ದಿ.27 ಹಾಗೂ 28 ರಂದು ಎರಡು ದಿನಗಳ ಅದ್ದೂರಿ ಹಿಡಕಲ್ಲ ಶಿವಯೋಗಿ ಅಮೋಘಸಿದ್ದೇಶ್ವರರ ಜಾತ್ರಾ ಮಹೋತ್ಸವ
The two-day grand festival of Shivayogi Amoghasiddeshwara will be held on the 27th and 28th
ಪಾಲಬಾವಿ 24 : ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದಲ್ಲಿ ಶರಣ ಸದ್ಭಕ್ತರಾದ ಹನುಮಂತ ಅಂಬಣ್ಣ ಒಡೆಯರ ತೋಟದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶಿವಯೋಗಿ ಅಮೋಘಸಿದ್ದೇಶ್ವರ ಜಾತ್ರೆಯ ದಶಮಾನೋತ್ಸವವು ಹಾಗೂ ಲಕ್ಷದೀಪೋತ್ಸವ, "ಸಿದ್ಧರಭೇಟಿ" ಮಹೋತ್ಸವವು ಬರುವ ದಿ.27 ಹಾಗೂ 28 ರಂದು ಎರಡು ದಿನಗಳ ವರೆಗೆ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗುವುದು.ಬುಧವಾರ ದಿ:27 ರಂದು ಮುಂಜಾನೆ 6ಗಂಟೆಗೆ ಅಮೋಘಸಿದ್ದೇಶ್ವರ ಕರ್ತೃ ಗದ್ದಿಗೆ ಬಂಡಾರದ ಮಹಾಪೂಜೆ, ಅಭಿಷೇಕ ಹಾಗೂ ವಿಶೇಷಪೂಜೆ ಜರುಗುವುದು. ಮಧ್ಯಾಹ್ನ 3ಗಂಟೆಗೆ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ದರಭೇಟಿಯು ರಾಯಬಾಗ ತಾಲೂಕು ಅಳಗವಾಡಿ, ಯಬರಟ್ಟಿ, ಬಸ್ತವಾಡ, ಅಥಣಿ ತಾಲೂಕು ಕವಲಗುಡ್ಡ, ಜಮಖಂಡಿ ತಾಲೂಕು ಕುಂಚನೂರು, ಮೂಡಲಗಿ ತಾಲೂಕು ರಾಜಾಪುರ, ಚಿಕ್ಕೋಡಿ ತಾಲೂಕು ಬೆಳಕೂಡ ಗ್ರಾಮಗಳ ಸೇರಿದಂತೆ ಅನೇಕ ಗ್ರಾಮಗಳಿಂದ ಪಲ್ಲಕ್ಕಿ ದೇವರುಗಳ ಸಿದ್ದರಭೇಟಿ ಉತ್ಸವವು ಜರುಗುವುದು.
ಸಂಜೆ 7ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವು ಜರುಗುವುದು. ಕುಂಚನೂರು ಮಾದಣ್ಣ ದೇವರ ಗದ್ದಿಗೆಯ ಒಡೆಯರು ಶಿವಪ್ಪ ಒಡೆಯರ, ಮಖನಾಪುರ ಗುರುಪೀಠದ ಸೋಮಲಿಂಗೇಶ್ವರ ಮಹಾರಾಜರು, ಕವಲಗುಡ್ಡ ಅಮರೇಶ್ವರ ಮಹಾರಾಜರು, ಸೊಲ್ಲಾಪುರದ ಸಂಜಯ ಪಾಟೀಲ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು, ಸಹಕಾರ ಧುರೀಣ ಪ್ರತಾಪರಾವ ಪಾಟೀಲ, ಯುವ ಕೇಸರಿ ಶಿವರಾಜ ಪಾಟೀಲ, ಬಂಡಾರಕವಟೆಯ ಸಚಿನ ಪಾಟೀಲ, ಮುಗಳಖೋಡದ ಕಾಶಿಲಿಂಗ ಅಜ್ಜನವರು, ರಾಜಕೀಯ ನಾಯಕ ಸಾಹುಕಾರ್ ಮಹಾದೇವ ವಡಗಾವಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅದೇ ದಿನ ರಾತ್ರಿ 8ಗಂಟೆಗೆ ಮಹಾತ್ಮರಿಂದ ಧರ್ಮಸಭೆ: "ದುರಿತ ಕರ್ಮವನು ವಲ್ಲದಿರು ಪುಣ್ಯವನೇ ಮಾಡು" ಎಂಬ ವಿಷಯವನ್ನ ಆಧಾರವಾಗಿಟ್ಟುಕೊಂಡು ಎಲ್ಲ ಪೂಜ್ಯರು ಪ್ರವಚನ ನೀಡುವರು. ಮಖಣಾಪುರ ಗುರುಪೀಠದ ಸೋಮಲಿಂಗೇಶ್ವರ ಮಹಾರಾಜರು, ಮುಮ್ಮಟಗುಡ್ಡ ಸಿದ್ದಾಶ್ರಮ ಬನಸಿದ್ಧ ಮಹಾರಾಜರು ದಿವ್ಯ ಸಾನಿಧ್ಯವಹಿಸುವರು.
ಕವಲಗುಡ್ಡ ಸಿದ್ದಶ್ರಮದ ಅಮರೇಶ್ವರ ಮಹಾರಾಜರು, ಜಕನೂರು ಸಿದ್ದಾಶ್ರಮದ ಡಾ.ಮಾಧುಲಿಂಗ ಮಹಾರಾಜರು ಸಾನಿಧ್ಯವಹಿಸುವರು. ಚಿಂಚೋಳಿ ಬಿಳಿಯಾನಿ ಸಿದ್ಧ ಮಹಾರಾಜರು, ಹಡಗಿನಾಳ ಮತ್ತೇಶ್ವರ ಮಹಾರಾಜರು ಸನ್ನಿದಾನ ವಹಿಸುವರು. ಹಿಡಕಲ್ಲ ಶಾಖಾ ಬಬಲಾದಿ ಮಠದ ಸದಾಶಿವ ಮುತ್ಯ, ಹತ್ತೂರು ಬಣಸಿದ್ಧ ಮಹಾರಾಜರು, ಜೋಕಾನಟ್ಟಿ ಬಿಳಿಯಾನಿಸಿದ್ದ ಮಹಾರಾಜರು, ಹೆಬ್ಬಾಳಟ್ಟಿ ಸಿದ್ದರಾಮ ಮಹಾರಾಜರು, ಮುಗಳಖೋಡದ ಕಾಶೀಲಿಂಗ ಮಹಾರಾಜರು, ಬತಗುಣಕಿ ಅಮೋಘಸಿದ್ಧ ಮಹಾರಾಜರು ಸನ್ನಿಧಾನವಹಿಸಿ ಆಶೀರ್ವಚನ ನೀಡುವವರು. ನರಸಿಂಹವಾಡಿ ಗೋವಿಂದ ಕುಲಕರ್ಣಿ, ಬೇವರಿಗಿ ಧರ್ಮಗೌಡ್ರು ಮಹಾರಾಜರು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಪ್ರತಾಪರಾವ ಪಾಟೀಲ, ಸಂಜಯ ಪಾಟೀಲ, ಯುವಕೇಸರಿ ಶಿವರಾಜ ಪಾಟೀಲ, ರಾಜಕೀಯ ನಾಯಕರು ಸಚಿನ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ರಾತ್ರಿ 10ಗಂಟೆಗೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕು ಕಾತ್ರಾಳ ಗ್ರಾಮದ ಸಿದ್ದೇಶ್ವರ ನಾಟ್ಯ ಸಂಘ ಇವರಿಂದ " ಶ್ರೀ ಅಮೋಘಸಿದ್ಧ ಮಹಾತ್ಮೆ" ಅರ್ಥ "ಭಂಡಾರದ ಮಹಿಮೆ" ಎಂಬ ಭಕ್ತಿ ಪ್ರಧಾನ ಪೌರಾಣಿಕ ನಾಟಕವು ಪ್ರದರ್ಶನ ಗೊಳ್ಳುವುದು. ಗುರುವಾರ ದಿ:28ರಂದು ಮುಂಜಾನೆ 10 ಗಂಟೆಗೆ ಅಮೋಘಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಗಪ್ಪ ಸುಖಾಲಿ ಹಾಗೂ ಈರ್ಪ ಸುಖಾಲಿ ಇವರಿಂದ ಅಗ್ನಿ ಹಾಯುವ ಧಾರ್ಮಿಕ ಕಾರ್ಯಕ್ರಮವು ನೆರವೇರುವುದು. ಮುಂಜಾನೆ 11ಗಂಟೆಗೆ ಧರ್ಮ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿದ ಪೂಜ್ಯ ಮಹಾತ್ಮಾರಿಗೆ "ಗುರು ಸಮರೆ್ಣ" ನೆರವೇರುವುದು. ಮಧ್ಯಾಹ್ನ 12ಗಂಟೆಗೆ ಕೃಷ್ಣಾ ತೀರದ ಗಾನಕೋಗಿಲೆ ನಿಂಗಪ್ಪ ಬಿಳಗಿ ಕುಂಬಾರಹಳ್ಳ ಹಾಗೂ ಸಂಗಡಿಗರಿಂದ ಡೊಳ್ಳಿನ ಪದಗಳ ಹಾಡುಗರಿಕೆ ಕಾರ್ಯಕ್ರಮವು ಜರಗುವುದು.
ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ್ಣ ನೆರವೇರಿವುದೆಂದು ದೇವಸ್ಥಾನದ ಮುಖ್ಯಸ್ಥರು ಮಾಳಸಿದ್ದ ಒಡೆಯರ, ಭಕ್ತರಾದ ತುಕಾರಾಮ ಸೂರಣ್ಣವರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಗದ್ದುಗೆಯ ಪೂಜಾರಿಗಳು ಅಮ್ಮಣ್ಣ ಒಡೆಯರ, ಹಿರಿಯರಾದ ಮಾಳಸಿದ್ದು ಒಡೆಯರ, ತುಕಾರಾಮ ಸೂರಣ್ಣವರ, ಮಹಾದೇವ ಕಂಕಣವಾಡಿ, ವಿಠ್ಠಲ ಮಗದುಮ್ಮ, ಪ್ರಾಚಾರ್ಯ ಟಿ.ಎಸ್.ವಂಟಗೂಡಿ, ಸಿದ್ದಪ್ಪ ಕಂಕಣವಾಡಿ, ಸುಭಾಷ ಸೂರಣ್ಣವರ, ಕರೆಪ್ಪ ಸೂರಣ್ಣವರ, ಲಕ್ಷ್ಮಣ ಒಡೆಯರ, ವಿನಾಯಕ ಕಂಕಣವಾಡಿ, ಪ್ರತೀಕ್ ಮಿಸಿ, ಹನುಮಂತ ಒಡೆಯರ, ಮಲ್ಲಪ್ಪ ಸುಖಾಲಿ, ಲಗಮಣ್ಣ ಸೂರಣ್ಣವರ, ಬಸವರಾಜ ಜಗದಾಳ, ಸದಾಶಿವ ಗಲಗಲಿ, ರಾಮು ಸತ್ತಿ, ರವೀಂದ್ರ ಮಗದುಮ್ಮ, ರಮೇಶ ಕಂಕಣವಾಡಿ, ಮಲ್ಲಪ್ಪ ಢವಳೇಶ್ವರ, ಶ್ರೀಧರ ಗಲಗಲಿ, ಮಹೇಶ ಗಲಗಲಿ, ಅಶೋಕ ಗಲಗಲಿ, ಚನ್ನಪ್ಪ ಅಂಗಡಿ, ನಿಂಗಪ್ಪ ಬೀಳಗಿ ಇತರರು ಇದ್ದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 