ತಾಲೂಕಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಶಾಸಕ ಪ್ರಕಾಶ್ ಕೋಳಿವಾಡ
There is no shortage of sowing seeds in the taluk: MLA Prakash Koliwada
ರಾಣೆಬೆನ್ನೂರು 27: ತಾಲೂಕಿನಲ್ಲಿ ಯಾವುದೇ ರೀತಿಯ ಬಿತ್ತನೆ ಬೀಜದ ಕೊರತೆ ಇಲ್ಲ ರೈತರು ಆತಂಕ ಪಡುವ ಅಗತ್ಯವೂ ಇಲ್ಲ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆದ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನದಿ ಪಾತ್ರದಲ್ಲಿ ಬರುವ ತಾಲೂಕಿನ ರೈತರು ಅಧಿಕ ಬೆಳೆಯ ನೀರೀಕ್ಷೆಯಲ್ಲಿ ಅಧಿಕ ಪ್ರಮಾಣದಲ್ಲಿ ಭತ್ತವನ್ನು ನಾಟಿ ಮಾಡಿದ್ದರು ಅವರ ನೀರೀಕ್ಷೆಯಂತೆ ಫಸಲು ಸಹ ಬಂದಿತ್ತು ಆದರೆ ಕೃತಿಕಾ ಮಳೆ ಪ್ರಭಾವ ರೈತರನ್ನು ವಂಚಿಸಿದೆ. ರೈತರು ದೃತಿ ಗೆಡುವ ಅಗತ್ಯವಿಲ್ಲ. ಮುಂಗಾರು ಹಂಗಾಮಿನ ಹಾನಿಗೆ ಪರಿಹಾರ ದೊರೆಯಲಿದೆ ಎಂದರು. ರೈತರು ಹೇಳುವಂತೆ ಸರ್ಕಾರ ನೀಡುವ ಹಾನಿ ಪರಿಹಾರ ಅ ವೈಜ್ಞಾನಿಕವಾಗಿದೆ ಎನ್ನುವ ಮಾತುಗಳು ಸತ್ಯವಾಗಿದ್ದರೂ, ವೈಜ್ಞಾನಿಕ ಬೆಲೆ ನೀಡಬೇಕಾದ ಅಗತ್ಯವು ಇಂದಿನದಾಗಿದೆ ಆದ್ದರಿಂದ ಈ ಕುರಿತು ಸರ್ಕಾರದೊಂದಿಗೆ, ಸದನದಲ್ಲಿ ಧ್ವನಿಯೆತಿದ್ದೇನೆ. ಈ ಕುರಿತು ಹಲವು ಶಾಸಕರು ನಮ್ಮ ಬೇಡಿಕೆ ಇಟ್ಟಿದ್ದಾರೆ ಸಮಾಲೋಚನೆ ನಡೆಸಿ, ವೈಜ್ಞಾನಿಕ ರೀತಿಯ ಪರಿಹಾರಕ್ಕೆ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು,
ಸರ್ಕಾರ ರೈತರ ಪರವಾಗಿದೆ. ಇಂದಿಲ್ಲ ನಾಳೆ, ರೈತರಿಗೆ ವೈಜ್ಞಾನಿಕ ವಾಗಿ ಹಾನಿ ಪರಿಹಾರ ಈಡೇರಿಸುವ ವಿಶ್ವಾಸ ತಮಗಿದೆ ಎಂದರು. ರೈತರು ಯಾವುದೇ ಕಾರಣಕ್ಕೂ ಬೀಜ ಗೊಬ್ಬರಕ್ಕಾಗಿ ಆತಂಕ ಪಡಬಾರದು ನಿಯಮಾನುಸಾರ ಪಡೆದುಕೊಳ್ಳಲು ಅವಕಾಶವಿದೆ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಕುರಿತು ರೈತರು ಚಿಂತನೆ ನಡೆಸಬೇಕು. ಈ ಕುರಿತಂತೆ ತಾವು ಇಗಾಗಲೇ ಸೂಕ್ತ ವ್ಯವಸ್ಥೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 