ನೋಡುವುದು ಸಾಮಾನ್ಯವಾಗಿತ್ತು. 

ಆ ಚಲನಚಿತ್ರಗಳು ನಮ್ಮಂತ ಮಕ್ಕಳಿಗೆ ಇನ್ನು ಹೆಚ್ಚು ನಾಟಕೀಯತೆ, ಸೂಕ್ಷ್ಮತೆ ಹಾಗೂ ಸಾಹಸಮಯವಾಗಿ ಕಂಡಿದ್ದವು. ಸಂಗೀತವು ಭಾವಪೂರ್ಣ ಸಂಯೋಜನೆಗಳನ್ನು ಹೊಂದಿದ್ದವು. ಆ ಕಾಲದ ಚಲನಚಿತ್ರಗಳು ಇಂದಿನ ಚಲನಚಿತ್ರಗಳಂತೆ ಅಗ್ಗ ಹಾಗೂ ಅಶ್ಲೀಲತೆಗಳನ್ನೊಳಗೊಂಡಿರಲಿಲ್ಲ. ಕನ್ನಡ ಚಲನಚಿತ್ರಗಳನ್ನು ನೆನೆಯುವುದೆಂದರೆ ನನ್ನ ಬಾಲ್ಯವನ್ನು ನೆನಪಿಸಿಕೊಂಡಂತೆ. ಕನ್ನಡ ಚಲನಚಿತ್ರಗಳು ಮನೋರಂಜನೆಯೊಂದಿಗೆ ಉತ್ತಮ ಸಾರ ಎರಡನ್ನೂ ನೀಡುತ್ತಿದ್ದವು. ಈಗ ಪ್ರೇಕ್ಷಕರನ್ನು ತಲುಪಲು ಓಟಿಟಿ ಯಂತಹ ಉತ್ತಮ ಸಾಮಥ್ರ್ಯವುಳ್ಳ ವೇದಿಕೆ ದೊರೆತಿದೆ.

ಇಲ್ಲಿ ನೀವು ನೋಡಲೇಬೇಕಾದ ಕನ್ನಡ ಕೆಲವು ಚಲನಚಿತ್ರಗಳ ಪಟ್ಟಿ


ಶುದ್ಧಿ: ಕೆಲ ನೈಜ್ ಅಪರಾಧಗಳ ಮೇಲೆ ನಿರ್ಮಿಸಿದ ಚಿತ್ರ. ಇದು ನಿಮ್ಮ ಮುಂದೆ ಸಾಕ್ಷ್ಯ ಚಿತ್ರದಂಥೆ ಕಾಣುತ್ತದೆ. ಲೇಖಕ ಹಾಗೂ ನಿದರ್ೇಶಕ ಆದರ್ಶ ಈಶ್ಚರಪ್ಪಾ ಅವರು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಾಲ್ಪನಿಕವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ದೇಶದಲ್ಲಿ ಪರಂಪರೆ, ಸಂಪ್ರದಾಯದ ಹೆಸರಿನಲ್ಲಿ ಅಡಕವಾಕವಾಗಿರುವ ಬೂಟಾಟಿಕೆಯ ಪ್ರತಿಯೊಂದು ಅಂಶ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

ನೆಟ್ಫ್ಲೆಕ್ಸ್ ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು. 


ಹಂಬಲ್ ಪೊಲಿಟಿಸಿಯನ್ ನಾಗರಾಜ: 

ದ್ಯಾನೀಶ್ ಸೇಠ ನಟಿಸಿದ, ಸಾದ್ ಖಾನ್ ನಿರ್ದೇಶನದ ಈ ಚಿತ್ರವು ರಾಜಕಾರಣಿಗಳು ನೀಡುವ ಖಾಲಿ ಭರವಸೆಗಳ ಮೇಲೆ ವಿಡಂಬಣೆ ಆಧಾರಿತವಾಗಿದೆ. ಸೇಠ ನಾಗರಾಜ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಇವರ ಈ ಚಿತ್ರವನ್ನು ನೋಡಿದ ಮೇಲೆ ನಾನು ಅವರ ಬಹುದೊಡ್ಡ ಅಭಿಮಾನಿಯಾಗಿದ್ದೇನೆ.  ದ್ಯಾನೀಶ್ ಅವರು ನಟನೆಯನ್ನು ಎಷ್ಟು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆಂದರೆ, ಅವರ ಪಾತ್ರವು ವಿಶಿಷ್ಠವಾಗಿ ಆಸಕ್ತಿದಾಯಕವಾಗಿ ಮೂಡಿ ಬಂದಿದೆ. ಸೇಠ್ ಅವರ ರೇಡಿಯೋ ಸೈಟ್ನ ಜನಪ್ರಿಯತೆ ನಂತರ ಈ ಚಲನಚಿತ್ರವು ಒಂದು ಗೀತೆಯಾಯಿತು ಹಾಗೂ ಚಲನಚಿತ್ರದೊಂದಿಗೆ ಪಾತ್ರವನ್ನು ತೆರೆಗೆ ತರಲಾಯಿತು.

ಅಮೆಜಾನ್ ಪ್ರಾಮ್ನಲ್ಲಿ ಈ ಚಿತ್ರವನ್ನು ವಿಕ್ಷೀಸಬಹುದು.


ನಾಥೀಚ್ರಾಮಿ:

ಮಹಿಳೆ ತನ್ನ ಗಂಡನನ್ನು ಕಳೆದುಕೊಂಡ ನಂತರದ ಪ್ರೀತಿಯನ್ನು ಸಮಾಜ ನೋಡುವ ಪರಿ ಹಾಗೂ ಈ ಕಲ್ಪನೆಯನ್ನು ಸಾಮಾನ್ಯಗೊಳಿಸುವ ಸಮಯವಿದು ಎಂದು ಈ ಚಿತ್ರ ಒತ್ತಿಹೇಳುತ್ತದೆ. ಈ ಚಿತ್ರದಲ್ಲಿ ಶ್ರುತಿ ಹರಿಹರನ್ ವಿಧವೆಯ ಪಾತ್ರವನ್ನು ನಿಭಾಯಿಸಿದ್ದಾರೆ, ಅವರು ಇನ್ನೊಬ್ಬ ಸಂಗಾತಿಯನ್ನು ಹೊಂದುವುದು ತನ್ನ ಸತ್ತ ಗಂಡನಿಗೆ ಮಾಡುವ ಮೋಸವಿದು ಎಂದು ಅವರು ತಿಳಿದುಕೊಂಡಿದ್ದಾರೆ. ಈ ಚಿತ್ರವು ಮಹಿಳೆಯರು ತಮ್ಮ ಆಸೆ ಹಾಗೂ ಸಂದೇಹಗಳ ಬಗ್ಗೆ ನಮಗೆ ಯೋಚಿಸುವಂತೆ ಮಾಡುತ್ತದೆ.  ಅಲ್ಲದೇ ಮಹಿಳೆಯರು ತಮ್ಮ ನಿಜ ಜೀವನವನ್ನು ಕಥೆಯಂತೆ,ಪಿತೃಪ್ರಾಧಾನ ಸಮಾಜ ಬಯಸುವ ಹಾಗೆ  ಜೀವಿಸುವುದನ್ನು ಈ ಚಿತ್ರವು ಬಹಳ ಸುಂದರವಾಗಿ ವಿವರಿಸಿದೆ.

ನೆಟ್ಫ್ಲಿಕ್ಸ್ ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು


ಆ ಕರಾಳ ರಾತ್ರಿ:

ಒಂದು ಬಡ ಕುಟುಂಬ ಶ್ರೀಮಂತಗೊಳ್ಳಲು ಹಂಬಲಿಸುವ ಬಹಳ ರೋಮಾಂಚಕ ಕಥೆಯನ್ನು ಒಳಗೊಂಡಿದೆ. ತಮ್ಮ ಮನೆಗೆ ರಾತ್ರ ವಿಶ್ರಾಂತಿ ಪಡೆಯಲು ಬಂದ ಓರ್ವ ಶ್ರೀಮಂತ ವ್ಯಕ್ತಿಯನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಅನನುಭವಿ ಕೊಲೆಗಾರರು ತಮ್ಮ ಶ್ರೀಮಂತ ಅತಿಥಿಯನ್ನು ಕೊಲ್ಲಲು ಪ್ರಯತ್ನಿಸುವುದು ಸಾಕಷ್ಟು ಆಕರ್ಷಕವಾಗಿದೆ. ಇಷ್ಟು ನೋಡುವುದರಲ್ಲಿ ನೀವು ಈ ಚಿತ್ರಕ್ಕೆ ಮಾರುಹೋಗುತ್ತೀರಿ.

ಹೊಟ್ಸ್ಟಾರ್ನಲ್ಲಿ ವೀಕ್ಷಿಸಬಹುದು.


ಕಥೆಯೊಂದು ಶುರುವಾಗಿದೆ:

ದಿಗಂತ ಹಾಗೂ ಪೂಜಾ ದೇವರಿಯಾ ನಟನೆಯ ಈ ಚಿತ್ರ ಪ್ರೀತಿಯ ತತ್ವಜ್ಞಾನವನ್ನು ನೀಡುತ್ತದೆ. ಈ ಚಿತ್ರದಲ್ಲಿ ಇಬ್ಬರು ತಮ್ಮನ್ನು ತಾವು ಪರಸ್ಪರ ಅಥರ್ೈಸಿಕೊಳ್ಳಲು ಒಂದು ಸಣ್ಣ ಪ್ರವಾಸಕ್ಕೆ ಹೋಗಿರುತ್ತಾರೆ. ಇದು ವಿಭಿನ್ನ ವಯಸ್ಸಿನ ಎರಡು ಜೋಡಿಗಳನ್ನು ಒಳಗೊಂಡಿದೆ, ಮತ್ತು ಪಾತ್ರಗಳ ಆಸೆಗಳು ಪರಸ್ಪರ ವೈವಿಧ್ಯಮಯ ಅನುಭವಗಳು,ಸಾಮಾಜಿಕ ಸ್ತರಗಳೊಂದಿಗೆ ಭಿನ್ನವಾಗಿವೆ. ನಿರ್ದೇಶಕರಾದ ಸೆನ್ನಾ ಹೆಗಡೆ ಉತ್ತಮ ಕೆಲಸ ಮಾಡಿದ್ದಾರೆ. ನೀವು ಚಲನಚಿತ್ರ ನೋಡುವಾಗ ಅದು ನಿಮ್ಮ ಕಥೆಯಂತೆ ಭಾಸವಾಗುತ್ತದೆ. ನಿಮನ್ನು ಬೇರೆಯಾವುದೇ ವಸ್ತು ಆಕರ್ಷಿಸದಿದ್ದರೆ, ಈ ಚಿತ್ರ ನಮಗಾಗಿ ಸೂಕ್ತ.

ಅಮೆಜಾನ್ ಪ್ರಾಮ್ನಲ್ಲಿ ಈ ಚಿತ್ರವನ್ನು ವಿಕ್ಷೀಸಬಹುದು.